ವಿಶೇಷ ವರದಿ : ಕೆ.ಎಸ್.ಮೂರ್ತಿ

ಕಣಿವೆ, ಫೆ. ೯ : ಭೂಕಂಪನದ ಮಾದರಿಯಲ್ಲಿ ಕೆಲಹೊತ್ತು ನಡುಗುವ ಭೂಮಿ, ಬಿರುಕು ಬಿಟ್ಟ ಮನೆಗಳ ಗೋಡೆಗಳು, ಗುಂಡಿ ಬಿದ್ದ ನಾಲಾ ರಸ್ತೆ, ಪಾತಾಳಕ್ಕಿಳಿದ ಅಂತರ್ಜಲ.

ಇದು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಬಳಿ ವಿಶೇಷ ವರದಿ : ಕೆ.ಎಸ್.ಮೂರ್ತಿ

ಕಣಿವೆ, ಫೆ. ೯ : ಭೂಕಂಪನದ ಮಾದರಿಯಲ್ಲಿ ಕೆಲಹೊತ್ತು ನಡುಗುವ ಭೂಮಿ, ಬಿರುಕು ಬಿಟ್ಟ ಮನೆಗಳ ಗೋಡೆಗಳು, ಗುಂಡಿ ಬಿದ್ದ ನಾಲಾ ರಸ್ತೆ, ಪಾತಾಳಕ್ಕಿಳಿದ ಅಂತರ್ಜಲ.

ಇದು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಬಳಿ ದಿನದ ಸಂಜೆ ಹೊತ್ತು ಸ್ಫ್ಪೋಟಿಸುತ್ತಿರುವ ಕಾರಣ ಕಿಮೀಗಟ್ಟಲೆ ಭೂಮಿ ಕಂಪನವಾಗುತ್ತಿದೆ.

ಮನೆಯೊಳಗಿದ್ದರೂ ಕೂಡ ನೆಲ ಒದರುತ್ತದೆ. ವಯೋವೃದ್ಧರಾದ ನಮಗೆ ಮನೆಯೊಳಗೆ ನಿದ್ರೆಯೇ ಬರುತ್ತಿಲ್ಲ. ‘‘ಅನೇಕ ವರ್ಷಗಳ ಕಾಲ ಬಡತನವನ್ನೇ ಹಾಸಿ ಹೊದ್ದು ಮಲಗಿದ್ದ ನಾವು ಕಷ್ಟ ಪಟ್ಟು ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಯಾವಾಗ ಗೋಡೆಗಳು ಉರುಳುತ್ತವೋ, ಯಾವ ಹೊತ್ತಿನಲ್ಲಿ ಅದ್ಯಾವ ಅಪಾಯ ಕಾದಿದೆಯೋ ಗೊತ್ತಿಲ್ಲ’’ ಎಂದು ನೋವು ತೋಡಿ ಕೊಳ್ಳುತ್ತಾರೆ ಇಲ್ಲಿನ ವಯೋವೃದ್ಧ ಮಹಿಳೆ ಕಾಳಮ್ಮ.

ಪಾತಾಳಕ್ಕಿಳಿದ ಅಂತರ್ಜಲ

ನಿತ್ಯವೂ ಕಲ್ಲುಬಂಡೆಗಳನ್ನು ಸ್ಫೋಟಿಸುವ ಕಲ್ಲುಕೋರೆಯಿಂದಾಗಿ ಉಪಕಾಲುವೆಯ ರಸ್ತೆಯಲ್ಲಿ ಬೃಹತ್ ಲಾರಿಗಳಲ್ಲಿ ಸಾಗಿಸುವ ಕಾರಣ ನಾಲಾ ರಸ್ತೆ ಹಾನಿಯಾಗುತ್ತಿದೆ. ನಾಲಾ ರಸ್ತೆಗೆ ಹೊಂದಿಕೊAಡAತೆ ಜಮೀನುಗಳಲ್ಲಿ ಮೇಯಲು ಕಟ್ಟಿದ್ದ ಜಾನುವಾರುಗಳು ಲಾರಿಗಳ ಚಾಲನೆಯಿಂದಾಗಿ ಕಟ್ಟಿದ್ದ ಹಗ್ಗ ಕಿತ್ತು ಓಡುತ್ತಿವೆ. ಅಷ್ಟೇ ಅಲ್ಲದೇ ನಾವು ಬೆಳೆಯುವ ವಿವಿಧ ಬೆಳೆಗಳ ಮೇಲೆ ರಸ್ತೆಯಲ್ಲಿ ಸಾಗುವ ಲಾರಿಗಳಿಂದಾಗಿ ಏಳುವ ಧೂಳು ಬಂದು ಕೂರುತ್ತಿದ್ದು ಬೆಳೆಗಳು ಹಾಳಾಗುತ್ತಿವೆ’’ ಎಂದು ಇಲ್ಲಿನ ಮತ್ತೋರ್ವ ನಿವಾಸಿ ರಂಗಯ್ಯ "ಶಕ್ತಿ"ಯೊಂದಿಗೆ ದೂರಿಕೊಂಡರು.

