ಮಡಿಕೇರಿ, ಫೆ. ೧೧: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ನವೋದ್ಯಮ ಯೋಜನೆಯನ್ನು ಪ್ರಸ್ತುತ ವರ್ಷದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿರುತ್ತದೆ.

ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳ/ ಘಟಕಗಳ ವಿವರಗಳು: ಹೊಸ ಕೃಷಿ ನವೋದ್ಯಮಗಳಿಗೆ ಆರ್ಥಿಕ ನೆರವು: ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ. ೫೦ ರಷ್ಟು ಸಹಾಯಧನವನ್ನು (ಕನಿಷ್ಟ ರೂ. ೫ ಲಕ್ಷದಿಂದ ಗರಿಷ್ಠ ರೂ. ೨೦ ಲಕ್ಷ ವರೆಗೆ) ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.

ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ಆರ್ಥಿಕ ನೆರವು: ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇ. ೫೦ ರಷ್ಟು ಸಹಾಯಧನವನ್ನು (ಕನಿಷ್ಟ ರೂ. ೨೦ ಲಕ್ಷದಿಂದ ಗರಿಷ್ಠ ರೂ. ೫೦ ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.

ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಸಲ್ಲಿಸಲು ಷರತ್ತುಗಳು ಅನ್ವಯಿಸುತ್ತದೆ. ಂgಡಿi sಣಚಿಡಿಣ-uಠಿ ನೋಂದಣಿ:- ಅರ್ಜಿ ಸಲ್ಲಿಸುವ ಅಗ್ರಿ ಸ್ಟಾರ್ಟ್ಅಪ್ (ಂgಡಿi sಣಚಿಡಿಣuಠಿ)ಗಳು ಪ್ರೆöÊವೇಟ್ ಲಿಮಿಟೆಡ್ ಕಂಪೆನಿ ಂಛಿಣ, ೨೦೧೩) ಅಥವಾ ಪಾರ್ಟನರ್‌ಸಿಪ್ ಫಾರ್ಮ (ರಿಜಿಸ್ಟರ್ ಅಂಡರ್ ಸೆಕ್ಷನ್ ೫೯ ಆಪ್ ದಿ ಪಾರ್ಟನರ್ ಸಿಪ್ ಆಕ್ಟ್, ೧೯೩೨) ಅಥವಾ ಲಿಮಿಟೆಡ್ ಲಯಾಬಿಲಿಟಿ ಪಾರ್ಟನರ್‌ಸಿಪ್(ದಿ ಲಿಮಿಟೆಡ್ ಲಯಾಬಿಲಿಟಿ ಪಾರ್ಟನರ್‌ಸಿಪ್ ಆ್ಯಕ್ಟ್, ೨೦೦೮)ನಡಿ ಕಡ್ಡಾಯವಾಗಿ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು.

ವ್ಯವಹಾರ ಗಳಿಕೆ (ಖಿuಡಿಟಿoveಡಿ): ನೋಂದಣಿಯಿAದ ಇಲ್ಲಿಯವರೆಗೆ ಯಾವುದೇ ಆರ್ಥಿಕ ವರ್ಷದಲ್ಲಿ ವ್ಯವಹಾರಗಳಿಕೆಯು ರೂ. ೫ ಕೋಟಿ ಮೀರುವಂತಿಲ್ಲ. ವರ್ಷಾವಧಿ: ಯಾವುದೇ ಸ್ಟರ‍್ಟ್ಅಪ್ ನೋಂದಣಿಯಿAದ ಇಲ್ಲಿಯವರೆಗೆ ೩ ವರ್ಷ ಮೀರುವಂತಿಲ್ಲ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ಪಡೆಯಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ /ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸುವುದು. ಭರ್ತಿ ಮಾಡಿದ ಅರ್ಜಿಯನ್ನು ಕಚೇರಿ ವೇಳೆಯಲ್ಲಿ ತಾ. ೨೮ ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ / ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ತಿಳಿಸಿದ್ದಾರೆ.