ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ: ಸಿದ್ದರಾಮಯ್ಯ ಲೇವಡಿ
ಬೆಂಗಳೂರು, ಫೆ. ೧೧: ಬಡವರು, ರೈತರ ಬಗ್ಗೆ ಮಾತನಾಡುವ ನೈತಿಕತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗಿಲ್ಲ. ರಾಜ್ಯಕ್ಕೆ ಅವರು ಬರಿಗೈಯಲ್ಲಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ತಿಂಗಳಾದರೂ ಬರಗಾಲದ ಬಗ್ಗೆ ಇಲ್ಲಿಯವರೆಗೆ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರ ಪರಿಹಾರ ಸಮಿತಿಯ ಅಧ್ಯಕ್ಷರು ಅವರೇ ಆಗಿದ್ದಾರೆ. ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದರು. ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. ಬರಗಾಲ ಬಂದಾಗ ಎಂಜಿನರೇಗಾ ಯೋಜನೆಯಡಿ ೧೫೦ ಮಾನವ ದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಹೆಚ್ಚಿಸಿಲ್ಲ. ಈ ಸಂಬAಧ ಬರೆದ ಎರಡು-ಮೂರು ಪತ್ರಕ್ಕೂ ಉತ್ತರ ನೀಡಿಲ್ಲ ಎಂದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಹಂಚಿಕೆ ಬಗ್ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ನೀಡಿದ ಹೇಳಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಪ್ರಸ್ತುತ ದೇವೇಗೌಡರು ಬಿಜೆಪಿ ಜತೆ ಸೇರಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಯವರು ಮಾಡಿದ ಅನ್ಯಾಯವನ್ನೆಲ್ಲ ಸರಿ ಎಂದು ದೇವೇಗೌಡರು ಹೇಳಬಾರದು ಎಂದು ಹೇಳಿದರು.
ಅರಣ್ಯ ಭೂಮಿ ಮರುವಶಕ್ಕೆ ಸಿದ್ಧತೆ: ಸಚಿವ ಈಶ್ವರ್ ಖಂಡ್ರೆ
ಮೈಸೂರು, ಫೆ. ೧೧: ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆಗೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ವಾಪಸ್ ಪಡೆಯಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಹೇಳಿದರು. ಮೈಸೂರಿನ ಅರಣ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರಣ್ಯ ಭೂಮಿಯನ್ನು ೯೯ ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ಸರಕಾರಕ್ಕೆ ಭೂಮಿಯನ್ನು ವಾಪಸ್ ನೀಡಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿಸಿಸಿಎಫ್ ಬಿ.ಪಿ. ರವಿ ಅವರು ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಭೂಮಿ ವಾಪಸ್ ನೀಡುವಂತೆ ಸಂಬAಧಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರು. ಗುತ್ತಿಗೆದಾರರು ಭೂಮಿ ವಾಪಸ್ ಕೊಡುವ ಬದಲು ೯೯ ವರ್ಷಗಳಲ್ಲ, ೯೯೯ ವರ್ಷಕ್ಕೆ ಗುತ್ತಿಗೆ ಪಡೆಯಲಾಗಿದೆ ಎಂದು ಹೇಳಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಅಡ್ವೊಕೇಟ್ ಜನರಲ್ ಜೊತೆ ಕೂಡ ಚರ್ಚೆ ನಡೆಸಿದ್ದೇನೆ. ವಿಚಾರಣೆಗಳನ್ನು ನಡೆಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಆರು ತಿಂಗಳೊಳಗೆ ವಿವಾದಗಳನ್ನು ಪರಿಹರಿಸಿ ಎಂದು ಹೇಳಿದ್ದೇನೆ ಎಂದರು.
