ವೀರಾಜಪೇಟೆ, ಫೆ. ೧೧: ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ನ ವಾರ್ಷಿಕ ಉತ್ಸವ ಜರುಗಿತು. ವಾರ್ಷಿಕ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಸನದ ಧರ್ಮಗುರು ಅಲ್ವಿನ್ ಡಿಸೋಜಾ, ಸಿರಿಲ್ ಆನಂದ ಧÀ್ವಜಾರೋಹಣ, ಜಪಸರ, ದಿವ್ಯ ಬಲಿಪೂಜೆ ಸಲ್ಲಿಸಿದರು.
ಚರ್ಚ್ನ ಪ್ರಧಾನ ಗುರುಗಳಾದ ರೆ. ಫಾ. ಡಾ. ದಯಾನಂದ ಪ್ರಭು ಆಡಂಬರ ಗಾಯನ ಬಲಿಪೂಜೆಯನ್ನು ನೆರವೇರಿಸಿ ಪ್ರಾರ್ಥಿಸಿದರು. ಹಬ್ಬದ ಸಂದೇಶ ನೀಡಿದರು.
ವಾರ್ಷಿಕೋತ್ಸವಕ್ಕೆ ಕೊಡಗಿನ ಹಾಗೂ ವಿವಿಧ ವಲಯದ ಸಂದೇಶ ನೀಡಿದರು.
ವಾರ್ಷಿಕೋತ್ಸವಕ್ಕೆ ಕೊಡಗಿನ ಹಾಗೂ ವಿವಿಧ ವಲಯದ ಧರ್ಮಗುರುಗಳು ಆಗಮಿಸಿದ್ದರು.
ಹಬ್ಬಕ್ಕೆ ಪೂರ್ವಭಾವಿಯಾಗಿ ಮೂರು ದಿನಗಳ ಕಾಲ ವಿಶೇಷ ಪೂಜೆ, ಪ್ರಭೋದನೆ ನವೇನ ಪ್ರಾರ್ಥನೆ ಹಾಗೂ ಪ್ರತಿದಿನ ಪರಮ ಪ್ರಸಾದದ ಆರಾಧನೆ ನಡೆಯಿತು.
ಇಂದು ಸಂಜೆ ನಗರದ ಮುಖ್ಯ ಬೀದಿಗಳಲ್ಲಿ ಲೂರ್ದು ಮಾತೆಯ ಮೆರವಣಿಗೆ ನಡೆಸಲಾಯಿತು.
ಸಹಾಯಕ ಗುರು ಫಾ. ಚಾರ್ಲ್ಸ್, ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಧರ್ಮಗುರುಗಳಾದ ರೆ. ಫಾ. ಐಸಾಕ್ ರತ್ನಕರ್, ಪಿ.ಯು. ಪ್ರಾಂಶುಪಾಲರಾದ ರೆ. ಫಾ. ಮದಲೈಮುತ್ತು ಇದ್ದರು.