ಡೀಪ್‌ಫೇಕ್ ಎಂಬ ಕೃತಕ ಬುದ್ಧಿಮತ್ತೆಯ ಅಸಭ್ಯತೆಯ ವಿರುದ್ಧ ಸಿಡಿದೇಳುವ ಮೂಲಕ ಕೊಡಗಿನ ಖ್ಯಾತ ನಾಯಕಿ ರಶ್ಮಿಕಾ ಮಂದಣ್ಣ ಭಾರತದಾದ್ಯಂತ ಹೊಸದ್ದೊಂದು ಕ್ರಾಂತಿಗೆ ಕಾರಣವಾಗಿದ್ದಾರೆ.

ರಶ್ಮಿಕಾ ಮಂದಣ್ಣ ಪ್ರಾರಂಭಿಸಿರುವ ಡೀಪ್‌ಫೇಕ್ ವಿರುದ್ಧದ ಹೋರಾಟಕ್ಕೆ ದೇಶವ್ಯಾಪಿ ಗಣ್ಯಾತಿಗಣ್ಯರಿಂದ ಅಪಾರ ಬೆಂಬಲ ದೊರಕಿದ್ದು ನವತಂತ್ರಜ್ಞಾನದ ಮತ್ತೊಂದು ಮಗ್ಗುಲಿನ ವಿರೋಧಿ ಹೋರಾಟಕ್ಕೆ ಹೊಸತ್ತೊಂದು ಆಯಾಮ ದೊರಕಿಸಿಕೊಟ್ಟಿದೆ.

ಏನಾಯಿತೆಂದರೆ..

ರಶ್ಮಿಕಾ ಮಂದಣ್ಣ ಅವರ ಫೋಟೋವನ್ನು ಇತ್ತೀಚಿನ ಹೊಸ ತಂತ್ರಜ್ಞಾನವಾದ ಆರ್ಟಿಫೀಶಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ಭಾಗವಾದ ಡೀಪ್‌ಫೇಕ್ ನೆರವಿನಿಂದ ತಿರುಚಿ ಅಸಭ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಇದು ವೈರಲ್ ಆಗಿ ರಶ್ಮಿಕಾ ಘನತೆಗೆ ಕುಂದು ತರುತ್ತಿರುವಂತೆಯೇ ಹುಷಾರಾದ ರಶ್ಮಿಕಾ ಡೀಪ್‌ಫೇಕ್ ತಂತ್ರಜ್ಞಾನದ ವಿರುದ್ಧ ಸಿಡಿದೆದ್ದಿದ್ದಾರೆ.

ನನ್ನ ಕುಟುಂಬ, ಗೆಳೆಯರು, ಹಿತೈಷಿಗಳಿಗೆ ನಾನೋರ್ವ ನಟಿಯಾಗಿ ಧನ್ಯವಾದ ಸಲ್ಲಿಸುತ್ತಿದ್ದೇನೆ. ಇವರೇ ನನ್ನ ಪಾಲಿಗೆ ರಕ್ಷಾಕವಚ ಆಗಿದ್ದಾರೆ. ನಾನು ಶಾಲೆಯಲ್ಲಿ, ಕಾಲೇಜಿನಲ್ಲಿಯೋ ಕಲಿಯುತ್ತಿದ್ದಾಗ ಈ ರೀತಿ ಆಗಿದ್ದರೆ... ಇಂತಹ ಸಮಸ್ಯೆಯನ್ನು ನಾನು ಹೇಗೆ ಎದುರಿಸುತ್ತಿದ್ದೇನೋ... ನನಗೇ ಊಹಿಸಿಕೊಳ್ಳಲೂ ಅಸಾಧ್ಯವಾಗಿದೆ ಎಂದು ರಶ್ಮಿಕಾ ಮಂದಣ್ಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನೋವನ್ನು ಹಂಚಿಕೊAಡಿದ್ದಾರೆ.

