ನಾಪೋಕ್ಲು, ಫೆ. ೧೧: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಸಮೀಪದ ಕೊಳಕೇರಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಾಪೋಕ್ಲು - ಕಕ್ಕಬ್ಬೆ ಮುಖ್ಯ ರಸ್ತೆಯ ಕೊಳಕೇರಿ ಗ್ರಾಮದಲ್ಲಿನ ಮೋರಿಯ ಕೆಳಗೆ ದನದ ತ್ಯಾಜ್ಯವನ್ನು ಎಸೆಯುತಿದ್ದು ದುರ್ವಾಸನೆಯಿಂದ ಕೂಡಿದೆ. ಸ್ಥಳೀಯ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗಿದೆ. ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಅಸ್ಸಾಮಿ ಕಾರ್ಮಿಕರು ಆಗಮಿಸಿದ್ದು ಅವರು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಿ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಳಿವು ನೀಡಿದ ಶ್ವಾನ
ಕುಂಡ್ಯೋಳAಡ ವಿಶು ಪೂವಯ್ಯ ಎಂಬವರು ತಮ್ಮ ವಾಹನದಲ್ಲಿ ಶನಿವಾರ ಸಂಜೆ ಸಂಚರಿಸುತ್ತಿದ್ದಾಗ ಕೊಳಕೇರಿ ಮುಖ್ಯ ರಸ್ತೆಯಲ್ಲಿ ಶ್ವಾನವೊಂದು ದನದ ಬಾಲವನ್ನು ಕಚ್ಚಿಕೊಂಡು ಓಡಾಡುತ್ತಿರುವುದನ್ನು ಕಂಡು ಪರಿಶೀಲಿಸಿದಾಗ ಮೋರಿಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯಗಳನ್ನು ತುಂಬಿದ ಚೀಲವೊಂದು ಪತ್ತೆಯಾಗಿದೆ.
ಕೊಳಕೇರಿ ಗ್ರಾಮದಲ್ಲಿ ದನದ ಮಾಂಸ ವ್ಯಾಪಕ ಬಳಕೆ ಆಗುತ್ತಿದೆ. ನಾಪೋಕ್ಲು, ಫೆ. ೧೧: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಸಮೀಪದ ಕೊಳಕೇರಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಾಪೋಕ್ಲು - ಕಕ್ಕಬ್ಬೆ ಮುಖ್ಯ ರಸ್ತೆಯ ಕೊಳಕೇರಿ ಗ್ರಾಮದಲ್ಲಿನ ಮೋರಿಯ ಕೆಳಗೆ ದನದ ತ್ಯಾಜ್ಯವನ್ನು ಎಸೆಯುತಿದ್ದು ದುರ್ವಾಸನೆಯಿಂದ ಕೂಡಿದೆ. ಸ್ಥಳೀಯ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗಿದೆ. ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಅಸ್ಸಾಮಿ ಕಾರ್ಮಿಕರು ಆಗಮಿಸಿದ್ದು ಅವರು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಿ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಳಿವು ನೀಡಿದ ಶ್ವಾನ
ಕುಂಡ್ಯೋಳAಡ ವಿಶು ಪೂವಯ್ಯ ಎಂಬವರು ತಮ್ಮ ವಾಹನದಲ್ಲಿ ಶನಿವಾರ ಸಂಜೆ ಸಂಚರಿಸುತ್ತಿದ್ದಾಗ ಕೊಳಕೇರಿ ಮುಖ್ಯ ರಸ್ತೆಯಲ್ಲಿ ಶ್ವಾನವೊಂದು ದನದ ಬಾಲವನ್ನು ಕಚ್ಚಿಕೊಂಡು ಓಡಾಡುತ್ತಿರುವುದನ್ನು ಕಂಡು ಪರಿಶೀಲಿಸಿದಾಗ ಮೋರಿಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯಗಳನ್ನು ತುಂಬಿದ ಚೀಲವೊಂದು ಪತ್ತೆಯಾಗಿದೆ.
ಕೊಳಕೇರಿ ಗ್ರಾಮದಲ್ಲಿ ದನದ ಮಾಂಸ ವ್ಯಾಪಕ ಬಳಕೆ ಆಗುತ್ತಿದೆ.