ಚೆಯ್ಯಂಡಾಣೆ, ಫೆ. ೧೦: ಪಯ್ಯವೂರ್ ಶಿವ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಊಟ್ ಉತ್ಸವಕ್ಕೆ ಮುಂಡ್ಯೋಳAಡ ಹಾಗೂ ಬೋವ್ವೇರಿಯಂಡ ತಕ್ಕ ಮುಖ್ಯಸ್ಥರು ಐನ್ ಮನೆಯಿಂದ ಎತ್ತು ಪೋರಾಟದೊಂದಿಗೆ ತೆರಳಿದ್ದಾರೆ.

ತಾ. ೧೨ ರಂದು ಬೆಳಿಗ್ಗೆ ೭ ಗಂಟೆಗೆ ಮುಂಡ್ಯೋಳAಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರು ಅಕ್ಕಿಯನ್ನು ಕ್ಷೇತ್ರದಲ್ಲಿ ಅರ್ಪಿಸುತ್ತಾರೆ. ನಂತರ ಸಂಜೆ ಅಕ್ಕಿ ಅಳ್‌ಪೊ ಶಾಸ್ತçದ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಲಿದ್ದು, ತಾ. ೧೯ ರಂದು ನಾಡಿನ ಭಕ್ತಾದಿಗಳು ಎತ್ತು ಪೋರಾಟ ದೊಂದಿಗೆ ಪಯ್ಯವೂರ್ ಹೊರಟು ತಾ. ೨೧ ಹಾಗೂ ತಾ. ೨೨ ರಂದು ಬೆಳಿಗ್ಗೆ ೭ ಗಂಟೆಗೆ ಅಕ್ಕಿ ಅರ್ಪಿಸಿ ಅಕ್ಕಿ ಅಳ್‌ಪೊ ಕಾರ್ಯಕ್ರಮ ನಡೆಯಲಿದೆ.

ತಾ. ೨೧ ಕ್ಕೆ ಎಂಟು ಊಟ್ ಹಬ್ಬ, ತಾ. ೨೨ ಕ್ಕೆ ಒಬ್ಬತ್ತು ಊಟ್ ಹಬ್ಬ ತಾ. ೨೩ ಕ್ಕೆ ಹತ್ತು ಊಟ್ ಹಬ್ಬ ಹಾಗೂ ಆನೆಯ ಮೇಲೆ ದೇವರ ಪ್ರದಕ್ಷಿಣೆ, ದೇವರಿಗೆ ತುಪ್ಪ ಅಭಿಷೇಕ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಮಾಹಿತಿ ನೀಡಿದರು.

ವರ್ಷಕ್ಕೆ ಒಂದು ಬಾರಿ ಕೋಮರತಚ್ಚನ್ ಮುಂಡ್ಯೋಳAಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರ ಮನೆಗೆ ತೆರಳಿ ಕಡಿಯತ್ ನಾಡು ಸುತ್ತಿ ನಂತರ ಕಡಿಯತ್ ನಾಡಿಗೆ ಒಳಪಟ್ಟ ಪೆಬ್ಬಟ್ಟಾಣೆಯಲ್ಲಿ ಮುಂಡ್ಯೋಳAಡÀ ಕುಟುಂಬಸ್ಥರಿಗೆ ಕಂಡಿಪಣ ನೀಡಿ ಕೇರಳಕ್ಕೆ ತೆರಳಿರುತ್ತಾರೆ. ಇಂದು ಈ ಎರಡು ಕುಟುಂಬಸ್ಥರು ಚೋಮಪೋರಿ ಮುಖಾಂತರ ಒಂದು ವರ್ಷಕ್ಕೆ ಇರುವ ನೈವೇದ್ಯದ ಅಕ್ಕಿಯನ್ನು ಪಯ್ಯವೂರ್ ಕ್ಷೇತ್ರಕ್ಕೆ ತಲುಪಿಸುವ ಪದ್ಧತಿ ಇದೆ. ಅದಕ್ಕೆ ಪೆಬ್ಬಟ್ಟಾನೆಯಲ್ಲಿ ಎಲ್ಲರೂ ನೆರೆದಿದ್ದೇವೆ ಇಲ್ಲಿಂದ ಕೇರಳಕ್ಕೆ ಕಾಡು ದಾರಿಯ ಮೂಲಕ ಯಾತ್ರೆ ಹೊರಡುತ್ತಿದ್ದೇವೆ ಎಂದು ಮುಂಡ್ಯೋಳAಡÀ ಪಾಪು ಮಾಚಯ್ಯ ಅವರು ಮಾಹಿತಿ ನೀಡಿದರು.