ಮಡಿಕೇರಿ, ಫೆ. ೧೨: ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದಲ್ಲಿ ನಡೆದ ಆಲ್ ಇಂಡಿಯಾ ಇಂಟರ್‌ಸಾಯಿ ಹಾಕಿ ಪಂದ್ಯಾವಳಿ-೨೦೨೪ರಲ್ಲಿ ಮಡಿಕೇರಿ ಸಾಯಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿ ಸಾಯಿ ಆಟಗಾರ್ತಿಯರು ಸಾಯಿ ಮಿಜೋರಾಂ ತಂಡವನ್ನು ನಿರ್ಣಾಯಕ ಪಂದ್ಯದಲ್ಲಿ ೬-೪ ಗೋಲುಗಳಿಂದ ಪರಾಭವಗೊಳಿಸಿ ಚಿನ್ನದ ಪದಕ ಪಡೆದುಕೊಂಡಿದೆ.

ತಂಡದ ಆಟಗಾರ್ತಿಯರಾಗಿ ಧನುಶ್ರೀ ಹೆಚ್.ಜಿ, ಅರ್ಪಿತಾ ಪಿ.ಎನ್, ಕಾವ್ಯಶ್ರೀ ಎಂ.ಡಿ, ದೇವಿಕಾ ಎನ್, ದೀಪಿಕಾ ಬಿ, ಸೀಮಾ ಎ. ಪವಾರ್, ಲೀಲಾವತಿ ಬಿ. ಕೊಪ್ಪದ್, ರಕ್ಷಿತ ಜೆ, ಶ್ರೀವಿದ್ಯ ಟಿ, ಗೆದಲಾಗಾಯತ್ರಿ, ವದ್ಮಲ ಸೌಮ್ಯ, ಶಯಾ ಕಾವೇರಮ್ಮ ಬಿ.ಎ, ಬೊಮ್ಮು ಅಂಕಿತಾ, ಮನಿಶಾ ಪೊನ್ನಮ್ಮ ಸಿ.ಡಿ, ಅಕ್ಷತಾ ಆರ್, ನಿಧಿ ನೀಲಮ್ಮ ಪಿ.ಎಸ್, ಕೀರ್ತಿಲಯ ಆರ್, ಶಯಲ್ ರೋಯಲಿನ್ ಪಿ, ಹಾಗೂ ರಶ್ಮಿ ಎಂ. ಭಾಗವಹಿಸಿದ್ದರು.

ತಂಡದ ವ್ಯವಸ್ಥಾಪಕರು ಹಾಗೂ ತರಬೇತುದಾರರಾಗಿ ಮಿನಿ ಉಣ್ಣಿರಾಜ್ ಪಾಲ್ಗೊಂಡಿದ್ದರು. ಈ ಪಂದ್ಯಾವಳಿಯಲ್ಲಿ ವಿವಿಧೆಡೆಯ ಸಾಯಿ ಕೇಂದ್ರದ ೧೦ ತಂಡಗಳು ಭಾಗವಹಿಸಿದ್ದವು.