ಮಡಿಕೇರಿ, ಫೆ. ೯: ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕೊಡವ ಲ್ಯಾಂಡ್ ಮತ್ತು ಕೊಡವ ಪ್ರಾತಿನಿಧ್ಯದ ಪರ ಪ್ರಮುಖರು ಘೋಷಣೆಗಳನ್ನು ಕೂಗಿದರು.

ಅತ್ಯಂತ ಸೂಕ್ಷö್ಮ ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ ಅನುಚ್ಛೇದ ೨೪೪ ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ "ಸಂಘ" ಮತ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಎನ್.ಯು.ನಾಚಪ್ಪ ಅವರು ಮಾತನಾಡಿ, ಕೊಡವ ಲ್ಯಾಂಡ್ ಸ್ವಯಂ ಆಡಳಿತ ಮತ್ತು ಸಂಸತ್‌ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯದ ಕುರಿತು ರಾಷ್ಟçಪತಿಗಳು ಸುಗ್ರಿವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿದರು.

ಅಧ್ಯಕ್ಷೀಯ ಸುಗ್ರೀವಾಜ್ಞೆಯನ್ನು ಪ್ರಕಟಿಸಿ - ಆರ್ಟಿಕಲ್ ೩೨ ರ ಅಡಿಯಲ್ಲಿ ಸಾಂವಿಧಾನಿಕ ಪರಿಹಾರವಾಗಿ ಸಾಂವಿಧಾನಿಕ ಕಾರ್ಯವಿಧಾನವನ್ನು ಪ್ರಾರಂಭಿಸಬೇಕೆAದು ಆಗ್ರಹಿಸಿದರು. ಕೊಡವ ಲ್ಯಾಂಡ್ ಸ್ವಯಂ ಆಡಳಿತ ಹಕ್ಕೊತ್ತಾಯವು ನಮ್ಮ ಸಂವಿಧಾನ ಮತ್ತು ವಿಶ್ವರಾಷ್ಟç ಸಂಸ್ಥೆಯ ಚಾರ್ಟರ್‌ನಲ್ಲಿ ಪ್ರಸ್ತಾಪಿಸಲ್ಪಟ್ಟ ವಿಧಿಗಳ ಪ್ರಕಾರ ಸೂಕ್ಷö್ಮ ನಗಣ್ಯ ಸಮುದಾಯಗಳ ಸರ್ವಾಂಗೀಣ ವಿಕಾಸಕ್ಕಾಗಿ ಅಂತರ್ಗತವಾಗಿರುವ ಅನುವಂಶಿಕ, ಮೂಲಭೂತ, ಜನ್ಮಸಿದ್ದ ಹಕ್ಕುಗಳನ್ನು ಕಾಯ್ದುಕೊಳ್ಳುವ ಮೂಲಕ ಸ್ವಯಂ ನಿರ್ಣಯದ ಹಕ್ಕನ್ನು ಎತ್ತಿಹಿಡಿಯಲು ನಿರೂಪಿಸಿರುವ ಘೋಷಣೆಯಾಗಿದೆ ಎಂದರು.

ಕೊಡವರು ಅತೀ ನಗಣ್ಯ ಸೂಕ್ಷಾö್ಮತಿ ಸೂಕ್ಷö್ಮ ಗುಂಪಾಗಿದ್ದು, ವಿನಾಶದಿಂದ ಶಾಸನಬದ್ಧ ರಕ್ಷಣೆಯ ಮೂಲಕ ನಮ್ಮ ಕೊಡವ ಸಮುದಾಯವನ್ನು ರಕ್ಷಿಸಬೇಕಾಗಿದೆ. ನಮ್ಮನ್ನು ಸಂರಕ್ಷಿಸಲು ನಾವು ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಸ್ವ-ಆಡಳಿತವನ್ನು ಬಯಸುತ್ತೇವೆ. ಗೂರ್ಖಾಲ್ಯಾಂಡ್, ಲಡಾಖ್ ಮತ್ತು ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲೆ ಸಂವಿಧಾನದ ಅಡಿಯಲ್ಲಿ ಈ ಹಕ್ಕೊತ್ತಾಯವನ್ನು ಪ್ರತಿಪಾದಿಸುತ್ತಿದ್ದೇವೆ ಎಂದರು.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಂವಿಧಾನದ ತತ್ವಗಳಿಗೆ ಬದ್ಧವಾಗಿದೆ. ನಾವು ನಮ್ಮ ರಾಷ್ಟçದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಗೌರವಿಸುತ್ತಿದ್ದೇವೆ. ನಮ್ಮ ಕಾನೂನುಬದ್ಧ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳು ಸಾಂವಿಧಾನಿಕ ಚೌಕಟ್ಟಿನೊಳಗೆ ಇವೆ. ಆದ್ದರಿಂದ ಸಂಸತ್‌ನಲ್ಲಿ ಕೊಡವರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಮತ್ತು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕೆಂದು ನಾಚಪ್ಪ ಒತ್ತಾಯಿಸಿದರು.

ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಅಪ್ಪನೆರವಂಡ ಶಾಂತಿ ಅಚ್ಚಪ್ಪ ಸರ್ವ ಜಮ್ಮಡ ಮೋಹನ್, ಪಟ್ಟಮಾಡ ಕುಶಾಲಪ್ಪ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ಕಿರಿಯಮಡ ಶರೀನ್, ಚಂಬAಡ ಜನತ್, ಮಂದಪAಡ ಮನೋಜ್, ನಂದಿನೆರವAಡ ವಿಜು, ಬೇಪಡಿಯಂಡ ದಿನು, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ, ಬೇಪಡಿಯಂಡ ಬಿದ್ದಪ್ಪ, ಚೋಳಪಂಡ ನಾಣಯ್ಯ, ಕೂಪದೀರ ಸಾಬು, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ಅಪ್ಪಯ್ಯ, ಪಾರ್ವಂಗಡ ನವೀನ್, ಅಳ್‌ಮಂಡ ನೆಹರು, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್, ಅಪ್ಪೆಂಗಡ ಮಾಲೆ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಕೋಡಿರ ರತನ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಡಳಿತದ ಮೂಲಕ ರಾಷ್ಟçಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ, ಭಾರತದ ಚುನಾವಣಾ ಆಯೋಗ, ವಿಶ್ವ ವಿಖ್ಯಾತ ಅರ್ಥ ಶಾಸ್ತçಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಿಶ್ವ ರಾಷ್ಟç ಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟರಸ್ ಅವರುಗಳಿಗೆ ಎನ್.ಯು.ನಾಚಪ್ಪ ಅವರು ಮನವಿ ಪತ್ರ ಸಲ್ಲಿಸಿದರು.