ಗೋಣಿಕೊಪ್ಪ ವರದಿ, ನ. ೨೦ : ಮಾಯಮುಡಿ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಬೊಡಿನಮ್ಮೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೩೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಗಮನ ಸೆಳೆದರು.
ಪಾಯಿಂಟ್ ೨೨, ೧೨ ನೇ ಬೋರ್, ಏರ್ ಗನ್ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ಪಾಯಿಂಟ್ ೨೨ ವಿಭಾಗದಲ್ಲಿ ಮಣವಟ್ಟೀರ ಪೊನ್ನು ಪ್ರಥಮ, ಅಜ್ಜೇಟೀರ ಗೌತಂ ದ್ವಿತೀಯ, ಪುಗ್ಗೇರ ರಾಜೇಶ್ ದ್ವಿತೀಯ, ೧೨ ನೇ ಬೋರ್ ವಿಭಾಗದಲ್ಲಿ ರಮೇಶ್ ಬಾಬು (ಪ್ರ), ಕೆಚ್ಚೀರ ವಿಜು (ದ್ವಿ), ಪುದಿಯೊಕ್ಕಡ ಪೂಣಚ್ಚ (ತೃ), ಏರ್ ಗನ್ ವಿಭಾಗದಲ್ಲಿ ಬಡುವಂಡ ಧನು ದೇವಯ್ಯ (ಪ್ರ), ರಮೇಶ್ ಬಾಬು (ದ್ವಿ), ಬಡುವಂಡ ಶ್ಲೋಕ್ (ತೃ) ಸ್ಥಾನ ಪಡೆದರು.
ವೈದ್ಯ ಡಾ. ಬಲ್ಲಣಮಾಡ ನಿಖಿಲ್ ನಂಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಚೆರಿಯಪಂಡ ರಾಜ ನಂಜಪ್ಪ, ಮಹಿಳಾ ಬ್ಯಾಂಕ್ ಮಾಜಿ ಅಧ್ಯಕ್ಷೆ ಕಂಜಿತAಡ ಸ್ವಾತಿ ಸುಬ್ರಮಣಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಕಾಫಿ ಬೆಳೆಗಾರ ಪಾಂಡAಡ ರವಿ, ವಮ್ಷಿ ಮಾರ್ಲ ಕಂಪೆನಿ ಪ್ರಮುಖರಾದ ಚಿಂಡಮಾಡ ನಾಚಪ್ಪ, ಮುಕ್ಕಾಟೀರ ಬೋಪಣ್ಣ, ಕಾರ್ಯಕ್ರಮ ಸಂಚಾಲಕ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಸೇವಾ ಸಮಿತಿ ಗೌ. ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ಅಧ್ಯಕ್ಷ ವಿನು ವಿಶ್ವನಾಥ್ ಬಹುಮಾನ ವಿತರಿಸಿದರು.