ಚೆಯ್ಯಂಡಾಣೆ, ನ. ೨೦ : ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ತಾ. ೨೩ ರಿಂದ ೨೫ ರವರೆಗೆ ಮೊದಲ ವರ್ಷದ ಕಡಿಯತ್‌ನಾಡ್ ಹಾಕಿ ಕಪ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ ತಿಳಿಸಿದರು.

ಕರಡದಲ್ಲಿರುವ ಪ್ರಾಥಮಿಕ ಶಾಲಾ ಮೈದಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ಪಂದ್ಯಾಟ ನಡೆಯಲಿದೆ.

ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್ ನಾಡಿಗೆ ಒಳಪಟ್ಟ ಗ್ರಾಮಗಳ ೧೧ ತಂಡಗಳು ಹೆಸರು ನೋಂದಾಯಿಸಿವೆ ಎಂದರು.

ಕ್ರೀಡಾಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬೇಪುಡಿಯಂಡ ವಿಲಿನ್ ಮಾತನಾಡಿ, ಪ್ರಪ್ರಥಮ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಆಯೋಜನೆಯಾದ ಕರಡ ಮೈದಾನದಲ್ಲಿ ಮತ್ತೊಮ್ಮೆ ಕ್ರೀಡಾಕೂಟ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಒಟ್ಟು ೧೧ ತಂಡಗಳು ಭಾಗವಹಿಸಲಿದ್ದು ವಿಜೇತ ತಂಡಕ್ಕೆ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ತಾ. ೨೩ರಂದು ಉದ್ಘಾಟನಾ ಪಂದ್ಯಾಟವನ್ನು ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ ಉದ್ಘಾಟಿಸಲಿದ್ದಾರೆ.

ಫೈನಲ್ ಪಂದ್ಯಾಟ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವು ಕೊಡವ ಕಲ್ಚರಲ್ ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.

ಗೌರವಾನ್ವಿತ ಅತಿಥಿಗಳಾಗಿ ಮೆದುರ ಗಣು ಕುಶಾಲಪ್ಪ, ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಕೊಟ್ಟೋಳಿ, ರೀನಾ ಸುವರ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಸುದು ಬೋಪಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೇದುರ ಗಣು ಮೆದುರ ಗಣು ಕುಶಾಲಪ್ಪ, ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಕೊಟ್ಟೋಳಿ, ರೀನಾ ಸುವರ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಸುದು ಬೋಪಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷ ಬೆಲ್ಲು ಚರ್ಮಣ, ಭೀಮಯ್ಯ, ಅಚ್ಚಪ್ಪ, ಚಂಗAಡ ಕಿಶನ್, ಪಾಂಡAಡ ಕಿಶನ್, ಪ್ರಕಾಶ್, ಸುಧಾ, ಮಧು ಮಾದಯ್ಯ ,ಅಚ್ಚಯ್ಯ, ಅರುಣ್, ಪೂವಣ್ಣ, ಲೋಯಿತ್, ಮಿಥುನ್, ದೇವಯ್ಯ ಹಾಗೂ ಸದಸ್ಯರು ಹಾಜರಿದ್ದರು.