ಸೋಮವಾರಪೇಟೆ, ಫೆ. ೧೦ : ಇಲ್ಲಿನ ಆಲೇಕಟ್ಟೆ ರಸ್ತೆಯ ಆರ್‌ಎಂಸಿ ಮುಂಭಾಗವಿರುವ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ತಾ. ೧೨ (ನಾಳೆ) ಮತ್ತು ತಾ. ೧೩ರಂದು ದೇವಾಲಯದ ವಾರ್ಷಿಕೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ನಡೆಯಲಿದೆ.

ತಾ.೧೨ರಂದು ಬೆಳಿಗ್ಗೆ ಗಣಪತಿ ಹೋಮ, ಪುಣ್ಯಾಹ ವಾಚನ, ದೇವನಾಂದಿ, ಋತ್ವಿಗ್‌ವರ್ಣ, ಪಂಚವಿAಶತಿ, ಕಳಸ ಪ್ರತಿಷ್ಠೆ, ಕಲಾತತ್ಪಾದಿ ಹೋಮ, ೧೨ ಗಂಟೆಗೆ ಪೂರ್ಣಾಹುತಿ, ೧೨.೩೦ರಿಂದ ಕಲಶಸ್ಥಾಪನಾಧಿವಾಸ ಪೂಜೆ, ೧ ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೧೩ರಂದು ಬೆಳಿಗ್ಗೆ ೧೦ ರಿಂದ ೧೨.೩೦ರವರೆಗೆ ಶ್ರೀನಿವಾಸ ಕಲ್ಯಾಣ ಪೂಜಾ ಕಾರ್ಯಕ್ರಮ, ೧೨.೩೦ಕ್ಕೆ ಮಹಾ ಮಂಗಳಾರತಿ, ೧ ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಪೂಜಾ ಕೈಂಕರ್ಯಗಳು ರಾಘವೇಂದ್ರ ಭಟ್ ಅವರ ಪೌರೋಹಿತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಪಿ. ಭೀಮಯ್ಯ ತಿಳಿಸಿದ್ದಾರೆ.