ಗೋಣಿಕೊಪ್ಪಲು, ಫೆ. ೧೦ : ತಾವುಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ೧೦ ತಿಂಗಳು ಸಮೀಪಿಸುತ್ತಿದೆ. ತಮ್ಮ ಈ ಅವಧಿಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿಯ ಕೊಡುಗೆಗಳನ್ನು ಜನತೆಯ ಮುಂದಿಡುವAತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಆಪ್ತ ಕಾರ್ಯದರ್ಶಿ ಭಗವಾನ್ ಮೂಲಕ ಲಿಖಿತ ಮನವಿಯನ್ನು ಬಿಜೆಪಿ ಪಕ್ಷವು ಶಾಸಕರಿಗೆ ಸಲ್ಲಿಸಿದೆ.

ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆÀ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮುಂದಾಳತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಹಾಗೂ ಇತರರು ವೀರಾಜಪೇಟೆಯ ಶಾಸಕರ ಕಚೇರಿಗೆ ತೆರಳಿ, ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಅವರ ಆಪ್ತ ಕಾರ್ಯದರ್ಶಿಗೆ ಲಿಖಿತ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು ದುಸ್ಥಿತಿಯಲ್ಲಿದೆ. ಇವುಗಳನ್ನು ದುರಸ್ಥಿ ಪಡಿಸಬೇಕು. ಪ್ರಮುಖವಾಗಿ ಕೊಡಗಿನಲ್ಲಿ ವನ್ಯಪ್ರಾಣಿಗಳ ಉಪಟಳದಿಂದ ಮಾನವನ ಜೀವಕ್ಕೆ ಹಾನಿಯಾಗುತ್ತಿದೆ. ಕೊಡಗು ಜಿಲ್ಲೆಯ ಐನ್‌ಮನೆಯಲ್ಲಿ, ಗ್ರಾಮದ ದೇವಾಲಯಗಳಲ್ಲಿ ನೂರಾರು ವರ್ಷಗಳಿಂದ ಬಳಸುತ್ತಾ ಬಂದಿರುವ ಕಾಡುಪ್ರಾಣಿಗಳ ವಸ್ತುಗಳಾದ ಕೊಂಬು, ಗರಿ, ಕೂದಲು ಇವುಗಳನ್ನು ಯಥಾಸ್ಥಿತಿಯಲ್ಲಿ ಬಳಕೆ ಮಾಡಲು ಸರ್ಕಾರದಿಂದ ಆದೇಶ ಮಾಡಿಸು ವಂತೆ, ಮುಜರಾಯಿ ಇಲಾಖೆಗೆ ಸಂಬAಧಪಟ್ಟ ದೇವಾಲಯಗಳಿಂದ ಸಂಗ್ರಹವಾಗಿರುವ ಹುಂಡಿ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ನೀಡುವಿರಾ.? ಎಂಬ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸುವಂತೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ ಆಗ್ರಹಿಸಿದರು.

