ಮಡಿಕೇರಿ, ಫೆ. ೧೦: ಮಡಿಕೇರಿ ನಗರಸಭೆ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ‘ದಿ ಅರ್ಬನ್ ಇಂಟರ್ನ್ಶಿಪ್ ಲರ್ನಿಂಗ್ ಪ್ರೋಗ್ರಾಮ್ (ಟಿಯುಎಲ್‌ಐಪಿ) ಕಾರ್ಯಕ್ರಮದಡಿ ಮಡಿಕೇರಿ ನಗರಸಭೆ ವತಿಯಿಂದ ಡೇ-ನಲ್ಮ್ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ೮ ರಿಂದ ೧೨ ವಾರಗಳ ಅವಧಿಯ ಇಂಟರ್ನ್ಶಿಪ್ ತರಬೇತಿಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮೊ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಗರ ಕಲಿಕ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ೨೦೨೩-೨೪ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು, ಡೇ-ನಲ್ಮ್ ಅಭಿಯಾನದ ಉಪಘಟಕಗಳು ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ತರಬೇತಿ ಉದ್ದೇಶವಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಸ್ಟೆöÊಫಂಡ್ ಪಾವತಿಸಲಾಗುವುದು.

ಆಸಕ್ತರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ೭ ದಿನಗಳ ಒಳಗೆ ಅರ್ಜಿಯನ್ನು ನಗರಸಭೆ ಮಡಿಕೇರಿ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ ಮಡಿಕೇರಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ

ಮಡಿಕೇರಿ: ಕೇಂದ್ರ ಸರ್ಕಾರದಿಂದ ಮಿಷನ್ ಶಕ್ತಿ ಯೋಜನೆಯಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಡಗು ಜಿಲ್ಲೆ ಇವರ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ ಜಿಲ್ಲಾ ಮಹಿಳಾ ಸಬಲೀಕರಣ ಘಟಕಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಮಿಷನ್ ಸಂಯೋಜಕರು, ಪಿಎಂಎAವಿವೈ ಜಿಲ್ಲಾ ಸಂಯೋಜಕರು, ಹಣಕಾಸು ಸಾಕ್ಷರತೆ ಮತ್ತು ಲೆಕ್ಕ ಪರಿಶೋಧಕ ತಜ್ಞರ ವಿದ್ಯಾರ್ಹತೆ ನಿಗದಿಪಡಿಸಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಮಿಷನ್ ಸಂಯೋಜಕರು ಮತ್ತು ಪಿಎಂಎAವಿವೈ ಜಿಲ್ಲಾ ಸಂಯೋಜಕರ ಹುದ್ದೆಗೆ ಸಮಾಜ ವಿಜ್ಞಾನದಲ್ಲಿ ಪದವಿ, ಲೈಪ್‌ಸೈನ್ಸ್, ನ್ಯೂಟ್ರೀಷನ್, ಮೆಡಿಷಿನ್, ಹೆಲ್ತ್ ಮ್ಯಾನೇಜ್‌ಮೆಂಟ್, ಸಾಮಾಜಿಕ ಕೆಲಸ, ರೂರಲ್ ಮ್ಯಾನೇಜ್‌ಮೆಂಟ್, ೩ ವರ್ಷಗಳ ಅನುಭವ ಹೊಂದಿರಬೇಕು.

ಹಣಕಾಸು ಸಾಕ್ಷರತೆ ಮತ್ತು ಲೆಕ್ಕ ಪರಿಶೋಧಕ ತಜ್ಞರ ಹುದ್ದೆಗೆ ಎಕಾನಾಮಿಕ್ ಪದವಿ, ಬ್ಯಾಂಕಿAಗ್, ಮತ್ತಿತರ. ಪೋಸ್ಟ್ ಗ್ರಾö್ಯಜ್ಯುವೇಟ್ಸ್ ವಿದ್ಯಾರ್ಹತೆ ಹೊಂದಿರಬೇಕು. ೩ ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸಲು ತಾ. ೧೭ ಕೊನೆಯ ದಿನವಾಗಿದೆ. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸುವುದು. ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ “ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‌ಗೇಟ್ ಹತ್ತಿರ, ಮೈಸೂರು ರಸ್ತೆ ಮಡಿಕೇರಿ-೫೭೧೨೦೧” ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೭೨-೨೯೮೩೭೯ ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು ತಿಳಿಸಿದ್ದಾರೆ.