ಹಾಗೇ ಗಮನಿಸಿದರೆ ರಶ್ಮಿಕಾ ಪಾಲಿಗೆ ಈಗ ಕಂಟಕವಾಗಿ ಪರಿಣಮಿಸಿರುವ ಡೀಪ್‌ಫೇಕ್ ಸಮಸ್ಯೆ ವಿಶ್ವವ್ಯಾಪಿ ಅನೇಕ ಮಹಿಳೆಯರು ಈಗಾಗಲೇ ಎದುರಿಸಿರುವ ಮತ್ತು ಎದುರಿಸುತ್ತಲೇ ಇರುವ ಸಮಸ್ಯೆಯಾಗಿದೆ. ಅದರಲ್ಲಿಯೂ ಸಿನಿಮಾ ರಂಗದಲ್ಲಿರುವ ನಟಿಯರು, ಕ್ರೀಡೆ, ರಾಜಕೀಯ, ಸಾಮಾಜಿಕ ರಂಗದಲ್ಲಿ ಹೆಸರಾಗಿರುವ ಗಣ್ಯಾತಿಗಣ್ಯ ಮಹಿಳೆಯರ ಪೈಕಿ ಅನೇಕರು ಡೀಪ್‌ಫೇಕ್ ತಂತ್ರಜ್ಞಾನದ ಬಲಿಪಶುಗಳೇ.

ನೀಲಿ ಚಿತ್ರಗಳನ್ನು ರೂಪಿಸಲೆಂದು ಬಳಸುವ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಿಡಿಗೇಡಿಗಳು, ಅಸಭ್ಯ, ಅಶ್ಲೀಲವಾಗಿರುವ ಬೇರೆ ಯಾರದ್ದೋ ಚಿತ್ರದಲ್ಲಿನ ಮುಖಕ್ಕೆ ಗಣ್ಯರ ಫೋಟೋ ಅಂಟಿಸಿ ಅದನ್ನು ನೈಜ ಎಂಬAತೆ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದು ನಿಜವಾದ ಮಹಿಳೆಯ ಚಿತ್ರ ಎಂದು ನಂಬುವ ಪಡ್ಡೆ ಹುಡುಗರು ಇದನ್ನು ನೋಡುತ್ತಾ ಮತ್ತಷ್ಟು ವೈರಲ್ ಮಾಡುತ್ತಾ ಪ್ರಸಿದ್ದರ ಘನತೆಗೆ ಕುಂದು ತರುವಂತಹ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ಮಹಿಳೆಯರ ಫೋಟೋಗಳು ಸುಲಭವಾಗಿ ಹೇಗೆ ದೊರಕುತ್ತವೆ?

ಹೌದು. ಮಹಿಳೆಯರು, ಖ್ಯಾತನಾಮರ ಫೋಟೋಗಳು ಹೇಗೆ ಸುಲಭವಾಗಿ ದೊರಕುತ್ತಿದೆ ಎಂದರೆ ಈ ಮಹಿಳೆಯರು ವಾಟ್ಸಾö್ಯಪ್‌ಗಳಲ್ಲಿ ಹಾಕುವ ಸ್ಟೇಟಸ್, ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್‌ನಲ್ಲಿ ಯಾವು ಯಾವುದೋ ಸಂದರ್ಭ ತಮ್ಮ ಮನಸ್ಸಿನ ಸಂಭ್ರಮಕ್ಕಾಗಿ ಪೋಸ್ಟ್ ಮಾಡಿಕೊಂಡಿರುವ ವಿವಿಧ ಭಂಗಿಯ ಫೋಟೋಗಳೇ ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಸುಲಭವಾಗಿ ಸಿಗುತ್ತಿರುವ ಚಿತ್ರಗಳಾಗಿವೆ.

