ಕಣಿವೆ, ನ. ೨೧: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಕೃಷಿಕರು ಬೆಳೆದ ಭತ್ತದ ಫಸಲು ಸಂಪೂರ್ಣವಾಗಿ ಕಾಡಾನೆಗಳ ಪಾಲಾಗುತ್ತಿದೆ ಎಂದು ಗ್ರಾಮ ನಿವಾಸಿ ಚೆಂಗಚAಡ ಗಣೇಶ್ ಕಾರ್ಯಪ್ಪ ಆರೋಪಿಸಿದ್ದಾರೆ.

ಆನೆಕಾಡು ಅರಣ್ಯದ ಅಂಚಿನಲ್ಲಿ ರುವ ಗ್ರಾಮದಲ್ಲಿ ಅರಣ್ಯದಿಂದ ಧಾವಿಸುವ ಕಾಡಾನೆಗಳ ಹಿಂಡು ತಂಡೋಪತAಡವಾಗಿ ಬಂದು ಬೆಳೆಯನ್ನೆಲ್ಲಾ ತುಳಿದು ತಿಂದು ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಇಲಾಖೆಯಿಂದ ಪರಿಹಾರದ ಹಣ ಬರುತ್ತಿಲ್ಲ.

ಅರಣ್ಯದ ಸುತ್ತ ಕಾಡಾನೆಗಳು ಧಾವಿಸದಂತೆ ಸೋಲಾರ್ ತಂತಿ ಬೇಲಿ ಅಥವಾ ರೈಲು ಕಂಬಿಯ ಬೇಲಿಯನ್ನೂ ಅಳವಡಿಸುತ್ತಿಲ್ಲ ಎಂದು ದೂರಿರುವ ಸ್ಥಳೀಯರು, ನಾವು ಬೆಳೆದ ಕಾಫಿ, ಬಾಳೆ, ಅಡಕೆ, ತೆಂಗು ಹಾಗೂ ಭತ್ತದ ಫಸಲು ಕಾಡಾನೆಗಳ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿ ಗಳು ಭೇಟಿ ನೀಡಿ ಜಂಟಿಯಾಗಿ ನಷ್ಟದ ವಿವರ ಕೈಗೊಳ್ಳಬೇಕು ಹಾಗೂ ರೈತರಿಗೆ ಪ್ರತೀ ವರ್ಷವೂ ಆಗುತ್ತಿರುವ ಬೆಳೆ ಹಾನಿಯ ಪರಿಹಾರದ ಹಣವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.