ವೀರಾಜಪೇಟೆ, ಫೆ. ೧೦: ವೀರಾಜಪೇಟೆ ನಗರದ ಕಾಲ್ಚೆಂಡು ಮತ್ತು ಸೇವಾ ಸಂಸ್ಥೆಯಾದ ಸಿ.ಸಿ.ಬಿ. ವತಿಯಿಂದ ೮ನೇ ರಾಷ್ಟçಮಟ್ಟದ ಪುರುಷರ ಸೂಪರ್ ೫+೨ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟ ತಾ. ೧೬ ರಿಂದ ಆರಂಭವಾಗಲಿದೆ.

ಕೂರ್ಗ್ ಕಾವೇರಿ ಬ್ರಿಗೇಡಿರ‍್ಸ್ ಕಾಲ್ಚೆಂಡು ಸಂಸ್ಥೆ ವತಿಯಿಂದ ತಮ್ಮ ೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಲೂಕು ಮೈದಾನದಲ್ಲಿ ಪುರುಷರ ರಾಷ್ಟçಮಟ್ಟದ ಟೈಗರ್ ೫+೨ ಕಾಲ್ಚೆಂಡು ಹೊನಲು ಬೆಳಕಿನ ಪಂದ್ಯಾಟಗಳು ನಡೆಯಲಿದೆ.

ತಾ. ೧೭ ಮತ್ತು ೧೮ ರಂದು ಫೈನಲ್ಸ್ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಕಾಲ್ಚೆಂಡು ಕ್ರೀಡೆಗೆ ಪ್ರೋತ್ಸಾಹ ನೀಡುವ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸತತ ೭ ವರ್ಷಗಳಿಂದ ಕಾಲ್ಚೆಂಡು ಪಂದ್ಯಾಟಗಳನ್ನು ಆಯೋಜಿಸಿಕೊಂಡು ಬರಲಾಗಿದೆ. ಅಲ್ಲದೆ ಸಂಸ್ಥೆಯು ಕ್ರೀಡೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.

ಕಾಲ್ಚೆಂಡು ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ರೂ. ೧,೦೦,೦೦೧ ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೭೦,೦೦೭ ನಗದು ಮತ್ತು ಟ್ರೋಫಿ ನೀಡಲಾಗುವುದು. ವೈಯಕ್ತಿಕ ಸಾಧನೆಗೈದ ಕ್ರೀಡಾಪಟುಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಅಭಿನವ್ ಮಾಹಿತಿ ನೀಡಿದರು.

ತಂಡಗಳ ನೋಂದಣಿಗೆ ತಾ. ೧೨ ಕೊನೆಯ ದಿನವಾಗಿದೆ. ತಂಡ ನೋಂದಾಯಿಸಿಕೊಳ್ಳಲು ೯೩೫೩೫೫೩೦೨೨ ಮತ್ತು ೯೩೫೩೫೩೯೮೪೮ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.