ಪೊನ್ನಂಪೇಟೆ, ನ. ೨೧: ಪೊನ್ನಂಪೇಟೆ ರಸ್ತೆಯಲ್ಲಿರುವ ಭವಾನಿ ಲಿಕ್ಕರ್ಸ್ ಬಳಿ ತಾ.೧೯ ರಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಬಾಲ (೬೫) ಎಂಬ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಎ.೧೨ ಹೆಚ್. ೪೫೪೧ ನೋಂದಣಿ ಸಂಖ್ಯೆಯ ಬೈಕ್ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ರಭಸಕ್ಕೆ ತಲೆಯ ಭಾಗಕ್ಕೆ ಗಾಯವಾಗಿ, ಆತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದು, ಆತನ ವಾರಸುದಾರರು ಪತ್ತೆಯಾ ಗದ ಹಿನ್ನೆಲೆಯಲ್ಲಿ ಶವವನ್ನು ಕೆ.ಆರ್. ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ.

ಮೃತ ವ್ಯಕ್ತಿಯು ಸಾಧಾರಣ ಮೈಕಟ್ಟು ಹಾಗೂ ಕಪ್ಪು ಬಣ್ಣ ಹೊಂದಿದ್ದು, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಸಿಮೆಂಟ್ ಬಣ್ಣದ ಲುಂಗಿ ಧರಿಸಿರುತ್ತಾರೆ. ಮೃತನ ಸಂಬAಧಿಕರು ಯಾರಾದರೂ ಇದ್ದಲ್ಲಿ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ೦೮೨೭೨-೨೨೯೦೦೦, ವೀರಾಜಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕರು ೦೮೨೭೪-೨೪೭೪೮೮, ಗೋಣಿಕೊಪ್ಪ ವೃತ್ತ ನಿರೀಕ್ಷಕರು ೦೮೨೭೪-೨೪೭೨೦೯, ಪೊನ್ನಂಪೇಟೆ ಪೊಲೀಸ್ ಠಾಣೆ ಉಪನಿರೀಕ್ಷಕರು ೦೮೨೭೪-೨೪೯೦೪೪ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.