ಮಡಿಕೇರಿ, ನ. ೨೧ : ಮಡಿಕೇರಿಯ ಡಿಪಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಿ. ೩ರಂದು ಜಿಲ್ಲಾಮಟ್ಟದ ಮಿಸ್ಟಿ ಕಪ್ ಕಬಡ್ಡಿ ಪಂದ್ಯಾಟವನ್ನು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಸದಸ್ಯ ಬೊಳ್ಳಜಿರ ಬಿ. ಅಯ್ಯಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊಡಗಿನ ಕಬಡ್ಡಿ ಕ್ರೀಡಾಪಟು ಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ನಿಟ್ಟಿನಲ್ಲಿ ಮಡಿಕೇರಿಯ ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾಕೌಟ್ ಮಾದರಿಯ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಹರಿಯಾಣದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಡಿರುವ ಕಬಡ್ಡಿ ಕ್ರೀಡಾಪಟು ಹೊಟ್ಟೆಯಂಡ ಸಚಿನ್ ಪೂವಯ್ಯ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ ಗಂಟೆಗೆ ನಡೆಯಲಿರುವ ಪಂದ್ಯಾವಳಿಯನ್ನು ರಾಷ್ಟಿçÃಯ ತರಬೇತುದಾರ ಮಂಜುನಾಥ್ ಹಾಗೂ ರಾಷ್ಟಿçÃಯ ಕಬಡ್ಡಿ ಆಟಗಾರ ಶಶಿಧರ್ ಉದ್ಘಾಟಿಸಲಿದ್ದಾರೆ. ಡಿಪಿ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಆಸ್ಟಾç ಕಾಫಿ ಲಿಂಕ್ಸ್ ಮಾಲೀಕ ಕುಮಾರ್, ಅರ್ಜುನ ಪ್ರಶಸ್ತಿ ವಿಜೇತ ಸಿ. ಹೊನ್ನಪ್ಪ ಗೌಡ, ಬೆಂಗಳೂರಿನ ಬಿಎಂಟಿಸಿಯ ಗಂಗಾ ಹನುಮಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಪಾಲ್ಗೊಳ್ಳಲಿದ್ದಾರೆ.

ಪಂದ್ಯಾವಳಿಯಲ್ಲಿ ಪ್ರಥಮ ವಿಜೇತ ತಂಡಕ್ಕೆ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಹಾಗೂ ನಾಲ್ಕನೆ ಸ್ಥಾನ ಪಡೆದ ತಂಡಕ್ಕೆ ತಲಾ ರೂ. ೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ಪಂದ್ಯಾವಳಿಯಲ್ಲಿ ೧೫ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಆಸಕ್ತ ತಂಡಗಳು ನವೆಂಬರ್ ೩೦ರ ಒಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೮೭೬೨೮೮೦೩೫೫, ೬೩೬೨೦೯೯೫೨೫ ಸಂಪರ್ಕಿಸಬಹು ದಾಗಿದೆ ಎಂದು ಅಯ್ಯಪ್ಪ ಮಾಹಿತಿಯಿತ್ತರು. ಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಹೊಟ್ಟೆಯಂಡ ಸಚಿನ್ ಪೂವಯ್ಯ, ಕಾರ್ಯದರ್ಶಿ ಕಾಂಗೀರ ಗಗನ್, ಖಜಾಂಚಿ ದಿಲೀಪ್ ತೋರೆರ, ಸದಸ್ಯರಾದ ಪ್ರದೀಪ್ ಕಂಡಕೆರೆ, ಪೊನ್ನಚೆಟ್ಟಿರ ಪ್ರದೀಪ್ ಉಪಸ್ಥಿತರಿದ್ದರು.