ಪಾಲಿಬೆಟ್ಟ, ಫೆ. ೯: ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆಗೆ ಚಾಲನೆ ನೀಡಲಾಯಿತು.

ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ಮಾತನಾಡಿ ಇತಿಹಾಸ ಪ್ರಸಿದ್ಧ ಉರೂಸ್‌ಗೆ ಸರ್ವಧರ್ಮಿಯರು ನಂಬಿಕೆಯೊAದಿಗೆ ಭಾಗವಹಿಸುತ್ತಿದ್ದು, ತಮ್ಮ ಕಷ್ಟಕಾರ್ಪಣ್ಯಗಳ ಇಷ್ಟಾರ್ಥ ಹರಕೆಗಳನ್ನು ತೀರಿಸುವುದರೊಂದಿಗೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ತಾ. ೧೨ರವರೆಗೆ ಉರೂಸ್ ಕಾರ್ಯಕ್ರಮ ನಡೆಯಲಿದೆ ಎಂದರು. ಮಸೀದಿಯ ಖತಿಬ್ ಅಲಿ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಪಂಡಿತ ಸಯ್ಯದ್ ಮಹಮ್ಮದ್ ಸಮಿಹ್ ತಂಗಳ್ ಕೊಂಬೋಳ್ ಪಟ್ಟಣ್ ಬಾಬಾ ಸಾವಲಿ ದರ್ಗಾ ಬಾಗಿಲು ತೆರೆದು ವಿಶೇಷ ಪ್ರಾರ್ಥನೆಯೊಂದಿಗೆ ದುಆ ನೇತೃತ್ವ ವಹಿಸಿದ್ದರು.

ಈ ಸಂದರ್ಭ ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಎಂ. ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಖಜಾಂಚಿ ಟಿ.ಕೆ. ಮುಸ್ತಫ, ಮಾಜಿ ಅಧ್ಯಕ್ಷರುಗಳಾದ ಸಿ.ಕೆ. ಮೊಯಿದು ಹಾಜಿ, ಸಿ.ಎಂ. ಅಬ್ದುಲ್ ಜಬ್ಬಾರ್ ಹಾಜಿ, ಕೆ.ಹೆಚ್. ಅಬೂಬಕ್ಕರ್, ಡಿ.ಎ. ಹಾರಿಸ್ ಹಾಜಿ, ಮಾಜಿ ಉಪಾಧ್ಯಕ್ಷ ಸಿ.ಹೆಚ್. ಖಾದರ್, ತಾರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಅಲಿ ಹಾಜಿ, ಗ್ರಾಮ ಪಂಚಾಯಿತಿ ಸದಸ್ಯ ನಾಸರ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.