ಕಡಂಗ, ನ. ೨೧: ಸಮೀಪದ ಬದ್ರಿಯಾ ಮದರಸದಲ್ಲಿ ಕೊಡಗು ಜಿಲ್ಲಾ ಮಾಜಿ ಖಾಜಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮರ್ಹೂಂ ತಾಜಲ್ ಉಲಮ ಅಬ್ದುಲ್ ಅಹಮಾನ್ ತಂಗಳ್ಲ್ ಅವರ ಉರೂಸ್ ಕಾರ್ಯಕ್ರಮವು ಕಡಂಗ ಬದ್ರಿಯಾ ಮದರಸ ಆವರಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮದರ್ ಮೌಲಿದ್ ಹಾಗೂ ತಾಜಲ್ ಉಲಮಾ ಮೌಲಿದ್ ಪಾರಾಯಣವನ್ನು ಬದ್ರಿಯಾ ಜುಮಾ ಮಸೀದಿ ಇಸ್ಮಾಯಿಲ್ ಲತೀಫಿ ಉಸ್ತಾದರ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಅರಫಾ ವಹಿಸಿದರು

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಜಿಲ ಮುದರಿಸ್ ಉಸ್ತಾದ್ ನಿಜಾರ್ ಅಹಸನಿ ರವರು ನೆರವೇರಿಸಿದರು

ಉರೂಸ್ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಕೇರಳದ ಪ್ರಖ್ಯಾತ ಪಂಡಿತ ಮುಳ್ಳೂರ್ ಕೆರೆ ಮಹಮ್ಮದ್ ಅಲಿ ಸಕಾಫಿ ಮಾತನಾಡಿ, ಇಸ್ಲಾಂ ಶಾಂತಿಯ ಧರ್ಮವಾಗಿದ್ದು ಹಿಂಸೆಗೆ ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಮತ್ತು ಸಮಾಜದಲ್ಲಿರುವ ಬಡ ಜನತೆ ಹಾಗೂ ರೋಗಿಗಳಿಗೆ ಸದಾ ಸ್ಪಂದನ ನೀಡಬೇಕಾಗಿದೆ ಎಂದು ಕರೆ ನೀಡಿದರು .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಉದ್ಯಮಿಗಳಾದ ಡಿಎಚ್‌ಎಸ್ ಸೂಫಿ ಹಾಜಿ, ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ವೀರಾಜಪೇಟೆ ಪುರಸಭಾ ಸದಸ್ಯ ರಾಫಿ, ಮೋಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ಬೀರ್ ಸಿ.ಇ., ರಫೀಕ್ ಕೋಮ್ಮತೊಡ್, ಎಡಪಾಲ ಜಮಾಅತ್ ಅಧ್ಯಕ್ಷ ಶಾಫಿ, ಕಿಕ್ಕರೆ ಜಮಾಅತ್ ಅಧ್ಯಕ್ಷ ಅಬೂಬಕರ್, ಸಾಜನ್ ಸಕಾಫಿ ಸಿಹಾಬುದ್ದೀನ್ ಜೌಹರಿ, ಸುಲೇಮಾನ್ ಸಿ.ಎ., ಅಶ್ರಫ್ ಸಿ.ಎ., ಮುಜಿಬ್ ಟಿ.ಕೆ., ಅಬೂಬಕರ್ ಹಾಕತ್ತೂರು, ಜಮಾಹತ್, ಪದಾಧಿಕಾರಿಗಳಾದ ಕೆ.ಯು. ಉಸ್ಮಾನ್, ರಜಾಕ್ ಸಿ.ಎ., ಇಸ್ಮಾಯಿಲ್ ಉಸ್ತಾದ್, ಉಮ್ಮರ್ ಉಸ್ತಾದ್ ಉಪಸ್ಥಿತರಿದ್ದರು.

ಸ್ವಾಗತ ಮತ್ತು ವಂದನೆಯನ್ನು ಜಮಾಅತ್ ಕಾರ್ಯದರ್ಶಿ ರಾಶೀದ್ ಯು.ಇ. ನೆರವೇರಿಸಿದರು.