ಸೋಮವಾರಪೇಟೆ, ನ. ೨೦: ಸಹಜವಾಗಿ ಕುಣಿಯುವ ಕಲೆಯೇ ಜಾನಪದ ನೃತ್ಯ. ಇದು ಹೃದಯದಿಂದ ಬರುವ ಭಾವನೆ ಹಾಗೂ ಕಲೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕರೆ ನೀಡಿದರು.

ಇಲ್ಲಿನ ಜೇಸಿ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಸ್ಥಳೀಯ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿರುವ ಜೇಸೀ ಸಪ್ತಾಹ ಕಾರ್ಯಕ್ರಮದಲ್ಲಿ ಮೂಡಿ ಬಂದ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜಾನಪದ ನೃತ್ಯ ಹಾಗೂ ಸಂಸ್ಕೃತಿಯು ಶ್ರೇಷ್ಠವಾಗಿದೆ. ಬ್ರಿಟಿಷ್ ಆಡಳಿತವೂ ಸಹ ಜಾನಪದಕ್ಕೆ ಮಾರುಹೋಗಿತ್ತು. ಬಾಹ್ಯ ಸೌಂದರ್ಯಕ್ಕಿAತ ಆಂತರಿಕ ಸೌಂದರ್ಯ ಮುಖ್ಯ. ಪರಿಷತ್ ಸದಸ್ಯರು ಒಗ್ಗಟ್ಟಿನಿಂದ ಜಾನಪದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ ಎಂದ ಅವರು, ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಜಾನಪದ ಕಲೆ, ಬದುಕು, ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಅವರು, ಜನಪದದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮಿಳಿತಗೊಂಡಿದೆ. ಜಾನಪದ ಕ್ರೀಡೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಅದ್ಬುತವಾಗಿದೆ. ಸಂಸ್ಕೃತಿಯ ಕಲಬೆರೆಕೆ ನಿಲ್ಲಬೇಕು. ಜನಪದ ಸಂಸ್ಕೃತಿಗೆ ಯಾವುದೇ ಮಿತಿಯಿಲ್ಲ. ಇದನ್ನು ರಕ್ಷಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಾನಪದ ಪರಿಷತ್ ಶ್ರಮ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಲಯ ಪೂರ್ವ ಉಪಾಧ್ಯಕ್ಷೆ ಮಮತ ಮಾತನಾಡಿ, ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಜೇಸೀ ಸಂಸ್ಥೆ ತಳಪಾಯವಾಗಿದೆ. ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನ, ಜೀವನ ರೂಪಿಸಿಕೊಳ್ಳುವ ಮನಸ್ಥಿತಿ ಯನ್ನು ಸಂಸ್ಥೆ ನಿರ್ಮಿಸುತ್ತದೆ ಎಂದರು.

ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್ ಮಾತನಾಡಿ, ಅಂತರರಾಷ್ಟಿçÃಯ ಮಟ್ಟದಲ್ಲಿ ಸಮಾಜಸೇವೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಜೇಸೀ ಸಂಸ್ಥೆಯು ಈ ಮಣ್ಣಿನ ಸೊಗಡಿನ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಜೇಸೀ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ವಹಿಸಿದ್ದರು. ವೇದಿಕೆಯಲ್ಲಿ ಜೆ.ಸಿ. ನಿಯೋಜಿತ ಅಧ್ಯಕ್ಷ ಎಸ್.ಆರ್. ವಸಂತ್, ಯೋಜನಾ ನಿರ್ದೇಶಕಿ ವಿನುತ ಸುದೀಪ್, ಜೇಸೀ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್ ಉಪಸ್ಥಿತರಿದ್ದರು. ಜೇಸೀ ಸಂಸ್ಥೆಯ ವಿದ್ಯಾ ಸೋಮೇಶ್, ಅರುಣ್, ಪವಿತ್ರ, ಕಸ್ತೂರಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಹಾಗೂ ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಅವರನ್ನು ಸನ್ಮಾನಿಸಲಾಯಿತು. ನಂತರ ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಸ್ಪರ್ಧೆ ನಡೆಯಿತು. ಪವಿತ್ರ ಹಾಗೂ ಮಂಜುಳಾ ಸುಬ್ರಮಣಿ ಕಾರ್ಯಕ್ರಮ ನಿರ್ವಹಿಸಿದರು