ಸಿದ್ದಾಪುರ, ಫೆ. ೧೦ : ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದ ಕಾಡು ರಸ್ತೆ ಕಾಮಗಾರಿ ಕಳಪೆ ಹಾಗೂ ಅವ್ಯವಹಾರದಿಂದ ಕೂಡಿದೆ ಎಂದು ನೀಡಿರುವ ದೂರಿನನ್ವಯ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಮಾಜಿ ಗ್ರಾ.ಪಂ ಅಧ್ಯಕ್ಷರು ವಿಚಾರಣೆಗೆ ಹಾಜರಾಗುವಂತೆ ಕೊಡಗು ಜಿಲ್ಲಾ ಓಂಬುಡ್ಸ್ ಮನ್ ಕಾರ್ಯಾಲಯದಿಂದ ಸೂಚನಾ ಪತ್ರ ನೀಡಲಾಗಿದೆ.
ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದ ಕಾಡು ರಸ್ತೆಯ ಎಸ್ಎಸ್ಟಿ ಅನುದಾನದಲ್ಲಿ ರೂ. ೨೩ ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯು ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ನೆಲ್ಲಿಹುದಿಕೇರಿ ಗ್ರಾ.ಪಂ. ಸದಸ್ಯ ಈ ಆರ್ ಶಿವದಾಸ್ ಲೆಕ್ಕ ಪರಿಶೋಧನಾ ಸಭೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಓಂಬುಡ್ಸ್ಮನ್ ಕಾರ್ಯಾಲಯದಿಂದ ವಿಚಾರಣೆಯ ಸೂಚನಾ ಪತ್ರ ಕಳುಹಿಸಲಾಗಿದೆ.
ಪತ್ರದಲ್ಲಿ ದೂರುದಾರರು ಉಲ್ಲೇಖಿಸಿದ ಕಾಮಗಾರಿಗೆ ಸಂಬAಧಿಸಿದAತೆ ನೆಲ್ಲಿಹುದಿಕೇರಿ ಗ್ರಾ.ಪಂ. ಪಿಡಿಓ ನಂಜುAಡಸ್ವಾಮಿ, ಕಾಮಗಾರಿಯ ಅವಧಿಯಲ್ಲಿ ಕರ್ತವ್ಯದಲ್ಲಿದ್ದ ಪಿಡಿಓ ಅನಿಲ್ ಕುಮಾರ್, ತಾಂತ್ರಿಕ ಸಹಾಯಕ ಇಂಜಿನಿಯರ್ಗಳಾದ ಪ್ರತೀಕ್, ಕಾರ್ತಿಕ್, ಮಾಜಿ ಗ್ರಾ.ಪಂ. ಅಧ್ಯಕ್ಷ ವರ್ಗೀಸ್ ಇವರುಗಳು ತಾ. ೧೫ ರಂದು ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಆದೇಶ ನೀಡಲಾಗಿದೆ.