ಸುಂಟಿಕೊಪ್ಪ, ನ. ೨೦: ಅಗ್ನಿ ಬೆಳಕಿನ ಸಂಕೇತ ವಾಗಿದ್ದು ಅಗ್ನಿಯ ಅಂಶವಾಗಿರುವ ದೀಪಾರಾಧನೆ ಯಿಂದ ಮನೆ-ಮನಗಳಲ್ಲಿ ಜ್ಞಾನ ಜ್ಯೋತಿಯನ್ನು ಹಚ್ಚಿ ಮಕ್ಕಳಲ್ಲಿ ನಮ್ಮ ಧರ್ಮ, ಪರಂಪರೆ, ಆಚಾರ, ವಿಚಾರಗಳ ಅರಿವು ಮೂಡಿಸುವ ಕೆಲಸವಾಗಲೆಂದು ಸಿದ್ಧಲಿಂಗಪುರದ ಅರಶಿನಗುಪ್ಪೆಯ ಶ್ರೀ ಮಂಜುನಾಥ ಕ್ಷೇತ್ರದ ಮುಖ್ಯಸ್ಥರು ಮತ್ತು ಅಖಿಲ ಭಾರತ ಸಂತ ಸಮಿತಿಯ ಕೊಡಗು ಜಿಲ್ಲಾಧ್ಯಕ್ಷ ರಾಜೇಶ್‌ನಾಥ ಕರೆ ನೀಡಿದರು.

ಸುಂಟಿಕೊಪ್ಪದ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಭಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಧಾರ್ಮಿಕ ಉಪನ್ಯಾಸ ನೀಡಿದ ಅವರು, ಕೊರೊನಾ ಬಂದ ಸಂದರ್ಭದಲ್ಲಿ ತುಳಸಿ ಗಿಡದ ಮಹತ್ವ, ಮನೆಯ ಮುಂದೆ ಸಗಣಿ ಸಾರಿಸಿ ಶುದ್ಧತೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಕಂಡುಕೊAಡೆವು. ಆದರೆ ನಮ್ಮ ಹಿರಿಯರು ಪದ್ಧತಿ-ಪರಂಪರೆಗಳ ಆಚರಣೆಯ ಹಿನ್ನಲೆಯಲ್ಲಿ ಬಹಳ ಹಿಂದೆಯೇ ಇದನ್ನು ಕಂಡುಕೊAಡಿದ್ದರು. ಕೃಷಿ ನಮ್ಮ ಬೆನ್ನಲುಬು ಆಗಿದ್ದು ಮನೆಯಂಗಳದಲ್ಲಿ ತರಕಾರಿ, ಹೂವಿನ ಗಿಡದೊಂದಿಗೆ ಸಾವಯವ ಕೃಷಿಗೆ ಆದ್ಯತೆ ನೀಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಜಾತ್ಯತೀತ ಮತ್ತು ಧರ್ಮಾತೀತ ನೆಲೆಗಟ್ಟಿನಲ್ಲಿ ದೇಶಪ್ರೇಮವನ್ನು ಮೈಗೂಡಿಸಿಕೊಂಡು ನೆಲ-ಜಲ, ಪರಿಸರ, ಪಶು, ಪಕ್ಷಿ, ಪ್ರಾಣಿ ಸಂರಕ್ಷಣೆ ಮಾಡಿ ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಅವರು ತಾವು ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದು, ಧರ್ಮಸ್ಥಳ ಕ್ಷೇತ್ರವು ಜನಮನ ಗೆದ್ದ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನಕ್ಕೆ ಪ್ರೋತ್ಸಾಹ ನೀಡಿ ಮನೆ ಮಾತಾಗಿದೆ. ವಿಶೇಷವಾಗಿ ಮಹಿಳೆಯರನ್ನು ಸಬಲೆಯನ್ನರಾಗಿ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಆರ್ಥಿಕ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯಕಾರಿಯಾಗಿದ್ದು ನಮ್ಮ ಧರ್ಮ, ಪರಂಪರೆ ಮತ್ತು ನಾಗರಿಕತೆ ಉಳಿಯುವಲ್ಲಿ ತನ್ನದೆಯಾದ ಕೊಡುಗೆ ನೀಡಿದೆ ಎಂದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ನಾವೆಲ್ಲಾರೂ ಒಗ್ಗಟಿನಿಂದ ಮೇಲುಕೀಳುಗಳನ್ನು ಬಿಟ್ಟು ಒಂದಾಗಿ ಹೋಗುವ ನಿಟ್ಟಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರೇರಣದಾಯಕ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಧರ್ಮಸ್ಥಳ ಸಂಘದಿAದ ಸುಂಟಿಕೊಪ್ಪ ಹಿಂದೂ ರುದ್ರಭೂಮಿಯಲ್ಲಿ ಸಿಲಿಕಾನ್ ಛೇಂಬರ್ ಅಳವಡಿಸಿದ್ದು ಅದು ಇದೀಗ ಶಿಥಿಲಗೊಂಡಿದೆ. ಈ ಬಗ್ಗೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು ಶ್ರೀ ಕ್ಷೇತ್ರದ ನೆರವನ್ನು ಕೇಳಿ ಮನವಿ ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಮಾತನಾಡಿದರು.