ವೀರಾಜಪೇಟೆ, ನ. ೨೧: ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ಹಂತದ ೧ರಿಂದ ೪ನೇ ತರಗತಿ ವಿಭಾಗದಲ್ಲಿ ವೀರಾಜಪೇಟೆ ವಿನಾಯಕ ಆಂಗ್ಲ ಶಾಲೆಯ ನಿತಿನ್ ಜಿ. ರಾಜ್ ಹಾಗೂ ಪ್ರೌಢಶಾಲಾ ಹಂತದ ೮ರಿಂದ ೧೦ನೇ ತರಗತಿ ವಿಭಾಗದಲ್ಲಿ ತಸ್ಫಿಯಾ ಕೆ.ಎಲ್. ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.