ಮಡಿಕೇರಿ, ನ. ೨೧: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ೨೦೨೩-೨೪ ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಹಸು ಘಟಕ ಅನುಷ್ಠಾನಕ್ಕೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಗೆ ವಿಶೇಷ ಘಟಕ ಯೋಜನೆಯಡಿ ೭ ಮತ್ತು ಗಿರಿಜನ ಉಪಯೋಜನೆಯಡಿ ೧೪ ಗುರಿ ನಿಗದಿಪಡಿಸಲಾಗಿದ್ದು ಘಟಕದ ವೆಚ್ಚ ರೂ. ೬೫ ಸಾವಿರ ಸಹಾಯಧನ ರೂ. ೫,೮೫೦೦ ಶೇ.೯೦), ಫಲಾನುಭವಿಗಳ ವಂತಿಗೆ/ ಬ್ಯಾಂಕ್ ಸಾಲ ರೂ. ೬,೫೦೦ (ಶೇ.೧೦) ರಂತೆ ಘಟಕ ಅನುಷ್ಠಾನ ಗೋಳಿಸಲಾಗುತ್ತದೆ. ಪ.ಜಾತಿ/ ಪ.ಪಂಗಡ ಮಹಿಳೆಯರಿಗೆ ಶೇ. ೩೩.೩ ಮತ್ತು ಅಂಗವಿಕಲಕರಿಗೆ ಶೇ.೩ ರಷ್ಟು ಅದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಫಲಾನುಭವಿಗಳ ಆರ್.ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್, ೩೦ ಕೊನೆಯ ದಿನವಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶುವೈದ್ಯ ಆಸ್ಪತ್ರೆ, ಸೋಮವಾರಪೇಟೆ ಮೊ. ೯೪೪೮೬೫೫೬೬೦, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಕುಶಾಲನಗರ ಮೊ. ೮೯೫೧೪೦೫೦೨೫, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಮಡಿಕೇರಿ ಮೊ: ೯೪೪೮೬೪೭೨೭೬, ಪಶುವೈದ್ಯ ಆಸ್ಪತ್ರೆ ವಿರಾಜಪೇಟೆ ಮೊ. ೯೧೪೧೦೯೩೯೯೬, ಪಶುವೈದ್ಯ ಆಸ್ಪತ್ರೆ ಪೊನ್ನಂಪೇಟೆ ಮೊ. ೯೪೪೯೦೮೧೩೪೩ನ್ನು ಸಂಪರ್ಕಿಸುವAತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಲಿಂಗರಾಜ ದೊಡ್ಡಮನಿ ತಿಳಿಸಿದ್ದಾರೆ.