ಮಡಿಕೇರಿ, ನ. ೨೧ : ತಾ. ೨೩ ರಿಂದ ೨೫ ರವರೆಗೆ ಮಡಿಕೇರಿ ಕೊಡವ ಸಮಾಜದ ಮಂದ್‌ನಲ್ಲಿ ಪುತ್ತರಿ ಈಡ್ ನಡೆಯಲಿದೆ ಎಂದು ಮಡಿಕೇರಿ ಕೊಡವ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಧಾನ್ಯಲಕ್ಷಿö್ಮಯನ್ನು ಮನೆಗೆ ತುಂಬಿಕೊಳ್ಳುವ ಪುತ್ತರಿ ನಮ್ಮೆಯನ್ನು ಈ ಬಾರಿ ತಾ. ೨೭ರಂದು ಆಚರಿಸಲು ನಿಗದಿಪಡಿಸಲಾಗಿದೆ. ಅದರಂತೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಡಿಕೇರಿಯ ಕೊಡವ ಸಮಾಜದ ಮಂದ್‌ನಲ್ಲಿ ಹಲವು ವರ್ಷಗಳಿಂದ ನಡೆದು ಬಂದAತೆ ಪುತ್ತರಿ ಹಬ್ಬಕ್ಕೆ ಮುಂಚಿತವಾಗಿ ಪುತ್ತರಿ ಈಡನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ತಾ.೨೩ರಂದು ಸಂಜೆ ೬.೩೦ಕ್ಕೆ ಸಮಾಜದ ಸದಸ್ಯರುಗಳು, ಕೊಡವ ಕೇರಿಯವರು ಸೇರಿ ಕೊಡವರ ಸಂಸ್ಕೃತಿಯ ಕೇಂದ್ರವಾದ ಮಂದ್‌ನಲ್ಲಿ ಸೇರಿ ದೇವನೆಲೆಯಲ್ಲಿ ದೀಪವಿಟ್ಟು ಪುರುಷರು ಮೂರು ದಿನ ಕೋಲಾಟ್, ಬೊಳಕಾಟ್ ತರಬೇತಿ ನಡೆಸಲಾಗುವುದೆಂದು ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ತಿಳಿಸಿದರು.

ತಾ. ೨೭ರ ರಾತ್ರಿ ಮಡಿಕೇರಿ ಕೊಡವ ಸಮಾಜದಲ್ಲಿ ಸೇರಿ ನೆರೆಕಟ್ಟಿ ಕದಿರು ತೆಗೆದು ಪುತ್ತರಿ ನಮ್ಮೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಿದ್ದು, ಡಿಸೆಂಬರ್ ೨೪ರ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ಊರೋರ್ಮೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದ್ದು, ಊಟೋಪಚಾರದ ನಂತರ ಮಡಿಕೇರಿ ಕೊಡವ ಸಮಾಜದ ಮಂದ್‌ನಲ್ಲಿ ಕೋಲಾಟ್ ಬೊಳಕಾಟ್, ಉಮ್ಮತಾಟ್ ಹಾಗೂ ವಾಲಗತಾಟ್ ಪ್ರದರ್ಶನ ನಡೆಯಲಿದೆ.