ತಾವುಗಳು ಕ್ಷೇತ್ರದ ಶಾಸಕರಾದ ನಂತರ ತಂದ ಅನುದಾನವೆಷ್ಟು.?, ಬಿಡುಗಡೆಯಾಗಿರುವ ಅನುದಾನಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಅಭಿವೃದ್ಧಿಗಾಗಿ ತಾವು ರೂಪಿಸಿರುವ ಹಾಗೂ ತಾವು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳಿಗನುಣವಾಗಿ ರೂಪಿಸಿರುವ ಯೋಜನೆ, ರೈತರಿಗೆ ಸರ್ಕಾರದಿಂದ ಬಿಡುಗಡೆಗೊಂಡಿರುವ ಪರಿಹಾರ, ನಿರುದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾಗಿರುವ ಉದ್ಯೋಗಗಳು, ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾವು ಕೈಗೊಂಡ ಕ್ರಮಗಳು, ಬಡಜನರ ಕೈಗೆಟುಕುವ ಉತ್ತಮ ದರ್ಜೆಯ ಆರೋಗ್ಯ ಸೇವೆ, ಇದರ ಬಗ್ಗೆ ರೂಪಿಸಿರುವ ಹೊಸ ಯೋಜನೆಗಳು, ಕ್ಷೇತ್ರದಲ್ಲಿ ಇಲ್ಲಿಯ ತನಕ ಹೊಸದಾಗಿ ರಸ್ತೆಗಳ ನಿರ್ಮಾಣ, ಕಾಮಗಾರಿಗಳು, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಪರಿಪೂರ್ಣಗೊಳಿಸಲು ನೂತನವಾಗಿ ಕೈಗೊಂಡ ಕಾಮಗಾರಿಗಳು ಸೇರಿದಂತೆ ಪ್ರಧಾನಿ ಮೋದಿ ಸರ್ಕಾರ ನೀಡುತ್ತಿರುವ ಅನ್ನಭಾಗ್ಯದ ೫ ಕೆಜಿ ಹೊರತುಪಡಿಸಿ ತಮ್ಮ ಸರ್ಕಾರದ ವತಿಯಿಂದ ನೀಡುವ ಅಕ್ಕಿ ಯೋಜನೆ, ಕ್ಷೇತ್ರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಹಾಗೂ ಭತ್ತ ಕೃಷಿಕರಿಗೆ ಆದ ನಷ್ಟದಲ್ಲಿ ಕ್ಷೇತ್ರವನ್ನು ಬರಗಾಲವೆಂದು ಘೋಷಿಸಿದ್ದರೂ ರೈತರಿಗೆ ಸಿಕ್ಕ ಪರಿಹಾರ ಕ್ರಮಗಳು, ಕಾವೇರಿ ನದಿ ದಂಡೆಯಲ್ಲಿ ವಾಸಿಸುತ್ತಿರುವ ಬಡ ಜನರು ಪ್ರವಾಹ ಸಂದರ್ಭ ಎದುರಿಸುತ್ತಿರುವ ಸಮಸ್ಯೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡುವಂತೆ ಆಗ್ರಹಿಸಿ ವಿವಿಧ ೧೬ ಪ್ರ‍್ರಶ್ನೆಗಳ ಮಾಹಿತಿಯನ್ನು ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲದ ಅಧ್ಯಕ್ಷರಾದ ಸುವಿನ್ ಗಣಪತಿ ಮುಂದಾಳತ್ವದ ಬಿಜೆಪಿ ಪಕ್ಷದ ಪದಾಧಿಕಾರಿಗಳು ಸಲ್ಲಿಸಿದರು.

ಬಿಜೆಪಿ ಪಕ್ಷವು ಕೇಳಿರುವ ಪ್ರಶ್ನೆಗಳಿಗೆ ಮಾಧ್ಯಮದ ಮುಂದೆ ಮತದಾರರಿಗೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಶಾಸಕ ಎ.ಎಸ್. ಪೊನ್ನಣ್ಣನವರ ಅನುಪಸ್ಥಿತಿ ಯಲ್ಲಿ ಆಪ್ತಕಾರ್ಯದರ್ಶಿಗಳಾದ ಭಗವಾನ್ ಮನವಿ ಸ್ವೀಕರಿಸಿ, ಶಾಸಕರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದಾರೆ. ತಾವು ನೀಡಿರುವ ಮನವಿ ಪತ್ರವನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.

ಮನವಿ ಸಲ್ಲಿಕೆ ಸಂದರ್ಭ ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷರಾದ ಪಳೆಯಂಡ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲಿರ ಚಲನ್ ಕುಮಾರ್, ಕುಂಞAಗಡ ಅರುಣ್ ಭೀಮಯ್ಯ, ವಿ.ಕೆ. ಲೋಕೇಶ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

-ಹೆಚ್.ಕೆ.ಜಗದೀಶ್