ಮಡಿಕೇರಿ, ಫೆ. ೯: ಕೊಡಗು ಜಿಲ್ಲಾ ಯುವ ಒಕ್ಕೂಟದ ೨೦೨೪ನೇ ಸಾಲಿನ ಅಧ್ಯಕ್ಷರಾಗಿ ಹಾಕತ್ತೂರು ತ್ರಿನೇತ್ರ ಯುವಕ ಸಂಘದ ಸುಕುಮಾರ್ ಪಿ.ಪಿ., ಕಾರ್ಯಾಧ್ಯಕ್ಷರಾಗಿ ಹೊದ್ದೂರು ಶ್ರೀ ಪ್ರಸನ್ನ ಗಣಪತಿ ಸಂಘದ ಕೂಡಂಡ ಸಾಬ ಸುಬ್ರಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸೋಮವಾರಪೇಟೆ ಯಡೂರು ಉದಯ ಯುವಕ ಸಂಘದ ಯಡೂರು ಕುಶಾಲಪ್ಪ ಹಾಗೂ ಅರುವತ್ತೋಕ್ಲು ಅನುಗ್ರಹ ಯುವಕ ಸಂಘದ ಡಾಡೂ ಜೋಸೆಫ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಯುವಶಕ್ತಿ ಯವಕ ಸಂಘದ ರಾಮಕೃಷ್ಣ ಕೆ.ವಿ., ಖಜಾಂಚಿಯಾಗಿ ಕಗ್ಗೋಡ್ಲು ಯುವಕ ಸಂಘದ ಕುಂಜಿಲನ ಮಧು ಮೋಹನ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಗೋಣಿಕೊಪ್ಪ ಸೀಗೆತೋಡು ಇಂಡಿಯನ್ ಯುವಕ ಸಂಘದ ಕುಲ್ಲಚಂಡ ಪ್ರಮೋದ್ ಗಣಪತಿ, ಶ್ರೀಮಂಗಲ ಕಾಕೂರ್ ಬಸವೇಶ್ವರ ಯುವಕ ಸಂಘದ ಸುರೇಶ್ ಎ.ಎ., ವೀರಾಜಪೇಟೆ ಕಲ್ಲುಬಾಣೆ ವಿಘ್ನೇಶ್ವರ ಯುವತಿ ಮಂಡಳಿಯ ಬಡಕಡ ಎ. ರೇಷ್ಮಾ, ಗಂಧರ್ವ ಯುವಕ ಸಂಘದ ಮಹೇಶ್, ತಲ್ತಾರೆ ಅಬ್ಬಿಮಠ ಚೌಡೇಶ್ವರಿ ಯುವಕ ಸಂಘದ ಬಾಲ್‌ಶಂಕರ್ ಕೆ.ಎಲ್., ಕಿರುಗೂರು ಪ್ರಕೃತಿ ಯುವತಿ ಮಂಡಳಿಯ ಸುಮತಿ ಎ.ಜಿ., ಗಾಳಿಬೀಡು ಯುವಕ ಸಂಘದ ಡಿ. ನವೀನ್ ದೇರಳ, ಇಂದಿರಾನಗರ ಜ್ಯೋತಿ ಯುವಕ ಸಂಘದ ಜಯಕುಮಾರ್ ಆಯ್ಕೆಯಾಗಿದ್ದಾರೆ.

ಮಡಿಕೇರಿ ನೆಹರೂ ಯುವ ಕೇಂದ್ರದ ಕಚೇರಿ ಸಭಾಂಗಣದಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಸುಕುಮಾರ್ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಒಕ್ಕೂಟದ ಸಲಹೆಗಾರರು, ಮಾಜಿ ಅಧ್ಯಕ್ಷರಾದ ನಾಯಮಂಡ ಕಂದಾ ದೇವಯ್ಯ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಕೆ.ಆರ್. ಉಪಸ್ಥಿತರಿದ್ದರು. ಸಾಬ ಸುಬ್ರಮಣಿ ಸ್ವಾಗತಿಸಿ, ಮಧು ಮೋಹನ್ ಲೆಕ್ಕಪತ್ರ ಮಂಡಿಸಿದರು. ನವೀನ್ ದೇರಳ ವಂದಿಸಿದರು.