ಗ್ರಾಮ ಒನ್ ಕೇಂದ್ರ ಪ್ರಾಂಚೈಸಿಗಳಿAದ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೧೪ ಗ್ರಾಮ ಪಂಚಾಯಿತಿಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ’/ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಮಡಿಕೇರಿಯ ಹೊಸ್ಕೇರಿ, ಹಾಕತ್ತೂರು ಮತ್ತು ಕರಿಕೆ, ಪೊನ್ನಂಪೇಟೆಯ ನಿಟ್ಟೂರು, ಬಲ್ಯಮಂಡೂರು, ಕೆ. ಬಾಡಗ, ಬಿ. ಶೆಟ್ಟಿಗೇರಿ, ಕಿರುಗೂರು ಮತ್ತು ನಾಲ್ಕೇರಿ, ಸೋಮವಾರಪೇಟೆಯ ಬೆಟ್ಟದಳ್ಳಿ ಮತ್ತು ಗರ್ವಾಲೆ, ವೀರಾಜಪೇಟೆಯ ಕಾಕೋಟುಪರಂಬು, ಬೆಟೋಳಿ ಮತ್ತು ಅಮ್ಮತ್ತಿ.

ಆಸಕ್ತ ಪ್ರಾಂಚೈಸಿಗಳು hಣಣಠಿs://ಞಚಿಟ-mಥಿs.gಡಿಚಿmಚಿoಟಿe. ಞಚಿಡಿಟಿಚಿಣಚಿಞಚಿ.gov.iಟಿ/ ಮೂಲಕ ಅರ್ಜಿ ಸಲ್ಲಿಸಲು ತಾ. ೧೫ ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ೯೧೪೮೭೧೨೪೭೩, ಇ-ಮೇಲ್ ಐಡಿ ಛಿಚಿಡಿe@bಟsiಟಿಣeಡಿಟಿಚಿಣioಟಿಚಿಟ.ಟಿeಣ ಜಿಲ್ಲಾಧಿಕಾರಿಗಳ ಕಚೇರಿ ಸಮಾಲೋಚಕರು ೯೬೧೧೬೫೭೩೪೪/ ೯೯೦೦೩೮೫೩೦೧ ನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ತಿಳಿಸಿದ್ದಾರೆ.

ಪ್ರಬಂಧ-ಚಿತ್ರಕಲಾ ಸ್ಪರ್ಧೆಗೆ ಆಹ್ವಾನ

ಮಡಿಕೇರಿ: ಸಂವಿಧಾನ ದಿನಾಚರಣೆಯ ೭೫ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯಾದ್ಯಂತ ತಾ. ೨೩ ರವರೆಗೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತದ ವತಿಯಿಂದ ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಮುಕ್ತ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯ ವಿಷಯ ‘ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ.’ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ (ಭಾರತ ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕು ಮತ್ತು ಕರ್ತವ್ಯಗಳ ಹಿನ್ನೆಲೆಯಲ್ಲಿ)’ ಸ್ಪರ್ಧೆಯು ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಮುಕ್ತವಾಗಿ ನಡೆಯಲಿದೆ.

ಪ್ರಬಂಧ ಸ್ಪರ್ಧೆಗೆ ನೀಡಿರುವ ವಿಷಯಗಳಲ್ಲಿ ಯಾವುದಾದರು ಒಂದು ವಿಷಯವನ್ನು ಆಯ್ಕೆ ಮಾಡಿ ಸ್ಪುಟವಾದ ಕೈಬರಹಗಳಲ್ಲಿ ಎ೪ ಅಳತೆಯ ಕಾಗದಗಳಲ್ಲಿ ೧೫೦೦ ಪದಗಳಿಗೆ ಮೀರದಂತೆ ಬರೆದು ಕಳುಹಿಸುವುದು. ಚಿತ್ರಕಲಾ ಸ್ಪರ್ಧೆಗೆ ಸಂಬAಧಿಸಿದAತೆ ನೀಡಿರುವ ವಿಷಯಗಳ ಬಗ್ಗೆ ಎ೩ ಅಳತೆಯ ಡ್ರಾಯಿಂಗ್ ಶೀಟ್‌ನಲ್ಲಿ ಚಿತ್ರ ರಚನೆ ಮಾಡಿ ಸಲ್ಲಿಸುವುದು.

ಪ್ರಬಂಧ ಸ್ಪರ್ಧೆಯ ಪ್ರಬಂಧಗಳನ್ನು ಹಾಗೂ ಚಿತ್ರಕಲಾ ಸ್ಪರ್ಧೆಯ ಚಿತ್ರಗಳನ್ನು ತಾ. ೨೫ ರಂದು ಸಂಜೆ ೪.೩೦ ರ ಒಳಗೆ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಹತ್ತಿರ, ಎಸ್.ಜಿ.ಎಸ್.ವೈ ಕಟ್ಟಡ, ಕೊಡಗು ಜಿಲ್ಲೆ, ಮಡಿಕೇರಿ. ದೂರವಾಣಿ ಸಂಖ್ಯೆ: ೦೮೨೭೨-೨೨೫೫೩೧ಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ತಲುಪಿಸುವುದು. ಕೊನೆಯ ದಿನಾಂಕದ ನಂತರ ಬರುವ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಹಾಗೂ ತೃತೀಯ ರೂ. ೨ ಸಾವಿರಗಳ ನಗದು ಬಹುಮಾನ ನೀಡಲಾಗುವುದು. ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.