ಮಡಿಕೇರಿ, ನ. ೨೧: ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ವಾರ್ಷಿಕ ಮಹಾ ಸಭೆ ಕೊಡವ ಸಮಾಜದಲ್ಲಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ನಾಪೋಕ್ಲಿನ "ಪೊನ್ನಮ್ಮ ಕಾವೇರಿಯಪ್ಪ ಕಾಂಪ್ಲೆಕ್ಸ್" ನಲ್ಲಿ ಇರುವ ಮಳಿಗೆಯನ್ನು ಪ್ರಾರಂಭಿಸಿದ ನಂತರ ರೈತ ಆಸಕ್ತಿ ಗುಂಪಿನಾನುಸಾರ ನೂರಾರು ಟನ್ ಉತ್ತಮ ಗುಣಮಟ್ಟದ ಕೃಷಿ, ಸುಣ್ಣ ಮತ್ತು ಡೋಲೋಮೈಟನ್ನು ಸಂಸ್ಥೆಯಿAದ ‘ಜಸ್ಟ್-ಇನ್-ಟೈಮ್’ ಇನ್ವೆಂಟರಿ ಮೂಲಕ ದಾಸ್ತಾನು ಇಲ್ಲದೆ, ಮುಂಗಡ ಬುಕ್ಕಿಂಗ್ ಮೂಲಕ ಯಶಸ್ವಿಯಾಗಿ ಸರಬರಾಜು ಮಾಡಿದ ಸಂಸ್ಥೆಯ ಕಾರ್ಯವನ್ನು ಮನು ಮುತ್ತಪ್ಪ ಶ್ಲಾಘಿಸಿದರು.

ಕರಿಮೆಣಸು, ಕಾಫಿ ವ್ಯಾಪಾರವನ್ನು ಈ ವರ್ಷದಲ್ಲಿ ಆರಂಭಿಸಿದರ ಕುರಿತಾಗಿ ಮಾಹಿತಿ ನೀಡಿದ ಅವರು, ಹೆಚ್ಚು ರೈತರು ಇದರ ಉಪಯೋಗ ಪಡೆದುಕೊಳ್ಳಲು ಉತ್ತೇಜಿಸಿದರು. ಪ್ರಸ್ತುತ ಹೊಸ ೫೦೦+ ಕೃಷಿಕರು ಸದಸ್ಯತ್ವ ಪಡೆದುಕೊಳ್ಳುತ್ತಿರುವುದರಿಂದ ನಾಪೋಕ್ಲು ಹೋಬಳಿಯ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ರೈತರನ್ನು ಆರ್ಥಿಕವಾಗಿ ಸದೃಢರಾಗಿಸಲು ಅನೇಕ ವಿಶೇಷ ರೈತಪರ ಚಟುವಟಿಕೆಗಳನ್ನು ಜಾರಿಗೆ ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ಡಿಪಾರ್ಟ್ಮೆಂಟ್ ಆಫ್ ಮಾರ್ಕೆಟಿಂಗ್ ಇನ್ಫಾçಸ್ಟçಕ್ಚರ್ ಅಧಿಕಾರಿಗಳಾದ ರವೀಂದ್ರ ಅವರು ಕೇಂದ್ರ ಸರಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ವಿನಯ, ಕೋಡಿರ ಪ್ರಸನ್ನ, ಕಾಟ್ಮಣಿಯಂಡ ಉಮೇಶ್ ಅವರು ಹಾಜರಿದ್ದರು. ಸಂಸ್ಥೆಯ ಸದಸ್ಯತ್ವ ಪಡೆದ ರೈತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಅಲ್ಲದೆ ಈಶಾ ಔಟ್ರೀಚ್ ಕೊಯಂಬತ್ತೂರು ಇಲ್ಲಿನ ಸ್ವಯಂ ಸೇವಕರು, ಮಾಸ್ವಾಮಿಗಳು, ಸಿಬ್ಬಂದಿ ವರ್ಗ, ಡೊಮೈನ್ ಎಕ್ಸಪರ್ಟ್ಗಳು, ಕರ್ನಾಟಕ ರಾಜ್ಯ ಈಶಾ ರೈತ ಉತ್ಪಾದಕ ಸಂಸ್ಥೆಗಳ ಸಂಯೋಜಕರಾದ ರಮಾ ಪ್ರಿಯ, ಕೊಡಗು ಜಿಲ್ಲಾ ಈಶಾ ರೈತ ಉತ್ಪಾದಕ ಸಂಸ್ಥೆಗಳ ಸಂಯೋಜಕರಾದ ಪವಿತ್ರ ಹಾಜರಿದ್ದು, ಸಂಸ್ಥೆಯ ಕಾರ್ಯ ಚಟುವಟಿಕೆಗಳ ಪ್ರಸ್ತುತಿ ನೀಡಿದರು. ಮುಕ್ಕಾಟಿರ ವಿನಯ ಅವರು ಸ್ವಾಗತಿಸಿದರು. ಶ್ರೀ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು. ಪವಿತ್ರ ಅವರು ನಿರೂಪಿಸಿದರು.