ಶನಿವಾರಸಂತೆ, ಫೆ. ೧೦: ಪಟ್ಟಣದ ಚೇತನ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ನೇತೃತ್ವದಲ್ಲಿ ಗುಡುಗಳಲೆ ಶ್ರೀಜಯದೇವ ಜಾನುವಾರುಗಳ ಜಾತ್ರಾ ಸಮಿತಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಕಂಪ್ಯೂಟರೈಸ್ಡ್ ಕಣ್ಣಿನ ತಪಾಸಣಾ ಶಿಬಿರ ಮತ್ತು ರಕ್ತ ತಪಾಸಣಾ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಜಾತ್ರಾ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ರವರೆಗೆ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ೨೫ ಮಂದಿ ರಕ್ತದಾನ ಮಾಡಿದರು. ೨೫೦ ಮಂದಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಂಡರು. ೧೫೦ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು, ಕನ್ನಡಕವನ್ನು ಪಡೆದುಕೊಂಡರು.

ಲ್ಯಾಬೋರೇಟರಿ ಮಾಲೀಕ ಚೇತನ್, ಚನ್ನರಾಯಪಟ್ಟಣದ ಸ್ವಯಂ ಪ್ರೇರಿತ ರಕ್ತದಾನ ಕೇಂದ್ರದ ಭರತ್, ವೈದ್ಯರಾದ ಡಾ.ಅರ್ಜುನ್, ಡಾ.ಫಾರೂಕ್, ಶೂಶ್ರೂಷಕಿಯರು, ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.