ಮಡಿಕೇರಿ, ನ. ೨೧: ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ ನಿಧಿಯಡಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಈ ಹಿಂದೆ ನಿಗದಿ ಮಾಡಲಾದ ಕಾಮಗಾರಿಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರುಗಳು ಕಾಮಗಾರಿ ಗಳನ್ನು ಬದಲಾವಣೆ ಮಾಡಿರುವು ದಾಗಿ ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಇವರುಗಳು ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಹಿಂದಿನ ಶಾಸಕರುಗಳು ಕಾಮಗಾರಿಗಳನ್ನು ಅವರ ಹಿಂದೆ ಸುತ್ತುತ್ತಿದ್ದವರಿಗಾಗಿ ನಿಗದಿ ಮಾಡಿದ್ದರು. ಅದನ್ನು ನಾವು ಬದಲಾಯಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದರಲ್ಲದೆ ಈ ವಿಚಾರದಲ್ಲಿ ಮಾಜಿ ಶಾಸಕರುಗಳು ಮೈಪರಚಿಕೊಳ್ಳುವುದು ಬೇಡ ಎಂದು ಕುಟುಕಿದರು. ೨೦೧೭ರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ೫೦ ಕೋಟಿ ಪ್ಯಾಕೇಜ್ ತಂದ ಸಂದರ್ಭ ಆ ಅನುದಾನದ ಎಲ್ಲಾ ಕಾಮಗಾರಿಗಳನ್ನು ಕೂಡ ಮಾಜಿ ಶಾಸಕರುಗಳು ಬದಲಾವಣೆ ಮಾಡಿದ್ದರು. ಭಾಗಮಂಡಲದಲ್ಲಿ ಟೆಂಡರ್ ಆಗಿದ್ದ ವಿಚಾರದಲ್ಲಿ ಟೆಂಡರ್ ಅನ್ನು ರದ್ದು ಮಾಡಿದರ‍್ಯಾರು ಎಂದು ಪ್ರಶ್ನಿಸಿದ ಧರ್ಮಜ ಉತ್ತಪ್ಪ ಇದಕ್ಕೆ ಆರೋಪ ಮಾಡಿದವರೆ ಉತ್ತರಿಸಬೇಕೆಂದರು. ಕಾವೇರಿ ಜಾತ್ರೆ ಸಂದರ್ಭ ಬಿಡುಗಡೆ ಯಾದ ೧ ಕೋಟಿ ಅನುದಾನದಲ್ಲಿ ೧೫-೨೦ ಲಕ್ಷವನ್ನು ಉತ್ಸವಕ್ಕಾಗಿ ಖರ್ಚುಮಾಡಿ ಉಳಿದ ಹಣವನ್ನು ಅಭಿವೃದ್ಧಿಗಾಗಿ ಇಡಲಾಗಿವೆ. ಹಾರಂಗಿ ಕಾಮಗಾರಿ ಸಂಬAಧ ೨೦೨೨ರಲ್ಲಿ ಟೆಂಡರ್ ಆಗಿದ್ದು, ಟೆಂಡರ್‌ದಾರ ಕೆಲಸ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಾವು ಅವರ ಮೇಲೆ ಒತ್ತಡ ಹಾಕಿದ್ದು, ಅವರು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಹೀಗಿರುವಾಗ ನಮ್ಮ ಶಾಸಕರುಗಳ ಮೇಲೆ ವಿನಾಕಾರಣ ಆರೋಪ ಮಾಡಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವುದು ಬೇಡ ಎಂದು ನುಡಿದ ಧರ್ಮಜ ಉತ್ತಪ್ಪ ಕಾನೂನು ಎಂಬುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು. ಮಡಿಕೇರಿ ಯಲ್ಲಿ ನಗರೋತ್ಥಾನ ಕಾಮಗಾರಿ ಸಂಬAಧ ನಗರಸಭಾ ಅಧ್ಯಕ್ಷರಿಗೂ ಜವಬ್ದಾರಿ ಇದೆ ಎಂಬುದನ್ನು ಅವರು ಮರೆಯಬಾರದು ಎಂದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರುಗಳ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು, ಆಧಾರಗಳಿದ್ದರೆ

(ಮೊದಲ ಪುಟದಿಂದ) ನೀಡಲಿ; ನಾವು ಉತ್ತರ ಕೊಡುತ್ತೇವೆ ಎಂದು ನುಡಿದರು. ಗ್ಯಾರೆಂಟಿ ಯೋಜನೆಗಳ ಯಶಸ್ಸಿನ ಹಿನ್ನೆಲೆಯಲ್ಲಿ ಜನತೆ ಕಾಂಗ್ರೆಸ್‌ಗೆ ಬೆಂಬಲಿಸುತ್ತಿರುವುದನ್ನು ಸಹಿಸಲಾಗದೆ ಕುಮಾರಸ್ವಾಮಿ ಅವರು ವೃಥಾ ಆರೋಪದಲ್ಲಿ ತೊಡಗಿದ್ದಾರೆ ಎಂದರು. ಸದ್ಯದಲ್ಲಿಯೆ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರುಗಳು ಕಾಂಗ್ರೆಸ್ ಸೇರಲಿದ್ದಾರೆ ಎಂದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಶಿಕ್ಷಕರ ಸಮಸ್ಯೆಗಳು ಬಹಳಷ್ಟಿವೆ. ಆ ಬಗ್ಗೆ ತನಗೆ ಅರಿವಿದ್ದು, ಸಮಸ್ಯೆಗಳ ಬಗ್ಗೆ ಅರಿತವರು ಆಯ್ಕೆ ಆದರೆ ಮಾತ್ರ ಅವುಗಳ ಪರಿಹಾರ ಸಾಧ್ಯ ಎಂದರು. ಶಿಕ್ಷಕನಾಗಿ ಸೇವೆ ಮಾಡಿ ಸಂಘಟನೆಗಳಲ್ಲಿ ಹೋರಾಟ ಮಾಡಿ ಶಿಕ್ಷಕರ ಸಮಸ್ಯೆ ಅರಿತಿರುವ ತನ್ನನ್ನು ಶಿಕ್ಷಕರು ಬೆಂಬಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಅರವಿಂದ್ ಕುಟ್ಟಪ್ಪ, ವಕ್ತಾರ ಟಾಟು ಮೊಣ್ಣಪ್ಪ, ಜಿ.ಪಂ. ಮಾಜಿ ಸದಸ್ಯ ಪ್ರಥ್ಯು ಉಪಸ್ಥಿತರಿದ್ದರು.