ಉತ್ತರಾಕಾಶಿ, ನ. ೨೧: ಕಳೆದ ೧೦ ದಿನಗಳ ಹಿಂದೆ ಉತ್ತರಾಕಾ ಶಿಯಲ್ಲಿ ಸಂಭವಿಸಿದ ಸುರಂಗ ಕುಸಿತ ಘಟನೆಯಲ್ಲಿ ಸಿಲುಕಿಕೊಂಡಿರುವ ಸುರಂಗದೊಳಗಿನ ೪೧ ಕಾರ್ಮಿಕರ ವೀಡಿಯೋ ಚಿತ್ರವು ಇಂದು ಲಭಿ ಸಿದೆ. ಎಲ್ಲ ಕಾರ್ಮಿಕರು ಸುರಕ್ಷಿತವಾ ಗಿದ್ದು, ರಕ್ಷಣಾ ತಂಡವು ಅವರುಗಳ ಆಹಾರ, ನೀರು ಪೂರೈಕೆಯಲ್ಲಿಯೂ ಯಶಸ್ವಿಯಾಗಿದೆ.

ತಾ. ೧೨ ರಂದು ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಯಮು ನೋತ್ರಿ ರಾಷ್ಟಿçÃಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕಾರಿಯಾ - ಬಾರ್ಕೊಟ್ ಸುರಂಗ ಮಾರ್ಗವು ಕುಸಿದ ಪರಿಣಾಮ ನಿರ್ಮಾಣದಲ್ಲಿ ತೊಡಗಿದ್ದ ಒಟ್ಟು ೪೧ ಕಾರ್ಮಿಕರು ಸುರಂಗದಲ್ಲಿಯೇ ಬಂಧಿತರಾಗಿ ಹೋಗಿದ್ದಾರೆ. ಸುರಂಗವನ್ನು ಡ್ರಿಲ್ ಮಾಡಿ ೪ ಇಂಚ್ ಪೈಪ್ ಮೂಲಕ ರಕ್ಷಣಾ ತಂಡಗಳು ಡ್ರೆöÊ-ಫ್ರೂಟ್ಸ್ ಇತ್ಯಾದಿ ಆಹಾರ ಪದಾರ್ಥಗಳನ್ನು ಸುರಂಗದೊಳಗೆ ಸಿಲುಕಿದ್ದ ಕಾರ್ಮಿ ಕರಿಗೆ ಪೂರೈಸುತ್ತಿದ್ದು, ಇಂದು ೬ ಇಂಚ್ ಪೈಪ್ ಡ್ರಿಲ್ ಮಾಡುವ ಮೂಲಕ ರೊಟ್ಟಿ-ಸಬ್ಜಿ ಆಹಾರ ವನ್ನೂ ನೀಡಲಾಗಿದ್ದು, ಎನ್‌ಡೋ ಸ್ಕೋಪಿಕ್ ಕ್ಯಾಮರಾ ಮೂಲಕ ಕಾರ್ಮಿಕರ ಚಿತ್ರ, ವೀಡಿಯೋವನ್ನು ಕೂಡ ಚಿತ್ರೀಕರಿಸಲಾಗಿದೆ. ಸದ್ಯದ ಮಟ್ಟಿಗೆ ಯಾರೊಬ್ಬರಿಗೂ ಯಾವುದೇ ರೀತಿಯ ಜೀವಹಾನಿ ಆಗಿಲ್ಲದಿರುವು ದಾಗಿ ರಕ್ಷಣಾ ಪಡೆಗಳ ಮುಖ್ಯಸ್ತರು ಮಾಹಿತಿ ನೀಡಿದ್ದಾರೆ. ಪೈಪ್‌ಗಳ ಮೂಲಕ ಆಮ್ಲಜನಕವನ್ನೂ ಪೂರೈಸಲಾಗುತ್ತಿದೆ.

ವಾಕಿ - ಟಾಕಿ ಅಲ್ಲದೆ, ಕಾರ್ಮಿಕರು ಸಿಲುಕಿರುವ ಜಾಗದ ತನಕ ೬ ಇಂಚು ಸುತ್ತಳತೆಯ ೫೩ ಮೀಟರ್ ಪೈಪ್ ಮೂಲಕವೂ ಕಾರ್ಮಿಕರೊಂದಿಗೆ ಸಂಪರ್ಕವನ್ನು ಹೊಂದಲಾಗಿದೆ. ಸರಕಾರವು ನೇಮಿಸಿರುವ ಡಾ. ಅಭಿಷೇಕ್ ಶರ್ಮಾ ಎಂಬ ಮನೋವೈದ್ಯರೊಬ್ಬರು ಕಾರ್ಮಿಕರೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡು ಯೋಗ, ನಡಿಗೆ ಹಾಗೂ ಪರಸ್ಪರ ಮಾತನ್ನಾಡುವಂತೆ ಪ್ರೋತ್ಸಾಹಿ ಸುತ್ತಿದ್ದು, ಮನೋಸ್ಥೆöÊರ್ಯ ತುಂಬುತ್ತಿದ್ದಾರೆ.

ಕಾರ್ಮಿಕರನ್ನು ಹೊರತರಲು ಅಗತ್ಯವಿರುವ ಬೃಹತ್ ಸುರಂಗವನ್ನು ಕೊರೆಯಲು ಉದ್ದೇಶಿತ ತಾಂತ್ರಿಕ ಉಪಕರಣಗಳು ಘಟನಾ ಸ್ಥಳ ತಲುಪಿದೆ. ಅಂತರರಾಷ್ಟಿçÃಯ ಡ್ರಿಲ್ಲಿಂಗ್ ತಜ್ಜ ಅರ್ನಾಲ್ಡ್ ಡಿಕ್ಸ್ ಅವರ ಸಹಕಾರದ ಮೂಲಕ ಇಂದೇ ಈ ಸುರಂಗ ಕೊರೆಯುವ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ.