ಮಡಿಕೇರಿ, ಫೆ. ೮: ಕಣದಲ್ಲಿ ಒಣಗಿಸಲು ಹಾಕಿದ್ದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಜ.೩೧ ರಂದು ಕಗ್ಗೋಡ್ಲು ಗ್ರಾಮದ ನಿವಾಸಿ ವೈ.ಎ. ಚಿದಾನಂದ ಎಂಬವರ ತೋಟದ ಕಣದಲ್ಲಿ ೨,೫೦೦ ಕೆಜಿಯಷ್ಟು ಕಾಫಿ ಬೀಜವನ್ನು ಒಣಹಾಕಲಾಗಿತ್ತು. ಈ ಪೈಕಿ ಅಂದಾಜು ೩೫೦ ಕೆಜಿ ತೂಕದಷ್ಟು ಕಾಫಿ ಕಳವಾಗಿತ್ತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ತಾ. ೮ ರಂದು ಆರೋಪಿಗಳಾದ ಕಗ್ಗೋಡ್ಲು ಗ್ರಾಮದ ನಿವಾಸಿಗಳಾದ ಎಂ.ಸಿ. ಜಯ (೪೫), ಹೆಚ್.ಜಿ. ಶರತ್ (೩೧), ಪಿ.ಜೆ. ಸಾಜು (೪೪) ಸೇರಿದಂತೆ ಯಾವುದೇ ರಶೀದಿ ನೀಡದೆ ಕಾಫಿಯನ್ನು ಖರೀದಿ ಮಾಡಿದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ನೂರ್ ಟ್ರೇರ‍್ಸ್ನ ಅಬ್ದುಲ್ ಅಜೀಜ್ (೪೯) ಎಂಬವರನ್ನು ಬಂಧಿಸಲಾಗಿದೆ. ಕಳವಿಗೆ ಸಂಬAಧಿಸಿದ ಆರೋಪಿಗಳಾದ ಕಗ್ಗೋಡ್ಲುವಿನ ಕೆ.ಎಂ. ಕಿಶೋರ್ ಕುಮಾರ್, ಮನು ರೈ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.