ಡೀಪ್‌ಫೇಕ್‌ಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ಮಹಿಳೆಯರ ಫೋಟೋಗಳನ್ನು ಬಳಸಿಕೊಂಡು ಅವರ ಮುಖವನ್ನು ಫೋಟೋ, ವೀಡಿಯೋಗಳಿಗೆ ಅಳವಡಿಸಲು ಕೃತಕ ಬುದ್ಧಿಮತೆ ತಂತ್ರಜ್ಞಾನದ ನೆರವು ಪಡೆದರೆ ಪಾಪದ ಅದೆಷ್ಟೋ ಮಹಿಳೆಯರ ವ್ಯಕ್ತಿತ್ವಕ್ಕೆ ಕುಂದು ತರಲು ಸಾಧ್ಯ ಎಂಬುದು ಕಳವಳಕಾರಿ ವಿಚಾರವಾಗಿದೆ.

ವಿದೇಶಗಳಲ್ಲಿ ಡೀಪ್‌ಫೇಕ್ ಬಳಸಿಕೊಂಡು ತಮಗೆ ಆಗದ ಮಹಿಳೆಯರ ಖ್ಯಾತಿಗೆ ಧಕ್ಕೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಮಾತ್ರವಲ್ಲ ಡೀಪ್‌ಫೇಕ್ ತಂತ್ರಜ್ಞಾನ ವಿದೇಶಗಳಲ್ಲಿ ನಿಯಂತ್ರಣಕ್ಕೆ ಸಿಗದಷ್ಟು ಮಿತಿ ಮೀರಿ ಬಿಟ್ಟಿದೆ.

ಇದೀಗ ಭಾರತದಲ್ಲಿಯೂ ತನ್ನ ಉಪದ್ರ ಪ್ರಾರಂಭಿಸಿರುವ ಡೀಪ್‌ಫೇಕ್ ಅನೇಕ ಸಿನಿಮಾ ನಟಿಯರ ಮಾನ ಹರಾಜು ಮಾಡಿದೆ. ಹೊಸ ನಟಿಯರು ಡೀಪ್‌ಫೇಕ್ ಹಾವಳಿಯಿಂದ ಕಂಗಾಲಾಗಿದ್ದಾರೆ. ಮರ್ಯಾದಸ್ಥ ಕುಟುಂಬದಿAದ ಸಾಕಷ್ಟು ನಿರೀಕ್ಷೆಯಿಂದ ಚಿತ್ರರಂಗಕ್ಕೆ ಬಂದ ನಟಿಯರು ಡೀಪ್‌ಫೇಕ್‌ಗೆ ಬಲಿಯಾಗಿ ಹೈರಾಣಾಗಿದ್ದಾರೆ. ಕಳೆದ ೧ ವರ್ಷದಲ್ಲಿಯೇ ದಿ

ನಕ್ಕೆ ೩-೪ ಸಾವಿರದಂತೆ ವರ್ಷದಲ್ಲಿ ೧೦ ಲಕ್ಷ ಡೀಪ್‌ಫೇಕ್ ವೀಡಿಯೋ, ಚಿತ್ರಗಳು ಭಾರತದಲ್ಲಿ ಸೃಷ್ಟಿಯಾಗಿದೆ ಎಂಬ ಲೆಕ್ಕ ಇದರ ಅಪಾಯವನ್ನು ಊಹಿಸಬಹುದಾಗಿದೆ.

ಖ್ಯಾತ ನಾಯಕ ಅಮಿತಾಬ್ ಬಚ್ಚನ್ ಕೂಡ ರಶ್ಮಿಕಾಳಿಗೆ ಬೆಂಬಲ ನೀಡಿದ್ದು, ಕಠಿಣ ಕಾನೂನು ಜಾರಿಗೊಳಿಸಿ ಡೀಪ್‌ಫೇಕ್ ಮೂಲಕ ಸಭ್ಯ ಮಹಿಳೆಯರ ಜೀವನದಲ್ಲಿ ಚೆಲ್ಲಾಟವಾಡುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಸರ್ಕಾರವನ್ನು ಬಿಗ್ ಬಿ ಒತ್ತಾಯಿಸಿದ್ದಾರೆ.

