ಟಿ ಮೈನವಿರೇಳಿಸಿದ ರೋಬಸ್ಟಾ ರ‍್ಯಾಲಿ ಮುಕ್ತಾಯ ಟಿ ಕೊಡಗಿನ ಅಭಿನ್ ರೈ ‘ರೈಸಿಂಗ್ ಸ್ಟಾರ್’

ಪಾಲಿಬೆಟ್ಟ, ನ. ೨೦: ಕಾಫಿ ತೋಟಗಳ ನಡುವಿನ ದುರ್ಗಮ ಹಾದಿಯಲ್ಲಿ ನಡೆದ ರಾಷ್ಟçಮಟ್ಟದ ರೋಬಸ್ಟಾ ರ‍್ಯಾಲಿ ಜನರ ಮೈ ನವಿರೇಳಿಸುವಲ್ಲಿ ಯಶಸ್ವಿಯಾಗಿದ್ದು, ಆಟೋಕ್ರಾಸ್‌ನ ಸಮಗ್ರ ಚಾಂಪಿಯನ್ನರಾಗಿ ದೆಹಲಿಯ ಹರಿಕೃಷ್ಣ ವಾದಿಯ ಹಾಗೂ ಹಿಮಾಚಲ ಪ್ರದೇಶದ ಕುನಾಲ್ ಕಶ್ಯಪ್ ಹೊರಹೊಮ್ಮಿದರು. ಕೊಡಗಿನ ಅಭಿನ್ ರೈ ‘ರೈಸಿಂಗ್ ಸ್ಟಾರ್’ ಪ್ರಶಸ್ತಿಗೆ ತಮ್ಮದಾಗಿಸಿಕೊಂಡರು.

ಬ್ಲೂ ಬ್ಯಾಂಡ್ ಎಫ್.ಎಂ.ಎ.ಸಿ.ಐ. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್ ಅಕಾಡೆಮಿ ವತಿಯಿಂದ ನಡೆದ ರೋಬಸ್ಟಾ-೨೦೨೩ ರ‍್ಯಾಲಿಯ ಅಂತಿಮ ದಿನದಂದು ಹೊಸಳ್ಳಿ ಹಾಗೂ ಮಾರ್ಗೊಳ್ಳಿ ಕಾಫಿ ತೋಟಗಳಲ್ಲಿ ನಡೆಯಿತು.

ವಿವಿಧ ವಿಭಾಗದ ವಿಜೇತರ ವಿವರ

ಅರೋರ ವಿಕ್ರಂ ರಾವ್- ಸೌಮ್ಯ ಜೋಡಿ ದ್ವಿತೀಯ ಹಾಗೂ ಜಾಹನ್ ಸಿಂಗ್ ಗಿಲ್- ಸೂರಜ್ ಕೇಶವ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಐಎನ್‌ಆರ್‌ಸಿ ೨ ವಿಭಾಗದಲ್ಲಿ ಹರಿಕೃಷ್ಣ ವಾದಿಯ- ಕುನಾಲ್ ಕಶ್ಯಪ್ ಪ್ರಥಮ, ಅರೋರ ವಿಕ್ರಂ ರಾವ್- ಎ.ಜಿ.ಸೋಮಯ್ಯ ದ್ವಿತೀಯ, ಡರಿಯೋಸ್ ಶೋಫ್- ಶಹೀದ್ ಸಲ್ದಾನ್ ತೃತೀಯ ಬಹುಮಾನ ಪಡೆದುಕೊಂಡರು.

ಐಎನ್‌ಆರ್‌ಸಿ ೩ ವಿಭಾಗದಲ್ಲಿ ಜಾಹನ್ ಸಿಂಗ್ ಗಿಲ್- ಸೂರಜ್ ಕೇಶವ ಪ್ರಸಾದ್ ಪ್ರಥಮ, ಶಶಾಂಕ್ ಜಾಮ್ಮೆಲ್- ಆಶೀಶ್ ಶರ್ಮಾ ದ್ವಿತೀಯ, ಡರಿಯೋಸ್ ಶೋಫ್- ಶಹೀದ್ ಸಲ್ಮಾನ್ ತೃತೀಯ ಸ್ಥಾನ ಪಡೆದುಕೊಂಡರು.

