ಮಡಿಕೇರಿ, ಫೆ. ೧೧: ಕಲಿಕೆ ಎನ್ನುವುದು ನಿರಂತರವಾದದ್ದು, ಇದಕ್ಕೆ ಅಂತ್ಯವಿಲ್ಲ. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸಾಹಿತಿ ಪಂದ್ಯAಡ ರೇಣುಕಾ ಸೋಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ ೮೩ನೇ ಪುಸ್ತಕ ಹಾಗೂ ಪಂದ್ಯAಡ ರೇಣುಕಾ ಸೋಮಯ್ಯ ಅವರ "ಒಮ್ಮ ತೆಳ್ಚಿ ಬುಡಿ" ೨ನೇ ಕೊಡವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಲಿಯುತ್ತ ಇರುತ್ತಾನೆ. ಯಾರಲ್ಲಿ ಕಲಿಯುವ ಪ್ರಯತ್ನ, ಶ್ರಮ ಇರುತ್ತದೆಯೋ ಅವರು ಸಾಧನೆಯ ಹಾದಿ ಹಿಡಿಯುತ್ತಾರೆ.
“ಒಮ್ಮ ತೆಳ್ಚಿ ಬುಡಿ” ಕೃತಿ ಬಿಡುಗಡೆಗೊಳಿಸಿ ಮಾತನಾಡಿದ, ಮಾಜಿ ಸೈನಿಕ, ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಪ್ರಸ್ತುತ ದಿನಗ ಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳದಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಪುಸ್ತಕವನ್ನು ಎಲ್ಲರೂ ಬರೆಯು ತ್ತಾರೆ, ಆದರೆ ಅದು ಓದುವವರಿಗೆ ತಲುಪಬೇಕಾಗಿದೆ. ಪುಸ್ತಕ ಬಿಡುಗಡೆ ಜೊತೆಗೆ ಪ್ರಚಾರವು ಹೆಚ್ಚಾಗಬೇಕು, ಆ ಮೂಲಕ ಪುಸ್ತಕ ಬರೆಯು ವವರಿಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
ಮತ್ತೊಬ್ಬ ಮಾಜಿ ಯೋಧ ಹಾಗೂ ಸಮಾಜ ಸೇವಕ ನಂದಿನೆರವAಡ ಸಜನ್ ಪೂವಣ್ಣ ಮಾತನಾಡಿ, ಎಲ್ಲರನ್ನು ನಗಿಸುವ ಕಾರ್ಯ ಸುಲಭದ ಮಾತಲ್ಲ, ಅದೊಂದು ಅದ್ಭುತ ಕಲೆ. ಇದೇ ಕಾರಣಕ್ಕೆ ತನ್ನ ತಾಯಿಯ ಹೆಸರಿನಲ್ಲಿ ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೊಡವ ಪುಸ್ತಕಗಳಿಗೆ ಹೆಚ್ಚು ಪ್ರೋತ್ಸಾಹ ದೊರಕುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರು, ಮಾರ್ಚ್ ಅಂತ್ಯದೊಳಗೆ ಕೂಟದ ವತಿಯಿಂದ ಇನ್ನೂ ೧೭ ಪುಸ್ತಕಗಳು ಬಿಡುಗಡೆಯಾಗಲಿದ್ದು, ಆ ಮೂಲಕ ಒಟ್ಟು ೧೦೦ ಪುಸ್ತಕ ಗಳನ್ನು ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ೨೦೧೩ನೇ ಫೆಬ್ರವರಿ ೧೮ ರಂದು ರಚನೆಗೊಂಡ ಕೊಡವ ಮಕ್ಕಡ ಕೂಟ ಇದೀಗ ೧೨ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕೊಡವ ಸಾಹಿತ್ಯ, ಸಂಸ್ಕೃತಿ, ಪದ್ಧತಿ, ಕೊಡವ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ನಡೆಸುತ್ತಾ ಬರುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ತೆನ್ನೀರ ಪೊನ್ನಮ್ಮ ಉತ್ತಪ್ಪ ಹಾಗೂ ಪೊನ್ನಚೆಟ್ಟೀರ ಪ್ರದೀಪ್ ಉಪಸ್ಥಿತರಿದ್ದರು.