ಮಡಿಕೇರಿ, ಫೆ. ೧೦ : ಮಡಿಕೇರಿಯ ತಾಲೂಕು ಕಚೇರಿಗೆ ಅಂಟಿಕೊAಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರವೇಶದಲ್ಲಿನ ಮೇಲ್ಛಾವಣಿಯು ಕಳೆದ ಮಳೆಗಾಲದಲ್ಲಿ ಭಾಗಶಃ ಕುಸಿದಿದ್ದು, ದುರಸ್ತಿ ಭಾಗ್ಯ ದೊರಕುವ ಮುನ್ನ ಮತ್ತೊಂದು ಮಳೆಗಾಲ ಆಗಮಿಸಿ ಅವಾಂತರ, ಅಪಾಯ ಸೃಷ್ಟಿಸುವಲ್ಲಿ ಯಾವುದೇ ಸಂಶಯವಿಲ್ಲ. ಕಚೇರಿಯನ್ನು ದುರಸ್ತಿ ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಅಂದಾಜು-ಪಟ್ಟಿ ತಯಾರಾಗಿದ್ದರೂ ಮಳೆ-ಪರಿಹಾರ ನಿಧಿ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದಿಲ್ಲ, ಇತರ ನಿಧಿಗಳಲ್ಲಿ ಅನುದಾನವಿಲ್ಲ ಎಂಬ ಉತ್ತರ ದೊರಕುತ್ತಿರುವುದಾಗಿ ತಿಳಿದುಬಂದಿದೆ. ಮಳೆನೀರು ಕಚೇರಿಯೊಳಗೆ ಸೇರಿ ವಿದ್ಯುತ್ ವೈರ್ಗಳು ಸೇರಿದಂತೆ, ಬೀರು-ಕಪಾಟುಗಳನ್ನು ಹಾನಿಪಡಿಸುವುದನ್ನು ತಪ್ಪಸಲು ಛಾವಣಿಯಲ್ಲಳವಡಿಸಿದ್ದ ಟಾರ್ಪಲ್ ಚಳಿಗಾಲದ ಗಾಳಿಗೆ ಹಾರುವ ಸ್ಥಿತಿ ತಲುಪಿದ ಕಾರಣ ಇದೀಗ ಅದನ್ನೂ ತೆರವುಗೊಳಿಸಿರುವ ಪರಿಣಾಮ ಪ್ರವೇಶ ದ್ವಾರದಲ್ಲಿನ ತೆರೆದ ಛಾವಣಿಯೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹಾಗೂ ಕಚೇರಿ ಸಿಬ್ಬಂದಿಗಳನ್ನು ಪ್ರತಿನಿತ್ಯ ಸ್ವಾಗತಿಸುತ್ತಿದೆ.
ರೂ.೩.೬ ಲಕ್ಷ ವೆಚ್ಚದಲ್ಲಿ ದುರಸ್ತಿ ಪಡಿಸಲು ಪ್ರಸ್ತಾವನೆ
ಕಳೆದ ೩ ತಿಂಗಳುಗಳ ಹಿಂದೆ ಲೋಕೋಪಯೋಗಿ ಇಲಾಖೆ ಸಲ್ಲಿಸಿರುವ ಅಂದಾಜು ಮೊತ್ತದ ವಿವರ
ಕಚೇರಿ ಪ್ರವೇಶ ದ್ವಾರದ ಪ್ರದೇಶವನ್ನು ಸಂಪೂರ್ಣ ನೆಲಸಮಗೊಳಿಸಲು ಅಂದಾಜು ಮೊತ್ತ ರೂ.೧೩,೦೫೦ ಖರ್ಚಾಗಲಿದೆ. ಮೇಲ್ಛಾವಣಿ ದುರಸ್ತಿ ಕೆಲಸಕ್ಕೆ ರೂ.೧.೩೩ ಲಕ್ಷ, ಬೆಂಬಲಕ್ಕೆ ಅಗತ್ಯವಿರುವ ಲಿಂಟೆಲ್ ಬೀಮ್ ನಿರ್ಮಾಣಕ್ಕೆ ರೂ.೧೬,೦೩೬, ಇಟ್ಟಿಗೆ ಸಂಬAಧಿ ಕಾಮಗಾರಿಗಳಿಗೆ ರೂ.೩೩,೮೭೧, ಪ್ಲಾಸ್ಟರಿಂಗ್ ಕಾರ್ಯಗಳಿಗೆ ರೂ.