ಕೃಷಿಕರಲ್ಲಿ ಅಂತರ್ಜಲ ಕುಸಿತದ ಭೀತಿ...

ಕಣಿವೆ, ಫೆ. ೯: ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿ ಕೃಷಿಯನ್ನು ಕಳೆದ ವರ್ಷ ಕೈಗೊಂಡಿದ್ದ ಬೆಳೆಗಾರರಿಗೆ ಅತ್ಯುತ್ತಮವಾದ ಹಾಗೂ ಐತಿಹಾಸಿಕವಾದ ಬೆಲೆ ದೊರಕಿದ್ದರಿಂದ ಈ ಬಾರಿ ಶುಂಠಿ ಬೆಳೆಯುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಹಾಗಾಗಿ ಕುಶಾಲನಗರ ತಾಲೂಕಿನ ಪ್ರತೀ ಗ್ರಾಮಗಳಲ್ಲಿನ ರೈತರು ಶುಂಠಿ ಬೆಳೆಯುವ ಭೂಮಿ ಹಾಗೂ ಭೂಮಿಗೆ ಹಾಕಬೇಕೆಂದಿರುವ ಬಿತ್ತನೆಯ ಬೀಜದ ಉಪಚಾರದತ್ತ ಸಂಪೂರ್ಣವಾಗಿ ಮಗ್ನರಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಯಾರ ಮನೆಗೆ ತೆರಳಿ ನೋಡಿದರೂ ಕೂಡ ಅವರ ಮನೆಯಂಗಳದಲ್ಲಿ ಬಿತ್ತನೆಗೆ ಇಟ್ಟಿರುವ ಬಿತ್ತನೆ ಬೀಜ ಕಾಣಸಿಗುತ್ತಿದೆ.

ಇನ್ನು ಹೊಲ, ಗದ್ದೆ ಹಾಗೂ ತೋಟಗಳತ್ತ ತೆರಳಿ ನೋಡಿದರೆ ಶುಂಠಿ ಬಿತ್ತನೆಗಿರುವ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸುತ್ತಿರುವ ಚಿತ್ರಣ ಕಾಣುತ್ತಿದೆ.

ಬೀಜದ ಶುಂಠಿಗೆ ರೂ. ೬,೫೦೦

ಮುಂದಿನ ಸಾಲಿಗೆ ಬಿತ್ತನೆ ಮಾಡಲು ಸಿದ್ಧತೆ ನಡೆಸಿರುವ ಕೃಷಿಕರು ೬೦ ಕೆ.ಜಿ. ತೂಕದ ಚೀಲವೊಂದರ ಬೀಜದ ಶುಂಠಿಗೆ ರೂ. ೬,೫೦೦ ಕೊಟ್ಟು ಖರೀದಿಸುತ್ತಿದ್ದಾರೆ.

ಒಂದು ಎಕರೆ ಭೂಮಿಗೆ ೨೫ ಚೀಲಗಳಷ್ಟು ಬಿತ್ತನೆ ಬೀಜದ ಅಗತ್ಯವಿದೆ.

ಹಾಗೆಯೇ ಶುಂಠಿ ಬೆಳೆವ ಒಂದು ಎಕರೆ ಭೂಮಿಗೆ ಈ ಬಾರಿ ಅತ್ಯಂತ ಗರಿಷ್ಠ ಅಂದರೆ ೭೦ ಸಾವಿರ ರೂಗಳಿಂದ ೮೦ ಸಾವಿರಗಳ ತನಕ ಲೀಸ್‌ಗೆ ಪಡೆದು ಶುಂಠಿ ಬೆಳೆಯಲು ಕೃಷಿಕರು ಅಣಿಯಾಗುತ್ತಿದ್ದಾರೆ.

ಭೋರ್ಗರೆಯುವ ಯಂತ್ರಗಳು

ಕೃಷಿಕರು ಕೈಗೊಳ್ಳಲಿರುವ ಶುಂಠಿ ಬಿತ್ತನೆಯ ಹೊಲ ಗದ್ದೆಗಳಲ್ಲಿ ಕೊಳವೆ ಬಾವಿಗಳನ್ನು ತೆರೆಯುವ ಯಂತ್ರಗಳಿAದಾಗಿ ಭೋರ್ಗರೆತದ ಶಬ್ಧ ಭೂಮಿ ತಾಯಿ ರೋಧಿಸುತ್ತಿರುವಂತೆ ಭಾಸವಾಗುತ್ತಿದೆ.

