ಮಡಿಕೇರಿ, ನ. ೧೯: ಜಿಲ್ಲೆಯಲ್ಲಿ ಸಾರ್ವ ಜನಿಕವಾಗಿ ಗುರುತಿ ಸಲ್ಪಟ್ಟಿದ್ದ ಅಮ್ಮತ್ತಿಯ ಕಾಫಿ ಬೆಳೆಗಾರ, ಸಮಾಜ ಸೇವಕರಾಗಿದ್ದ ಮೂಕೋಂಡ ಬೋಸ್ ದೇವಯ್ಯ (೬೦) ಅವರು ಆಕಸ್ಮಿಕವಾಗಿ ನಡೆದ ಅವಘಡದಲ್ಲಿ ದುರಂತ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಈ ಅನಿರೀಕ್ಷಿತ ಘಟನೆ ವಿಧಿಯಾಟಕ್ಕೆ ಸಾಕ್ಷಿ ಎಂಬAತಾಗಿದ್ದು ತಮ್ಮ ಮನೆ ಯಂಗಳದಲ್ಲೇ ಇವರು ಅವಘಡದಲ್ಲಿ ವಿಧಿವಶ ರಾಗಿದ್ದಾರೆ. ಇಂದು ಬೆಳಿಗ್ಗೆ ಇವರ ಮನೆ ಕೆಲಸಕ್ಕೆಂದು ಕೇರಳದಿಂದ ಇಟ್ಟಿಗೆ ಯನ್ನು ಲಾರಿಯೊಂದ ರಲ್ಲಿ ತರಲಾಗಿತ್ತು. ಈ ಲಾರಿಯನ್ನು ಹಿಂಬದಿಗೆ ತೆಗೆಯುತ್ತಿದ್ದ ಸಂದರ್ಭ ಲಾರಿ ಇವರ ಮನೆಯಂಗಳ ದಲ್ಲಿದ್ದ ನಾಯಿಗೂಡಿಗೆ ತಗುಲದಂತೆ ಇವರು ಚಾಲಕನಿಗೆ ಸೂಚನೆ ನೀಡಲು ಮುಂದಾಗಿದ್ದರು. ಈ ಸಂದರ್ಭ ಲಾರಿ ಬೋಸ್ ದೇವಯ್ಯ ಅವರಿಗೆ ಡಿಕ್ಕಿ ಯಾಯಿತು. ಘಟನೆಯ ಬಳಿಕ ತಕ್ಷಣ ಲೋಪಾ ಮುದ್ರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಷ್ಟರಲ್ಲೇ ಕೊನೆ ಯುಸಿರೆಳೆದಿದ್ದರು.
ಬಿಜೆಪಿ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಇವರು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾಗಿ ಮೂರು ಅವಧಿಗೆ (ಹತ್ತು ವರ್ಷ) ಕಾರ್ಯ ನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು. ಗೋಣಿಕೊಪ್ಪ ಎ.ಪಿ.ಎಂ.ಸಿ ಅಧ್ಯಕ್ಷರಾಗಿ, ಅಮ್ಮತ್ತಿ ಎ.ಪಿ.ಎಂ.ಸಿ ಅಧ್ಯಕ್ಷರಾಗಿ, ಸ್ಥಳೀಯ ಚೇಂಬರ್ ಅಧ್ಯಕ್ಷರಾಗಿ, ಅಖಿಲ ಕೊಡವ ಸಮಾಜದ ನಿರ್ದೇಶಕರಾಗಿ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳಲ್ಲೂ ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದರು. ಈ ಹಿಂದೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಬೋಸ್ ದೇವಯ್ಯ ಕೆಲಸ ಮಾಡಿದ್ದರು.
(ಮೊದಲ ಪುಟದಿಂದ) ಕಳೆದ ಕೆಲವು ವರ್ಷಗಳಿಂದ ಮೈಸೂರು ಕಾಫಿ ಪ್ರೊಸೆಸಿಂಗ್ ಕೋ-ಆಪರೇಟಿವ್ ಸೊಸೈಟಿ (ಎಂ.ಸಿ.ಪಿ.ಸಿ.ಎಸ್)ಯ ಆಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿ ಈ ಸಮಿತಿಯ ಸಂಚಾಲಕರಾಗಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಉಳಿಸಿಕೊಳ್ಳುವ ಆಶಾಭಾವನೆಯಲ್ಲಿದ್ದರು. ಕೊಡಗಿನ ಹಲವು ಸಂಘ-ಸAಸ್ಥೆಗಳೂ ಎಂ.ಸಿ.ಪಿ.ಎಸ್.ನ ಸದಸ್ಯತನ ಹೊಂದಿದ್ದು ಇದರ ಮರು ಅಸ್ತಿತ್ವದ ಅವರ ಕನಸು ಇದೀಗ ಕನಸಾಗಿಯೇ ಉಳಿದಂತಾಗಿದೆ. ಹಸನ್ಮುಖಿಯೂ, ಸ್ನೇಹಜೀವಿಯೂ ಆಗಿದ್ದ ಬೋಸ್ ದೇವಯ್ಯ ಅವರ ಕಣ್ಮರೆ ಬಹುತೇಕರಲ್ಲಿ ನೋವು ಮೂಡಿಸಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೦ರಂದು (ಇಂದು) ಬೆ.೯ಕ್ಕೆ ಸ್ವಗ್ರಾಮ ಅಮ್ಮತ್ತಿ ಮುಂಡೋಣಿಯಲ್ಲಿ ನಡೆಯಲಿದೆ.
ಸಂತಾಪ: ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಸಿಎನ್ಸಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ, ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಬೋಸ್ ದೇವಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಮ್ಮತ್ತಿ ಕೊಡವ ಸಮಾಜ ಆಡಳಿತ ಮಂಡಳಿಯು ಸಂತಾಪ ವ್ಯಕ್ತಪಡಿಸಿದೆ. ಅಮ್ಮತ್ತಿ ಚೇಂಬರ್ ಆಫ್ ಕಾಮರ್ಸ್ನ ಸಲಹೆಗಾರರು ಆಗಿದ್ದ ಬೋಸ್ ದೇವಯ್ಯ ಅವರ ಗೌರವಾರ್ಥ ತಾ. ೨೦ರಂದು (ಇಂದು) ಬೆಳಿಗ್ಗೆ ೧೦ ರಿಂದ ೧೨ ಗಂಟೆವರೆಗೆ ಅಮ್ಮತ್ತಿ ಬಂದ್ ಮಾಡಲಾಗುವುದು ಎಂದು ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.