ವೀರಾಜಪೇಟೆ, ಫೆ. ೧೨: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯೋತ್ಸವ ಹಾಗೂ ಸುವರ್ಣ ಸಂಭ್ರಮ ಕನ್ನಡಿಗ ಮತ್ತು ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಸಮಾರಂಭದಲ್ಲಿ ವೀರಾಜಪೇಟೆಯ ಆಕಾಂಕ್ಷ ಎ.ಆರ್. ಸುವರ್ಣ ಶ್ರೀ ಕನ್ನಡ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.
ಇವರು ರತೀಶ್ ಆಚಾರ್ಯ ಮತ್ತು ಪ್ರತಿಮಾ ಆಚಾರ್ಯ ದಂಪತಿ ಪುತ್ರಿ. ಸಂತ ಅನ್ನಮ್ಮ ಶಾಲೆಯ ೪ನೇ ತರಗತಿಯ ವಿದ್ಯಾರ್ಥಿನಿ ಹಾಗೂ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.