ಮುಳ್ಳೂರು, ನ. ೨೧: ಸಮೀಪದ ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ಜೀರ್ಣೋ ದ್ಧಾರಗೊಂಡ ನೂತನ ದೇವಾಲ ಯದ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮ ತಾ. ೨೪ ರಂದು ನಡೆಯಲಿದೆ. ದೇವಾಲಯ ಲೋಕಾ ರ್ಪಣೆ ಅಂಗವಾಗಿ ತಾ. ೨೨ರಂದು (ಇಂದಿನಿAದ) ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ ೪ ಗಂಟೆಯಿAದ ೬.೩೦ ಗಂಟೆಯವರೆಗೆ ಕಲಸಗಳೊಂದಿಗೆ ಶ್ರೀ ಅಮ್ಮನವರ ಗಂಗಾಸ್ಥಾನಕ್ಕೆ ತೆರಳಿದ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನವನ್ನು ಪ್ರವೇಶಿಸಿ ನಂತರ ಗೋ ಪ್ರವೇಶ, ದಿಕ್ಪಾಲಕ ಬಲಿ, ರಾಕ್ಷೆÆÃಗ್ನ ಹೋಮ, ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೨೩ರಂದು ಬೆಳಿಗ್ಗೆ ೮ ಗಂಟೆಗೆ ಕಲಸ ಸ್ಥಾಪನೆ ನಂತರ ಗಣಪತಿ ಹೋಮ, ದಿಕ್ಪಾಲಕ ಹೋಮ, ಮಧ್ಯಾಹ್ನ ೨ ಗಂಟೆಯಿAದ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ ಸೇರಿದಂತೆ ವಿವಿಧ ಹೋಮ ಹವನ, ಪೂಜಾ ವಿಧಿ ವಿಧಾನಗಳು ನಡೆಯಲಿವೆ. ತಾ. ೨೪ ರಂದು ಬೆಳಗ್ಗಿನ ಜಾವ ಶ್ರೀ ಕನ್ನಂಬಾಡಿ ಅಮ್ಮನವರ ಪ್ರತಿಷ್ಠಾಪನೆ ನಂತರ ಬೆಳಿಗ್ಗೆ ೮ ಗಂಟೆಯಿAದ ೧೦ ಗಂಟೆವರೆಗೆ ಶ್ರೀ ಅಮ್ಮನವರಿಗೆ ಪವಮಾನಾಭಿಷೇಕ, ಅಲಂಕಾರ, ಕಾತ್ಯಾಯಿನಿ ಹೋಮ, ಅಮ್ಮನವರ ಅಲಂಕಾರ ನಂತರ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

ತಾ. ೨೪ ರಂದು ಬೆಳಿಗ್ಗೆ ೧೦.೩೦ಕ್ಕೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತಪೋವನ ಮನೆಹಳ್ಳಿ ಮಠಾಧೀಶ ರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯ ಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎಚ್. ರೋಹಿತ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.