ಕಲ್ಲುಕೋರೆ ನಿಲ್ಲಿಸಿ - ಜೀವ ಉಳಿಸಿ

‘‘ಇಲ್ಲಿನ ಕಲ್ಲು ಕೋರೆಯನ್ನು ಆರಂಭಿಸಿದ ಬಳಿಕ ಇಲ್ಲಿನ ಜನವಸತಿ ಹಾಗೂ ಜಾನುವಾರುಗಳ ಮೇಲಾಗುತ್ತಿರುವ ದುಷ್ಪರಿಣಾಮ ಗಳನ್ನು ನಿಲ್ಲಿಸಿ ನಮ್ಮಗಳ ಜೀವ ಉಳಿಸಲು ಕೂಡಲೇ ಇಲ್ಲಿನ ಕಲ್ಲು ಕೋರೆಯನ್ನು

(ಮೊದಲ ಪುಟದಿಂದ) ಸ್ಥಗಿತಗೊಳಿಸಬೇಕೆಂದು’’ ಸ್ಥಳೀಯ ವಾಸಿ ದೀಪು ಹೇಳುತ್ತಾರೆ.

ನಮ್ಮ ಹಿರಿಯರು ಕಷ್ಟಪಟ್ಟು ಕಟ್ಟಿದ ಮನೆಯ ಗೋಡೆಗಳು ಬಿರುಕು ಬಿಟ್ಟು ಜೀವ ಬಲಿ ಪಡೆಯಲು ಬಾಯ್ದೆರೆದು ನಿಂತಿವೆ. ಗಣಿಗಾರಿಕೆಗೆ ಅನುಮತಿಸಿರುವ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಇತ್ತ ಆಗಮಿಸಿ ನಮಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು. ಆದ್ದರಿಂದ ಕಲ್ಲುಕೋರೆಯಲ್ಲಿ ಸ್ಫೋಅ ಸಂಭವಿಸದAತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಣಿಗಾರಿಕೆಗೆ ಒಣಗಿದ ಮರಗಳು

ಆಳವಾದ ಬೇರುಗಳೊಂದಿಗೆ ಜೀವ ಜಲವನ್ನು ಪೋಷಿಸುತ್ತಿದ್ದ ಬೃಹತ್ ಮರಗಳು ಕಲ್ಲುಗಣಿಗಾರಿಕೆಯಿಂದಾಗಿ ಹಾನಿಯಾಗಿವೆ. ಅಂದರೆ ಮರಗಳ ಬೇರುಗಳು ಸಡಿಲಗೊಂಡು, ಬೇರನ್ನು ಬಿಗಿಯಾಗಿ ಹಿಡಿದಿದ್ದ ಮಣ್ಣಿನ ಪದರ ಕಲ್ಲುಗಣಿಗಾರಿಕೆಯಿಂದಾಗಿ ಕುಸಿದ ಪರಿಣಾಮ ಬೇರುಗಳಿಲ್ಲದ ಮರಗಳು ಒಣಗಿ ತರಗೆಲೆಯಂತಾಗಿರುವ ಚಿತ್ರಣ ಕಂಡು ಬರುತ್ತಿದೆ.

ಜಿಲ್ಲಾಡಳಿತವೇ ಹೊಣೆ - ಮಹಿಳೆಯರ ಎಚ್ಚರಿಕೆ

ಚಿಕ್ಕನಾಯಕನ ಹೊಸಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಬಿರುಕು ಬಿಟ್ಟಿರುವ ಮನೆಗಳ ಗೋಡೆಗಳು ಒಂದು ವೇಳೆ ಕುಸಿದು ಅವಘಡ ಸಂಭವಿಸಿದಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕಾಳಮ್ಮ ಎಚ್ಚರಿಸಿದ್ದಾರೆ.