ಮಡಿಕೇರಿ, ನ. ೨೧: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಾರುಮುಡಿ ಗ್ರಾಮದ ವಾರ್ಡ್ಸಭೆ ತಾ. ೨೨ ರಂದು (ಇಂದು) ಮುತ್ತಾರುಮುಡಿ ಮಹಿಳಾ ಸಮಾಜ ಕಟ್ಟಡದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಪಿ.ಎಸ್. ರೀತಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೨ ರಂದು ಕೋಡಂಬೂರು ಗ್ರಾಮದ ವಾರ್ಡ್ಸಭೆ ಅಂಗನವಾಡಿ ಕಟ್ಟಡದಲ್ಲಿ ಅಪರಾಹ್ನ ೨ ಗಂಟೆಗೆ ಎಂ.ವೈ. ಲತಾ ಅಧ್ಯಕ್ಷತೆಯಲ್ಲಿ ಜರುಗಲಿದೆ.

ತಾ. ೨೩ ರಂದು ಐಕೊಳ ಗ್ರಾಮದ ವಾರ್ಡ್ಸಭೆ ಐಕೊಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಾಹ್ನ ೧೧ ಗಂಟೆಗೆ ಎಂ.ಜೆ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೩ ರಂದು ಕಾಂತೂರು ಗ್ರಾಮದ ವಾರ್ಡ್ಸಭೆ ಪಂಚಾಯಿತಿ ಸಭಾಭವನದಲ್ಲಿ ಅಪರಾಹ್ನ ೨ ಗಂಟೆಗೆ ಈರ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. ೨೪ ರಂದು ಎಂ. ಬಾಡಗ ಗ್ರಾಮದ ವಾರ್ಡ್ಸಭೆ ದವಸ ಭಂಡಾರ ಕಟ್ಟಡದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಹೆಚ್.ಎನ್. ನಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೪ ರಂದು ಕಿಗ್ಗಾಲು ಗ್ರಾಮದ ವಾರ್ಡ್ಸಭೆ ಚಾಮುಂಡೇಶ್ವರಿ ಯುವಕ ಸಂಘದ ಕಟ್ಟಡದಲ್ಲಿ ಅಪರಾಹ್ನ ೨ ಗಂಟೆಗೆ ಬಿ.ಎಸ್. ರೇಖಾ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಡಿಸೆಂಬರ್ ೭ ರಂದು ಕಾಂತೂರು-ಮೂರ್ನಾಡು ಗ್ರಾಮಸಭೆ ಪಂಚಾಯಿತಿ ಸಮುದಾಯ ಭವನದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಬಿ.ಎಸ್. ಕುಶನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.