ಆದರೆ ಕಳೆದ ೫-೬ ವರ್ಷಗಳಿಂದ ಡೀಪ್‌ಫೇಕ್‌ನಿಂದ ಸಮಸ್ಯೆಗೊಳಗಾಗಿ, ಕಣ್ಣೀರಿಡುತ್ತಿರುವ ಅನೇಕ ಮಹಿಳೆಯರಿಗೆ ಈಗ ರಶ್ಮಿಕಾ ಎತ್ತಿರುವ ಧ್ವನಿ ತಮ್ಮ ಪರವಾದ ಹೋರಾಟದ ಧ್ವನಿಯಂತೆ ಕಂಡುಬAದಿದೆ.

ಈಗ ಖ್ಯಾತ ಮಹಿಳೆಯರಿಗೆ ಉಂಟಾಗಿರುವ ಡೀಪ್‌ಫೇಕ್ ಸಮಸ್ಯೆ ಮುಂದೆ ಸಾಮಾನ್ಯರಿಗೆ ಕೂಡ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಯುವತಿಯರನ್ನು ಕಿಚಾಯಿಸಲು, ದ್ವೇಶ ಸಾಧಿಸಲು, ತಮ್ಮ ಪರ ಒಲಿಸಿಕೊಳ್ಳಲು ಕೂಡ ದುಷ್ಕರ್ಮಿಗಳು ಡೀಪ್‌ಫೇಕ್ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ.

ಸುಳ್ಳು ಚಿತ್ರವನ್ನು ನಿಜ ಎಂದು ರೂಪಿಸುವ ಡೀಪ್‌ಫೇಕ್‌ನಂತಹ ತಂತ್ರಜ್ಞಾನ ಖಂಡಿತವಾಗಿಯೂ ನಾಗರಿಕ ಮತ್ತು ಆರೋಗ್ಯಕರ ಸಮಾಜಕ್ಕೆ ಅಪಾಯಕಾರಿ. - ಅನಿಲ್ ಎಚ್.ಟಿ.

ಡೀಪ್‌ಫೇಕ್ ತಪ್ಪಿಸಲು ಏನು ಮಾಡಬಹುದು

ಡೀಪ್‌ಫೇಕ್ ಎಂಬ ಹೆಸರೇ ಸೂಚಿಸುವಂತೆ ಇದೊಂದು ಫೇಕ್ ಚಿತ್ರ. ಕೃತಕ ಫೋಟೋ. ತಂತ್ರಜ್ಞಾನದ ನೆರವು ಬಳಸಿ ರೂಪಿಸುವ ಕೃತಕ ವೀಡಿಯೋ, ದೃಶ್ಯ ಅಥವಾ ಚಿತ್ರ. ಮೇಲ್ನೋಟಕ್ಕೆ ಇದು ನಿಜವಾದ ವೀಡಿಯೋ, ಚಿತ್ರದಂತೆಯೇ ಭಾಸವಾಗುತ್ತದೆ. ಆದರೆ ಇದು ಕೃತಕವಾಗಿದ್ದು ತಂತ್ರಜ್ಞಾನದ ಮೂಲಕವಷ್ಟೇ ಈ ಚಿತ್ರ, ವೀಡಿಯೋವನ್ನು ರೂಪಿಸಲಾಗಿರುತ್ತದೆ. ಬಹುತೇಕ ಜನರು ನಿಜ ಮತ್ತು ಕೃತಕತೆಯ ನಡುವಿನ ವ್ಯತ್ಯಾಸ ಅರಿಯದೇ ಇದ್ದಾಗಲೇ ಇಂತಹ ವೀಡಿಯೋ, ಚಿತ್ರಗಳಲ್ಲಿ ಕಾಣಿಸಿಕೊಂಡವರ ಘನತೆಗೆ ಕುಂದು ಉಂಟಾಗುತ್ತದೆ. ಈ ರೀತಿಯ ವರ್ಚಸ್ಸಿಗೆ ಧಕ್ಕೆ ತರುವುದೇ ಇಂತಹ ವೀಡಿಯೋ, ಚಿತ್ರ ರೂಪಿಸಿದವರ ಕೆಟ್ಟ ಉದ್ದೇಶವಾಗಿರುತ್ತದೆ.

