ವೀರಾಜಪೇಟೆ, ನ. ೨೧ : ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿತಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವೀರಾಜಪೇಟೆಯ ವಿದ್ಯಾನಗರದ ನಿವಾಸಿ ರಶೀದ ಶಿಕ್ಷೆಗೆ ಒಳಗಾದ ಮಹಿಳೆ. ರಶೀದ ರೂ. ೧.೫೦ ಲಕ್ಷ ಸಾಲವನ್ನು ವೀರಾಜಪೇಟೆ ಸಿಲ್ವ ನಗರದ ದೇಯಂಡ ನ್ಯಾನ್ಸಿ ಸುಬ್ಬಯ್ಯ ಎಂಬವರಿAದ ಪಡೆದು ಚೆಕ್ ನೀಡಿದ್ದರು. ನಂತರದಲ್ಲಿ ರಶೀದ ಹಣ ಹಿಂದಿರುಗಿಸಲಿಲ್ಲ. ಚೆಕ್ಕನ್ನು ನಗದಿಕರಿಸಲು ಬ್ಯಾಂಕಿಗೆ ಸಲ್ಲಿಸಿದಾಗ ಸಾಕಷ್ಟು ಹಣವಿಲ್ಲ ಎಂಬ ಕಾರಣದಿಂದ ಚೆಕ್ ಅಮಾನ್ಯಗೊಂಡಿದೆ. ನ್ಯಾನ್ಸಿ ಸುಬ್ಬಯ್ಯ ವೀರಾಜಪೇಟೆ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲು ಮಾಡಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಧೀಶರಾದ ಸಂತೋಷ್ ಕೊಠಾರಿ ಅವರು ಪ್ರಕರಣದ ಆರೋ ಪಿತರು ದೂರುದಾರರಿಗೆ ರೂ. ೧.೬೨ ಲಕ್ಷ ಪಾವತಿಸುವಂತೆ ಮತ್ತು ರೂಪಾಯಿ ರೂ. ೩ ಸಾವಿರ ಸರ್ಕಾರಕ್ಕೆ ದಂಡ ಪಾವತಿಸುವಂತೆ ತಪ್ಪಿದಲ್ಲಿ ಆರು ತಿಂಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪನ್ನು ನೀಡಿ ಆದೇಶಿಸಿದ್ದಾರೆ. ದೂರುದಾರರ ಪರವಾಗಿ ವಕೀಲ ಎ.ಆರ್. ರಂಜನ್ ವಾದ ಮಂಡಿಸಿದ್ದಾರೆ.