ಐಗೂರು, ನ. ೧೯: ಕಾಜೂರಿನ ಶ್ರೀ ಹರಿಹರ ಯುವಕ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ನಡೆಯಿತು. ಶ್ರೀ ಹರಿಹರ ಯುವಕ ಸಂಘದ ಅಧ್ಯಕ್ಷರಾಗಿ ಜಿ.ಕೆ. ಅವಿಲಾಶ್ ಅವರು ಪುನರಾಯ್ಕೆ ಯಾದರು. ಉಪಾಧ್ಯಕ್ಷರಾಗಿ ಟಿ.ಕೆ. ಭಾಸ್ಕರ್, ಕಾರ್ಯದರ್ಶಿಯಾಗಿ ಟಿ.ಎಸ್. ರಕ್ಷಿತ್, ಉಪ ಕಾರ್ಯದರ್ಶಿಯಾಗಿ ಎಂ.ಕೆ. ಮೋಹನ ಖಜಾಂಚಿಯಾಗಿ ಹೆಚ್.ಕೆ. ವಸಂತ್ ಆಯ್ಕೆಯಾದರು. ಆಡಳಿತ ಮಂಡಳಿಯ ನಿರ್ದೇಶಕರಾಗಿ ಟಿ.ಆರ್. ವಿಜಯ್, ಟಿ.ಬಿ. ಶಶಿ, ಬಿ.ಸಿ. ಪ್ರಭಾಕರ, ಕೆ.ಎಂ. ಗೋಪಾಲಕೃಷ್ಣ ಟಿ.ಎಸ್. ಸುಧಿ, ಬಿ.ಸಿ. ಪ್ರದೀಪ್, ಎಂ.ಜಿ. ಸುಗು ಅವರು ಆಯ್ಕೆಯಾಗಿದ್ದಾರೆ.