೧೪,೩೦೫, ಸುಣ್ಣ-ಬಣ್ಣಕ್ಕೆ ರೂ.೩೨,೩೭೬, ಬಾಗಿಲು-ಕಿಡಕಿಗಳ ನಿರ್ಮಾಣಕ್ಕೆ ರೂ.೪೪,೦೬೦ ಸೇರಿ ಒಟ್ಟು ಮೊತ್ತ ರೂ.೨.೮೭ ಲಕ್ಷ ಆಗಲಿದೆ. ಜಿ.ಎಸ್.ಟಿ ಹಾಗೂ ಇತರ ಸಣ್ಣ-ಪುಟ್ಟ ಕೆಲಸಗಳು ಸೇರಿ ಒಟ್ಟು ಮೊತ್ತ ರೂ.೩.೬ ಲಕ್ಷ ವೆಚ್ಚವಾಗಲಿರುವುದಾಗಿ ಅಂದಾಜು ಪಟ್ಟಿ ಲೋಕೋಪಯೋಗಿ ಇಲಾಖೆಯಿಂದ ತಯಾರಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ನಿರ್ಮಿತಿ ಕೇಂದ್ರ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗಕ್ಕೆ ಕಚೇರಿಯ ದುರಸ್ತಿ ಸಂಬAಧ ಅಂದಾಜು ಪಟ್ಟಿ ತಯಾರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇವೆರಡು ಇಲಾಖೆಗಳಿಂದ ಅಂದಾಜು ಪಟ್ಟಿ ತಯಾರಾಗದ ಕಾರಣ ಲೋಕೋಪಯೋಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ನಿರ್ಮಿತಿ ಕೇಂದ್ರ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗಕ್ಕೆ ಕಚೇರಿಯ ದುರಸ್ತಿ ಸಂಬAಧ ಅಂದಾಜು ಪಟ್ಟಿ ತಯಾರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇವೆರಡು ಇಲಾಖೆಗಳಿಂದ ಅಂದಾಜು ಪಟ್ಟಿ ತಯಾರಾಗದ ಕಾರಣ ಲೋಕೋಪಯೋಗಿ ಇಲಾಖೆಗೆ ದುರಸ್ತಿ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲು ಮನವಿ ಮಾಡಿದ್ದು, ಕಚೇರಿ ಮುಂಭಾಗವನ್ನು ಕೆಡವಿ ಮರುನಿರ್ಮಿಸಲು ರೂ.೩.೬ ಲಕ್ಷ ವೆಚ್ಚವಾಗುವುದಾಗಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಪಟ್ಟಿಯ ವರದಿ ತಯಾರಾಗಿದೆ. ಈ ಅಂದಾಜು ಪಟ್ಟಿಯ ಪ್ರತಿಯೊಂದಿಗೆ ಕಚೇರಿ ದುರಸ್ತಿ ಪಡಿಸುವ ಮನವಿ ಜಿಲ್ಲಾಧಿಕಾರಿ ಕಚೇರಿ ತಲುಪಿದೆಯಾದರೂ ಕಾಮಗಾರಿ ಸದ್ಯದಲ್ಲಿ ನಡೆಯುವ ಯಾವುದೇ ಕುರುಹುಗಳು ಇಲ್ಲವಾಗಿದೆ. -ಪ್ರಜ್ವಲ್ ಜಿ.ಆರ್, ಟಿ.ಜಿ ಸತೀಶ್