ಅಂದರೆ, ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಇದ್ದಂತಹ ಕೊಳವೆ ಬಾವಿಗಳಲ್ಲಿ ನೀರು ತಳ ಸೇರಿದೆ. ಹೊಸ ಕೊಳವೆ ಬಾವಿಗಳನ್ನು ತೆರೆಯುತ್ತಿರುವ ಕಾರಣ ಸಾವಿರಾರು ಅಡಿಗಳಷ್ಟು ಆಳಕ್ಕೆ ಕೊರೆದರೂ ಕೂಡ ನೀರು ಬರುತ್ತಿಲ್ಲ. ಹಾಗಾಗಿ ಭೂತಾಯಿಯ ಗರ್ಭವನ್ನು ಬೇಧಿಸಿ ತೆರೆಯುತ್ತಿರುವ ಕೊಳವೆ ಬಾವಿಗಳ ಯಂತ್ರಗಳ ಶಬ್ಧ ಭೂತಾಯಿಯ ರೌದ್ರ ನರ್ತನದಂತೆ ತೋರುತ್ತಿದೆ.

ಮನುಷ್ಯ ತನ್ನ ಸ್ವಾರ್ಥಕ್ಕೆ ಭೂಮಿ ತಾಯಿಯ ಪ್ರಪಾತವನ್ನು ಕೊರೆದು ನೀರನ್ನು ಮೇಲೆತ್ತುತ್ತಿದ್ದಾನೆ.

ವ್ಯಾಪಕವಾದ ಅಂತರ್ಜಲ ಕುಸಿತ

ಕಳೆದ ವರ್ಷ ಮಳೆಯೇ ಸುರಿಯದ ಕಾರಣ ಭೂಮಿ ತಾಯಿ ಬಾಯಾರಿ ಬಳಲಿ ರೋಧಿಸುತ್ತಿದ್ದಾಳೆ. ಕಳೆದ ನಾಲ್ಕು ದಶಕಗಳಿಂದ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲ ಕುಸಿತವಾಗಿದೆ ಎನ್ನಲಾಗಿದೆ. ರಾತ್ರಿ ಹಗಲೆನ್ನದೇ ದಿನದ ೨೪ ಗಂಟೆಗಳ ಕಾಲ ನಿರಂತರವಾಗಿ ಕೊಳವೆ ಬಾವಿಗಳಲ್ಲಿ ನೀರು ತೆಗೆದ ಕಾರಣ ಕೊಳವೆ ಬಾವಿಗಳನ್ನು ತೆರೆಯುವ ಯಂತ್ರಗಳಿAದಾಗಿ ಭೋರ್ಗರೆತದ ಶಬ್ಧ ಭೂಮಿ ತಾಯಿ ರೋಧಿಸುತ್ತಿರುವಂತೆ ಭಾಸವಾಗುತ್ತಿದೆ.

ಅಂದರೆ, ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಇದ್ದಂತಹ ಕೊಳವೆ ಬಾವಿಗಳಲ್ಲಿ ನೀರು ತಳ ಸೇರಿದೆ. ಹೊಸ ಕೊಳವೆ ಬಾವಿಗಳನ್ನು ತೆರೆಯುತ್ತಿರುವ ಕಾರಣ ಸಾವಿರಾರು ಅಡಿಗಳಷ್ಟು ಆಳಕ್ಕೆ ಕೊರೆದರೂ ಕೂಡ ನೀರು ಬರುತ್ತಿಲ್ಲ. ಹಾಗಾಗಿ ಭೂತಾಯಿಯ ಗರ್ಭವನ್ನು ಬೇಧಿಸಿ ತೆರೆಯುತ್ತಿರುವ ಕೊಳವೆ ಬಾವಿಗಳ ಯಂತ್ರಗಳ ಶಬ್ಧ ಭೂತಾಯಿಯ ರೌದ್ರ ನರ್ತನದಂತೆ ತೋರುತ್ತಿದೆ.

ಮನುಷ್ಯ ತನ್ನ ಸ್ವಾರ್ಥಕ್ಕೆ ಭೂಮಿ ತಾಯಿಯ ಪ್ರಪಾತವನ್ನು ಕೊರೆದು ನೀರನ್ನು ಮೇಲೆತ್ತುತ್ತಿದ್ದಾನೆ.

ವ್ಯಾಪಕವಾದ ಅಂತರ್ಜಲ ಕುಸಿತ

ಕಳೆದ ವರ್ಷ ಮಳೆಯೇ ಸುರಿಯದ ಕಾರಣ ಭೂಮಿ ತಾಯಿ ಬಾಯಾರಿ ಬಳಲಿ ರೋಧಿಸುತ್ತಿದ್ದಾಳೆ. ಕಳೆದ ನಾಲ್ಕು ದಶಕಗಳಿಂದ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲ ಕುಸಿತವಾಗಿದೆ ಎನ್ನಲಾಗಿದೆ. ರಾತ್ರಿ ಹಗಲೆನ್ನದೇ ದಿನದ ೨೪ ಗಂಟೆಗಳ ಕಾಲ ನಿರಂತರವಾಗಿ ಕೊಳವೆ ಬಾವಿಗಳಲ್ಲಿ ನೀರು ತೆಗೆದ ಕಾರಣ