ಸಭೆಗೆ ನಗರಸಭಾ ಸದಸ್ಯರುಗಳ ಗೈರು..!
ಮಡಿಕೇರಿ, ಫೆ. ೧೧: ತೀವ್ರ ಕುತೂಹಲ ಕೆರಳಿಸಿದ್ದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಸ್ಥಾನಕ್ಕೆ ನಾಪಂಡ ರವಿಕಾಳಪ್ಪ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಪಕ್ಷದ ಪದಾಧಿಕಾರಿಗಳು, ವಿವಿಧ ಮಂಡಲ, ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಹಲವಷ್ಟು ಆಕಾಂಕ್ಷಿಗಳಿದ್ದರೂ ಕನಿಷ್ಟ ಆಕಾಂಕ್ಷಿಗಳ., ಪಕ್ಷದ ಪ್ರಮುಖರ ಅಭಿಪ್ರಾಯ ಪಡೆಯದೇ, ಸಭೆ ನಡೆಸದೇ ಆಯ್ಕೆ ಮಾಡಲಾಗಿದೆ ಎಂಬ ಅಸಮಾಧಾನ ಪಕ್ಷದಲ್ಲಿ ಕಂಡುಬರುತ್ತಿದೆ..
ಮಡಿಕೇರಿ ನಗರ ಮಂಡಲ ಅಧ್ಯಕ್ಷ ಸ್ಥಾನ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನದ ಬಗ್ಗೆ ಮಡಿಕೇರಿ ನಗರದಲ್ಲಿ ತೀವ್ರ ಅಸಮಾಧಾನ ವ್ಯಕ್ತಗೊಂಡಿದೆ. ಮಡಿಕೇರಿ ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಾಗಿದ್ದರು. ಆದರೆ ಅವರುಗಳಾರನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಕೆಲವು ಮುಖಂಡರು ಏಕಪಕ್ಷೀಯ ನಿರ್ಧಾರ ತಳೆದಿರುವದಾಗಿ ಪಕ್ಷದ ಕಾರ್ಯಕರ್ತರ ಅಸಮಾಧಾನವಾಗಿದೆ.
ಇದಕ್ಕೆ ಪೂರಕವೆಂಬAತೆ ಶನಿವಾರ ಮಡಿಕೇರಿಯಲ್ಲಿ ನಡೆದ ಗ್ರಾಮ ಚಲೋ ಕಾರ್ಯಕ್ರಮ ಸಂಬAಧ ನಡೆದ ಸಭೆಗೆ ಹಲವರು ಗೈರು ಹಾಜರಾಗಿದ್ದಾರೆ. ಮಡಿಕೇರಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ೧೬ ಮಂದಿ ಸದಸ್ಯರುಗಳಿದ್ದು, ಈ ಪೈಕಿ ಮೂವರು ಮಾತ್ರ ಸಭೆಗೆ ಹಾಜರಾಗಿದ್ದಾರೆ. ಇನ್ನುಳಿದ ಹದಿಮೂರು ಮಂದಿ ಸಾಮೂಹಿಕ ಗೈರು ಹಾಜರಾಗಿದ್ದಾರೆ.
ಜಾತಿ ರಾಜಕೀಯ ಕೂಡ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದ್ದು, ಮಡಿಕೇರಿಯ ಮುಖಂಡರೋರ್ವರು ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ವಿಧಾನ ಸಭಾಧ್ಯಕ್ಷರನ್ನು ಕಡೆಗಣಿಸಿ ಒಂದು ಪಾಳಯಕ್ಕೆ ಮಣೆ ಹಾಸಿದ್ದಾರೆ ಎಂಬ ಮಾತು ನಗರದೊಳಗಡೆ ಸುಳಿದಾಡುತ್ತಿದೆ..
ಇದರೊಂದಿಗೆ ಇದುವರೆಗೆ ನಗರ, ತಾಲೂಕು, ಜಿಲ್ಲಾ ಘಟಕಗಳಲ್ಲಿ ಅಧಿಕಾರ ಹೊಂದಿದವರಿಗೇ ಮತ್ತೆ ಮಣೆ ಹಾಕಿರುವದು ಆಕಾಂಕ್ಷಿಗಳಾಗಿದ್ದ ಸಕ್ರಿಯ ಕಾರ್ಯಕರ್ತರ ಅಸಮಾಧಾನದ ಹೊಗೆಯಾಗಿದೆ. ಚುನಾವಣೆ ಎದುರಾಗುತ್ತಿದ್ದು ಇಂತಹ ಸನ್ನಿವೇಶದಲ್ಲಿ ಶಿಸ್ತಿನ ಸಿಪಾಯಿಯಾಗಿರುವ ಭಾರತೀಯ ಜನತಾ ಪಾರ್ಟಿಯೊಳಗಿನ ಈ ಅಸಮಾಧಾನ ಯಾವ ರೀತಿಯ ಫಲಿತಾಂಶ ತರಬಲ್ಲದು ಎಂಬದೇ ಪ್ರಶ್ನೆ. !??