ಸೋಮವಾರಪೇಟೆ, ಫೆ. ೯: ಹಾರಂಗಿ ಜಲಾಶಯದಿಂದ ಯಡವನಾಡು-ಹುದುಗೂರು ಗ್ರಾಮದ ಮುಖಾಂತರ ಹಾದು ಹೋಗಿರುವ ನಾಲೆ ದುರಸ್ತಿಗೆ ಬರೋಬ್ಬರಿ ೪೮೦ ಮರಗಳನ್ನು ಕಡಿದು ತೆರವುಗೊಳಿಸಲಾಗುತ್ತಿದೆ.

ನಾಲೆಯ ಅಕ್ಕಪಕ್ಕದಲ್ಲಿ ಹಲವಾರು ದಶಕಗಳಿಂದ ಬೆಳೆದು ನಿಂತಿದ್ದ ಮರಗಳಿಗೆ ಗರಗಸ ಬಿದ್ದಿದೆ. ೪೮೦ ಮರಗಳನ್ನು ಕಾನೂನಾತ್ಮಕವಾಗಿಯೇ ತೆರವುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರತಿಕ್ರಿಯಿಸಿದ್ದರೆ, ನಾಲೆಯ ದುರಸ್ತಿಗಾಗಿ ಇಷ್ಟೊಂದು ಮರಗಳ ಹನನ ಮಾಡಿರುವುದು ಪ್ರಕೃತಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಸೋಮವಾರಪೇಟೆ ವಲಯದ ಹುದುಗೂರು ಹಾಗೂ ಹೆಬ್ಬಾಲೆ ಉಪ ವಲಯದ ವ್ಯಾಪ್ತಿಯಲ್ಲಿ ಬರುವ ಹಾರಂಗಿ ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿದ್ದ ಮರಗಳು ಇದೀಗ ಕಣ್ಮರೆಯಾಗುತ್ತಿವೆ.

ನಾಲೆ ದುರಸ್ತಿ ಕಾರ್ಯವನ್ನು ಹಾರಂಗಿ ಅಣೆಕಟ್ಟು ಉಪ ವಿಭಾಗದ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಮತ್ತು ನಾಲೆಯ ಭವಿಷ್ಯದ ದೃಷ್ಟಿಯಿಂದ ಮರಗಳನ್ನು ಹನನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬAದಿದೆ.

ಮರಗಳ ತೆರವು ಪ್ರಕ್ರಿಯೆಗೆ ಸಂಬAಧಿಸಿದAತೆ ಹಾರಂಗಿ ಅಣೆಕಟ್ಟೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಳೆದ ೨೦೨೩ರ ಜುಲೈ ೧೭ರಂದು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ಹಾರಂಗಿ ನಾಲೆ ದುರಸ್ತಿ ಕಾರ್ಯಕ್ಕೆ ಮರಗಳು ಅಡಚಣೆಯಾಗಿವೆ. ಇದರೊಂದಿಗೆ ಮರಗಳು ಬೆಳೆದಿರುವುದರಿಂದ ನಾಲೆಯು ಅಲ್ಲಲ್ಲಿ ಬಿರುಕು ಬಿಡುತ್ತಿದೆ. ಈ ಹಿನ್ನೆಲೆ ಮರಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕೆಂದು ಕೋರಿದ್ದರು.

ಅದರಂತೆ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ನಾಲೆಯ ಎರಡೂ ಬದಿಯಲ್ಲಿ ಬೆಳೆದಿರುವ ೩೮೦ ಅಕೇಶಿಯಾ ಸೇರಿದಂತೆ ಇತರ ಜಾತಿಯ ಗಟ್ಟಿ ಮರಗಳು, ೧೧೧ ಮೇ ಪ್ಲವರ್, ಜಕರಾಂಡ, ಮಳೆ ಮರ ಗಳನ್ನು ಗುರುತಿಸಿ ತೆರವಿಗೆ ಕ್ರಮ ಕೈಗೊಂಡಿದೆ. ೫೦ಕ್ಕೂ ಅಧಿಕ ಮರಗಳ ತೆರವಿಗೆ ಸಾರ್ವಜನಿಕರ (ಮೊದಲ ಪುಟದಿಂದ) ಆಕ್ಷೇಪಣೆಗಳಿಗೆ ಆಹ್ವಾನ ನೀಡಬೇಕಿದ್ದು, ಅದರಂತೆ ೨೩.೧೨.೨೦೨೩ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆದರೆ ಯಾರೊಬ್ಬರೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆ ೪೮೦ ಮರಗಳನ್ನು ಬುಡ ಸಹಿತ ಕಟಾವು ಮಾಡಲಾಗುತ್ತಿದೆ.

ಗಟ್ಟಿ ಮರಗಳನ್ನು ಕುಶಾಲನಗರದ ಆನೆಕಾಡು ಬಳಿಯಿರುವ ಮರ ಸಂಗ್ರಹಾಲಯಕ್ಕೆ ಸಾಗಿಸಲು ಹಾಗೂ ಮೆದು ಜಾತಿಯ ಮರಗಳನ್ನು ಸ್ಥಳದಲ್ಲಿಯೇ ಹರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಬಹುಪಾಲು ಮರಗಳನ್ನು ಕಡಿದು ಸಾಗಾಟಗೊಳಿಸಲಾಗುತ್ತಿದ್ದು, ಹಾರಂಗಿ ಮುಖ್ಯ ನಾಲೆಯ ಎರಡೂ ಬದಿ ಇದೀಗ ಬರಡಾಗಿದೆ.

ಮರಗಳನ್ನು ಕಡಿದು ಸಾಗಿಸುತ್ತಿರುವುದಕ್ಕೆ ಕೆಲವರು ಇದೀಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸುತ್ತಿದ್ದಾರೆ.

ಆದರೆ ಹಾರಂಗಿ ಆಣೆಕಟ್ಟು ಉಪ ವಿಭಾಗದ ಅಭಿಯಂತರರ ಪತ್ರದ ಅನ್ವಯ ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿ, ಯಾವೊಂದೂ ಆಕ್ಷೇಪಣೆ ಸಲ್ಲಿಕೆಯಾಗದ ಹಿನ್ನೆಲೆ ಮರಗಳ ತೆರವಿಗೆ ನಿಯಮಾನುಸಾರ ಕ್ರಮ ಕೈಗೊಂಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಒಟ್ಟಾರೆ ಹಾರಂಗಿ ನಾಲೆ ದುರಸ್ತಿಯ ನೆಪದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತು ಪರಿಸರಕ್ಕೆ ಪೂರಕವಾಗಿದ್ದ, ಹೂಗಳನ್ನು ಬಿಟ್ಟು ಎಲ್ಲರನ್ನೂ ಆಕರ್ಷಿಸುತ್ತಿದ್ದ, ಎಲ್ಲರಿಗೂ ನೆರಳು ನೀಡುತ್ತಿದ್ದ ಮರಗಳು ಮಾತ್ರ ಕಣ್ಮರೆಯಾಗುತ್ತಿವೆ. ಆ ಮೂಲಕ ನಾಲೆಯ ಎರಡೂ ಬದಿ ಬರಡಾಗುತ್ತಿದೆ.