ಐಎನ್‌ಆರ್‌ಸಿ ೪ ವಿಭಾಗದಲ್ಲಿ ಅಭಿನ್ ರೈ- ಅರವಿಂದ್ ಧೀರೇಂದ್ರ ಪ್ರಥಮ, ವಿವೇಕ್ ಉತ್ತುಪರ್ಣ ಅಥೇರಿಯ ಕೌಸಗಿ ದ್ವಿತೀಯ, ಸಫೀಕುದೀಲ್ - ವಿ.ಅರುಣ್ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.

ಜಿವೈಪಿಎವೈ ವಿಭಾಗದಲ್ಲಿ ಮಿಚ್ಚು ಗಣಪತಿ- ವೇಣು ರಮೇಶ್ ಕುಮಾರ್ ಪ್ರಥಮ, ಅಭಿಷೇಕ್ ಗೌಡ- ಧೀರಜ್ ಮನೆ ದ್ವಿತೀಯ, ಜಯಂತ್ ಸೋಮನಾಥನ್ - ಆರ್.ರಾಜಶೇಖರ್ ತೃತೀಯ ಬಹುಮಾನ ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ಅನುಶ್ರೀಯಾ ಗುಲಟಿ- ಶೇರ್ವೇನ್ ಪ್ರಥಮ, ಶಿವಾನಿ- ಅರ್ಜುನ್ ಧೀರೇಂದ್ರ ದ್ವಿತೀಯ, ಪ್ರಗತಿ ಗೌಡ- ತ್ರಿಶಾ ಅಲ್ಲೋಕರ್ ತೃತೀಯ, ಜೂನಿಯರ್ ಐಎನ್‌ಆರ್‌ಸಿ ವಿಭಾಗದಲ್ಲಿ ಜಾಹನ್ ಸಿಂಗ್ ಗಿಲ್ - ಸೂರಜ್ ಕೇಶವ ಪ್ರಸಾದ್ ಪ್ರಥಮ, ಅಭಿನ್ ರೈ- ಅರವಿಂದ್ ಧೀರೇಂದ್ರ ದ್ವಿತೀಯ, ವಿವೇಕ್ ರುತ್ತುಪೂರ್ಣ- ಅಥೇರಿಯಾ ಕೌಸಂಗಿ ತೃತೀಯ ಬಹುಮಾನ ಪಡೆದಿದ್ದಾರೆ. ಕೊಡಗಿನ ಅಭಿನ್ ರೈ ‘ರೈಸಿಂಗ್ ಸ್ಟಾರ್’ ಟ್ರೋಪಿ ತನ್ನದಾಗಿಸಿಕೊಂಡರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ರ‍್ಯಾಲಿಪಟುಗಳಿಗೆ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ಬ್ಲೂ ಬ್ಯಾಂಡ್‌ನ ಪ್ರಮುಖರಾದ ಪ್ರೇಮ್ ನಾಥ್, ಮೂಸ ಶರೀಫ್, ರೋಬಸ್ಟಾ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್ ಅಕಾಡೆಮಿಯ ಕುಂಞAಡ ಮಹೇಶ್ ಅಪ್ಪಯ್ಯ, ಉದ್ದಪಂಡ ತಿಮ್ಮಣ್ಣ, ಅಪ್ಪಣ್ಣ, ಜಮ್ಮಡ ಸೋಮಣ್ಣ, ಸೇರಿದಂತೆ ಮತ್ತಿತರರು ಹಾಜರಿದ್ದರು.

- ಪುತ್ತಂ ಪ್ರದೀಪ್