ಪಾಲಿಬೆಟ್ಟ, ನ. ೧೯: ಪಾಲಿಬೆಟ್ಟ ಲಯನ್ಸ್ ಕ್ಲಬ್ ಹಾಗೂ ಮಡಿಕೇರಿಯ ‘ಇಕ್ಷಾ’ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಪಾಲಿಬೆಟ್ಟದ ಲಯನ್ಸ್ ಸೇವಾ ಭವನ “ಅನುಗ್ರಹ”ದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಪಾಲಿಬೆಟ್ಟ ಹಾಗೂ ಸಿದ್ದಾಪುರ ಸುತ್ತಮುತ್ತಲ ಗ್ರಾಮಗಳಿಂದ ಆಗಮಿ ಸಿದ್ದ ನೂರಾರು ಮಂದಿ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.
ಇಕ್ಷಾ ಕಣ್ಣಿನ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ. ಎ.ಜಿ. ಚಿಣ್ಣಪ್ಪ ಶಿಬಿರಾ ರ್ಥಿಗಳಿಗೆ ತಪಾಸಣೆ ನಡೆಸಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಅನಂತರಾಮ್ ಮಾತನಾಡಿ, ಹಲ ವಾರು ಸಮಾಜಮುಖಿ ಕಾರ್ಯಕ್ರಮ ಗಳನ್ನ ಲಯನ್ಸ್ ಕ್ಲಬ್ ಹಮ್ಮಿಕೊಂಡು ಬರುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ ಪಾಲಿಬೆಟ್ಟದ ಲಯನ್ಸ್ ಕ್ಲಬ್ ಸೇವಾ ಮನೋಭಾವದೊಂದಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆಯೊAದಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಸಂಘಟನೆಗಳನ್ನ ಗೌರವಿಸಬೇಕಾಗಿದೆ ಎಂದರು.
ಈ ಸಂದರ್ಭ ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ, ಖಜಾಂಚಿ ಭವಿಷ್ಯ ಕುಮಾರ್, ಪ್ರಮುಖರಾದ ಡಾ.ಎ. ಸಿ. ಗಣಪತಿ, ಎಂ. ಎಸ್.ಠವಿ, ಸ್ವರೂಪ್, ಚಿತ್ರ ಆನಂತರಾಮ್, ಮೀರಾ ಸುಬ್ರಮಣಿ, ಅನಿತಾ ರಾಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.
-ಪುತ್ತಂ ಪ್ರದೀಪ್