ಶನಿವಾರಸಂತೆ, ಫೆ. ೯: ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಕಳೆದ ೮೦ ವರ್ಷಗಳಿಂದ ನಿರಂತರವಾಗಿ ನಡೆದು ಬಂದು ಸಂಪರ್ಕ ಸೇತುವಾಗಿ ವಿವಿಧೆಡೆಯ ಜನರನ್ನು ಸಂಘಟಿಸಿದ್ದು ಇಂದಿಗೂ ಜಾನಪದ ಸೊಗಡು, ಸಂಸ್ಕೃತಿ, ಸಂಸ್ಕಾರದ ಉಳಿವಿಗಾಗಿ ಆಚರಣೆ ಮುಂದುವರೆದಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆದ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಗ್ಗಿ ಸಮಯದಲ್ಲಿ ಫಲವನ್ನು ಮನೆ ತುಂಬಿಸಿಕೊAಡು ಸಂತಸದಿAದ ವಿಶ್ರಾಂತಿಗಾಗಿ ಆಚರಿಸಿಕೊಂಡು ಬಂದ ಜಾನುವಾರುಗಳ ಜಾತ್ರೆಯಲ್ಲಿ ವಿಜ್ಞಾನ ಕಾರಣದಿಂದ ಸಾವಿರಾರು ದನಕರುಗಳನ್ನು ಕಾಣುತ್ತಿದ್ದ ವೈಭವ ಮರೆಯಾಗಿ ಹೋಗಿದೆ. ಪ್ರಸ್ತುತ ಸಂಸ್ಕೃತಿಯ ಪ್ರತೀಕವಾದ ಜಾತ್ರೆಯನ್ನು ಉಳಿಸಿಕೊಳ್ಳಲು ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ರಾ ಸಮಿತಿ ಶ್ರಮಿಸುತ್ತಿದೆ. ಅವರ ಪರಿಶ್ರಮದ ಫಲವೇ ಜಾತ್ರೆ ಇಂದು ಮನೋರಂಜನಾ ಜಾತ್ರೆಯಾಗಿ ಯಶಸ್ವಿಯಾಗಿದೆ ಎಂದರು.
ಕಲ್ಲುಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಜಾತ್ರಾ ಮೈದಾನದಲ್ಲಿ ನೆರಳಿಗಾಗಿ ಗಿಡಮರಗಳನ್ನು ನೆಟ್ಟು ನೀರು ಹಾಕಿ ಸಂರಕ್ಷಿಸಿಕೊAಡು ಬರಬೇಕು. ಮೈದಾನದಲ್ಲಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಯಾವ ಜಾತ್ರಾ ಸಮಿತಿಯೂ ಮಾಡಲಿಲ್ಲ. ದೇಶೀಯ ತಳಿಗಳ ಜಾನುವಾರುಗಳನ್ನು ಸಾಕಿ ಆರೋಗ್ಯ ಕಾಪಾಡಿಕೊಳ್ಳಬೇಕು. ಯುವಕರಲ್ಲಿ ಇಂದು ಭಕ್ತಿ-ಗೌರವದ ಭಾವನೆ ಮಾಯವಾಗಿದೆ. ಪ್ರತಿಷ್ಠೆಯ ಮುಂದೆ ಸಂಸ್ಕಾರ ಮರೆಯಾಗಿದೆ. ಕೇವಲ ಸೌಹಾರ್ದತೆ- ಬಾಂಧವ್ಯದ ಮೂಲಕ ಜಾತ್ರೆ ನಡೆದು ಬರುತ್ತಿದೆ ಎಂದರು.
ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮಾತನಾಡಿ, ದೇಶದ ಬೆನ್ನೆಲುಬು ರೈತ. ರೈತನ ಬೆನ್ನೆಲುಬು ಜಾನುವಾರು. ಕೃಷಿಕ ದುಡಿದರೇ ಮಾತ್ರ ಬದುಕು. ಕೃಷಿಗೆ ಪ್ರಾಧಾನ್ಯತೆ ನೀಡುವ ರೈತರು ವಿದ್ಯುತ್ ಬಿಲ್ ಕಟ್ಟಬಾರದು. ಹೋರಾಟಕ್ಕೆ ಮುಂದಾಗಬೇಕು. ಮುಂದೆ ಜಾತ್ರೆಯಲ್ಲಿ ತೇರು ಎಳೆಯುವ ಸಂಸ್ಕೃತಿಯೂ ಬೆಳೆದು ಬರಲಿ ಎಂದು ಹಾರೈಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಜಾತ್ರೆ ಬದಲಾವಣೆಯಿಂದ ಆಚರಿಸಲ್ಪಡುತ್ತಿದೆ. ಎಲ್ಲಾ ವಯೋಮಾನದವರ ಸಂತೋಷಕ್ಕಾಗಿ ಜಾತ್ರಾ ಸಮಿತಿ ಶಕ್ತಿ ಮೀರಿ ನೈತಿಕ ಬೆಂಬಲದಿAದ ಶ್ರಮಿಸಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ನಿತ್ಯ ನಡೆದ ಕ್ರೀಡಾಕೂಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ, ಸಹಕಾರ ನೀಡಿದವರಿಗೆ ಹಾಗೂ ಮುಕ್ತಾಯ ಸಮಾರಂಭದ ದಿನ ಸಾಂಕೇತಿಕವಾಗಿ ಪ್ರದರ್ಶನಕ್ಕೆ ಬಂದ ಜಾನುವಾರುಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ವಿನಯ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರೆಯ ಯಶಸ್ಸಿಗೆ ಶ್ರಮಿಸಿ, ಸಹಕರಿಸಿದ ಸಮಿತಿ ಪದಾಧಿಕಾರಿಗಳಿಗೆ, ಹಂಡ್ಲಿ ಗ್ರಾಮ ಪಂಚಾಯಿತಿಗೆ, ವರ್ತಕರಿಗೆ, ಮನೋರಂಜನ ಆಟ ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಶಾಲಪ್ಪ, ಜಾತ್ರಾ ಸಮಿತಿ ಉಪಾಧ್ಯಕ್ಷ ವೀರೇಂದ್ರ ಕುಮಾರ್, ಕಾರ್ಯದರ್ಶಿ ಎನ್.ಎಂ. ಬಸವರಾಜ್, ಉಪಕಾರ್ಯದರ್ಶಿ ಚೈತ್ರಾ, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷ ಅಶೋಕ್ ಕುಮಾರ್, ಸದಸ್ಯರಾದ ಮಾದೇವಿ, ರೂಪಾ, ಬಸವಯ್ಯ, ಸುವರ್ಣ, ಉಷಾ, ಮಾಜಿ ಅಧ್ಯಕ್ಷ ಸಂದೀಪ್, ಮಾಜಿ ಸದಸ್ಯರಾದ ಸೋಮಶೇಖರ್ ಉಮಿ, ಶಿವಕುಮಾರ್, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಕಿರಣ್, ಸಹಕಾರ ಸಂಘದ ಸದಸ್ಯ ಲಕ್ಷಿö್ಮÃಶೆಟ್ಟರು, ರಕ್ತದಾನ ಶಿಬಿರದ ಆಯೋಜಕ ಚೇತನ್, ಇತರ ಪ್ರಮುಖರು ಉಪಸ್ಥಿರಿದ್ದರು.