ಸೋಮವಾರಪೇಟೆ, ಫೆ. ೧೦: ಜೆ.ಸಿ.ಐ. ಪುಷ್ಪಗಿರಿ ಮಹಿಳಾ ಘಟಕದ ವತಿಯಿಂದ ಸಮೀಪದ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ "ಪಿಂಕಥಾನ್" ಕ್ಯಾನ್ಸರ್ ಅರಿವು ಜಾಗೃತಿ ಶಿಬಿರ ಹಾಗೂ ಜಾಗೃತಿ ಜಾಥಾ ನಡೆಯಿತು.
ಶಿಬಿರವನ್ನು ಶಾಂತಳ್ಳಿ ಆರೋಗ್ಯ ಕೇಂದ್ರದ ಡಾ. ಚಾರುಮತಿ ಸಿ. ಆಚಾರ್ಯ ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ನ ರೋಗ ಲಕ್ಷಣಗಳು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು.
ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಜೆ.ಸಿ. ಸಂಸ್ಥೆಯ ವಿದ್ಯಾ ಸೋಮೇಶ್, ಕ್ಯಾನ್ಸರ್ ಬಂದವರು ಆತ್ಮಸ್ಥೆöÊರ್ಯದಿಂದ ಇರಬೇಕು. ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸೀತಾಫಲ ಮತ್ತು ರಾಮಫಲ ಹಣ್ಣನ್ನು ವರ್ಷಕ್ಕೆ ಒಂದು ಕೆ.ಜಿ. ಯಾದರೂ ಪ್ರತಿಯೊಬ್ಬರು ಸೇವನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಮಹಿಳಾ ಘಟಕದ ಅಧ್ಯಕ್ಷೆ ವಿನುತ ಸುದೀಪ್ ಮಾತನಾಡಿ, ಜೆ. ಸಿ.ಐ. ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ "ಪಿಂಕಥಾನ್" ಹೆಸರಿನಲ್ಲಿ ಕ್ಯಾನ್ಸರ್ ಜಾಗೃತಿ ಶಿಬಿರ ಹಾಗೂ ಜಾಗೃತಿ ಜಾಥಾವನ್ನು ಫೆಬ್ರವರಿ ತಿಂಗಳಲ್ಲಿ ಭಾರತದಾದ್ಯಂತ ಹಮ್ಮಿಕೊಂಡಿದೆ ಎಂದರು. ಪ್ರತಿಯೊಬ್ಬರಲ್ಲೂ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಮನುಕುಲಕ್ಕೆ ಮಾರಕವಾಗಿರುವ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಉತ್ತಮ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಕ್ಯಾನ್ಸರ್ ಬಗ್ಗೆ ಜಾಗೃತರಾಗೋಣ ಎಂದರು. ನಂತರ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಗ್ರಾಮದ ಪ್ರಮುಖ ಬೀದಿಯಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾವನ್ನು ನಡೆಸಲಾಯಿತು. ಜಾಥಾದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಶಾಂತಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಶಾಂತಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಘಟಕದ ಸದಸ್ಯರು ಪಾಲ್ಗೊಂಡಿದ್ದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಿರಣ್ ಕುಮಾರ್, ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷ ವಸಂತ್ ಎಸ್.ಆರ್., ಕಾರ್ಯದರ್ಶಿ ಜಗದಾಂಬ ಗುರುಪ್ರಸಾದ್, ವಲಯ ಕಾರ್ಯದರ್ಶಿ ಮಾಯಾ ಗಿರೀಶ್, ಖಜಾಂಚಿ ಪುಷ್ಪಕ್, ಮನೋಹರ್, ನಿರ್ದೇಶಕರಾದ ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.