ಸಾಮಾಜಿಕ ಜಾಲತಾಣಗಳಿಗೆ ದಾಸರಂತೆ ಇರುವವರು ಹುಷಾರಾಗಿರಬೇಕು. ಸ್ಟೇಟಸ್, ಫೇಸ್‌ಬುಕ್‌ನಂತ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ಸಂದರ್ಭ ಎಚ್ಚರಿಕೆ ವಹಿಸಬೇಕು. ಎಲ್ಲಿಗೋ ಪ್ರವಾಸ ಹೋದ ಸಂದರ್ಭ ತೆಗೆದ ಸುಂದರ ಫೋಟೋಗಳನ್ನು ವೈಯಕ್ತಿಕ ಸಂತೋಷಕ್ಕೆ ಬಳಸುವುದು ಸೂಕ್ತವೇ ವಿನಾಃ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೇ ಆದಲ್ಲಿ ಮುಂದೊAದು ದಿನ ಇದೇ ಫೋಟೋಗಳು ಕಾಯ ಬದಲಿಸಿ ಪೇಚಾಟಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ.

ಡೀಪ್‌ಫೇಕ್ ಮೂಲಕ ಯಾರೇ ಆದರೂ ಬ್ಲಾಕ್‌ಮೇಲ್ ಮಾಡಲು ಮುಂದಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೆöÊಂ ಕೇಂದ್ರಕ್ಕೆ ತೆರಳಿ ದೂರು ನೀಡಬೇಕು. ಡೀಪ್‌ಫೇಕ್‌ಗೆ ಒಳಪಟ್ಟವರು ಯಾವುದೇ ಕಾರಣಕ್ಕೂ ಧೈರ್ಯಕೆಡಬಾರದು. ನಿರ್ಭೀತಿಯಿಂದ ಪೊಲೀಸ್ ದೂರು ನೀಡಲೇಬೇಕು. ಆ ಮೂಲಕ ತಾಂತ್ರಿಕ ಭಯೋತ್ಪಾದಕರನ್ನು ಬಗ್ಗು ಬಡಿಯುವ ಕೆಲಸಕ್ಕೆ ಕೈಜೋಡಿಸಬೇಕು.

ಖ್ಯಾತನಾಮರಿಗೆ ಬಿಸಿ ಮುಟ್ಟಿಸುತ್ತಿರುವ ಡೀಪ್‌ಫೇಕ್ ಇದೀಗ ಪ್ರಧಾನಿ ಮೋದಿ ಅವರನ್ನೂ ಬಿಟ್ಟಿಲ್ಲ. ಪ್ರಧಾನಿ ಗಾರ್ಭ ನೃತ್ಯ ಮಾಡುತ್ತಿರುವಂತೆ ನೃತ್ಯಪಟುವೊಬ್ಬರಿಗೆ ಮೋದಿ ಮುಖ ಅಳವಡಿಸಿ ಡೀಪ್‌ಫೇಕ್ ಮಾಡಲಾಗಿದೆ. ಇದರಿಂದಾಗಿ ಮೋದಿ ಕೂಡ ಚಿಂತೆಗೀಡಾಗಿದ್ದು, ಡೀಪ್‌ಫೇಕ್ ತಂತ್ರಜ್ಞಾನ ನಿಜಕ್ಕೂ ಮಾರಕ. ಇದು ನನ್ನನ್ನೂ ಬಿಟ್ಟಿಲ್ಲ ಎಂದು ತನ್ನ ವ್ಯಥೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.