ಸೋಮವಾರಪೇಟೆ, ನ. ೧೯: ದೇಶದಲ್ಲಿ ಸಹಕಾರ ಸಂಸ್ಥೆಗಳು ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಮೂಲ ಬುನಾದಿ ಸಹಕಾರ ಸಂಸ್ಥೆಗಳಾಗಿವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಸೋಮವಾರಪೇಟೆ ತಾಲೂಕು ಸಹಕಾರ ಒಕ್ಕೂಟ, ಪಿಕಾರ್ಡ್ ಬ್ಯಾಂಕ್, ಎ.ಪಿ.ಸಿ.ಎಂ.ಎಸ್., ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘ, ವಿವಿಧೋದ್ದೇಶ ಸಹಕಾರ ಸಂಘ, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ, ಶ್ರೀರಾಮಪತ್ತಿನ ಸಹಕಾರ ಸಂಘ,ಮಹಿಳಾ ಸಹಕಾರ ಸಂಘ, ಸಹಕಾರ ಇಲಾಖೆ ನೌಕರರ ಸಹಕಾರ ಸಂಘ, ಒಕ್ಕಲಿಗರ ಸೌಹಾರ್ದ ಸಹಕಾರ ಸಂಘಗಳ ಆಶ್ರಯದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ-ಮಹಿಳೆಯರು, ಯುವ ಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶವು ಸಹಕಾರ ಕ್ಷೇತ್ರದಲ್ಲಿ ೨೦೨೮ರ ವೇಳೆಗೆ ೫ ಟ್ರಿಲಿಯನ್ ಡಾಲರ್ ಪ್ರಗತಿಯ ಗುರಿಯನ್ನು ಹೊಂದಿದೆ. ಆ ಮೂಲಕ ಕೃಷಿಕರಿಗೆ ಸಂಘ, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ, ಶ್ರೀರಾಮಪತ್ತಿನ ಸಹಕಾರ ಸಂಘ,ಮಹಿಳಾ ಸಹಕಾರ ಸಂಘ, ಸಹಕಾರ ಇಲಾಖೆ ನೌಕರರ ಸಹಕಾರ ಸಂಘ, ಒಕ್ಕಲಿಗರ ಸೌಹಾರ್ದ ಸಹಕಾರ ಸಂಘಗಳ ಆಶ್ರಯದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ-ಮಹಿಳೆಯರು, ಯುವ ಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶವು ಸಹಕಾರ ಕ್ಷೇತ್ರದಲ್ಲಿ ೨೦೨೮ರ ವೇಳೆಗೆ ೫ ಟ್ರಿಲಿಯನ್ ಡಾಲರ್ ಪ್ರಗತಿಯ ಗುರಿಯನ್ನು ಹೊಂದಿದೆ. ಆ ಮೂಲಕ ಕೃಷಿಕರಿಗೆ ಕ್ಷೇತ್ರದ ಉಳಿವು-ಬೆಳವಣಿಗೆ ಅತೀ ಮುಖ್ಯ. ಸಮಾಜದ ಎಲ್ಲಾ ವರ್ಗಕ್ಕೂ ಸಹಕಾರ ಕ್ಷೇತ್ರ ತಲುಪಬೇಕು. ಸಮಾಜದಲ್ಲಿ ಶ್ರೀಮಂತರು-ಬಡವರ ಅಂತರ ಕಡಿಮೆಯಾಗಬೇಕು. ಯುವ ಸಮುದಾಯ ಸಹಕಾರ ಕ್ಷೇತ್ರದತ್ತ ಮನಸ್ಸು ಮಾಡಬೇಕು ಎಂದರು.
ದಿನದ ಮಹತ್ವದ ಕುರಿತು ಕೆ.ಡಿ.ಸಿ.ಎಂ. ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕ ಅವರು ವಿಚಾರ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ.ಪರಮೇಶ್ ವಹಿಸಿ ಮಾತನಾಡಿ, ಸಹಕಾರ ಸಂಘಗಳು ದೀನ ದುರ್ಬಲರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು. ಸಹಕಾರಿಗಳು ನಿಸ್ವಾರ್ಥಸೇವೆಗೆ ಸಿದ್ಧರಿರಬೇಕು ಎಂದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್ ಕುಮಾರ್, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ದಿವಾನ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ಕಾಫಿ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ಮಾದಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ನಾಪಂಡ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.