ಗೋವುಗಳೊAದಿಗೆ ಪ್ರತಿಭಟನೆ:ಪ್ರಕರಣ ದಾಖಲು
ಬೆಂಗಳೂರು, ಫೆ. ೧೧: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ೬ ಗೋವುಗಳನ್ನು ಫ್ರೀಡಂ ಪಾರ್ಕ್ಗೆ ತಂದಿದ್ದ ಹಿನ್ನೆಲೆಯಲ್ಲಿ ೯ ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹಾಲು ಉತ್ಪಾದಕರಿಗೆ ಬಾಕಿ ಇರುವ ಸಬ್ಸಿಡಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಮಂಗಳವಾರ ಫ್ರೀಡಂ ಪಾರ್ಕ್'ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ತಮ್ಮೊಂದಿಗೆ ಗೋವುಗಳನ್ನೂ ಕರೆತಂದಿದ್ದರು. ಪ್ರತಿಭಟನೆ ತಡೆಯಲು ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ಗಳಲ್ಲಿ ಹತ್ತಿಸಲು ಮುಂದಾಗಿದ್ದರು. ಈ ವೇಳೆ ಕೆಲ ನಾಯಕರು. ಗೋವುಗಳನ್ನೂ ಕೂಡ ತಮ್ಮೊಂದಿಗೆ ಬಸ್ಗಳಲ್ಲಿ ಹತ್ತಿಸಲು ಮುಂದಾಗಿದ್ದರು. ಬಸ್ಗಳಲ್ಲಿ ಸಣ್ಣ ಬಾಗಿಲುಗಳಿರುವುದರಿಂದ ಅವುಗಳನ್ನು ಬಸ್ಗಳ ಒಳಗೆ ಹತ್ತಿಸಲು ಸಾಧ್ಯವಾಗುತ್ತಿರಲಿಲ್ಲ. ಗೋವುಗಳ ರಕ್ಷಣೆ ಮಾಡಲು ಹರಸಾಹಸಪಡಬೇಕಾಯಿತು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ದೊಡ್ಡ ಸ್ಪೀಕರ್ಗಳಲ್ಲಿ ಬರುತ್ತಿದ್ದ ಧ್ವನಿಯಿಂದಾಗಿ ಗೋವುಗಳು ಭೀತಿಗೊಳಗಾಗಿ ವಿವಿಧ ದಿಕ್ಕುಗಳಲ್ಲಿ ಓಡಲು ಪ್ರಯತ್ನಿಸುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವೇಳೆ ಗೋವುಗಳಿಗೆ ಹಿಂಸೆ ನೀಡಿದವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪ್ರಶಾಂತ್ ಅವರು ದೂರು ದಾಖಲಿಸಿದ್ದಾರೆ. ಪಿ. ರಾಜೀವ್, ಪಾಟೀಲ್ ನಡಹಳ್ಳಿ, ಹರೀಶ್, ಸಪ್ತಗಿರಿಗೌಡ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ.
ಹೊಸ ಮೈತ್ರಿಗೆ ಸ್ವಾಗತ, ಎಸ್ಎಡಿ ಜೊತೆಗೆ ಮಾತುಕತೆ-ಅಮಿತ್ ಶಾ
ನವದೆಹಲಿ, ಫೆ. ೧೧: ಭಾರತೀಯ ಜನತಾ ಪಕ್ಷ ಕುಟುಂಬ ರಾಜಕಾರಣದಲ್ಲಿ ನಂಬಿಕೆ ಹೊಂದಿಲ್ಲ. ಯಾವಾಗಲೂ ಹೊಸ ಮಿತ್ರರನ್ನು ಸ್ವಾಗತಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಲ್ಲದೇ, ಶಿರೋಮಣಿ ಅಕಾಲಿ ದಳದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಮಾರಂಭವೊAದರಲ್ಲಿ ಮಾತನಾಡಿದ ಶಾ, ಲೋಕಸಭೆ ಚುನಾವಣೆಗೂ ಮುನ್ನಾ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಬಿಜೆಪಿ ೩೭೦ ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಚುನಾವಣೆಯಲ್ಲಿ ಎನ್ಡಿಎ ೫೪೩ ರಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದರು. ಜಯಂತ್ ಸಿಂಗ್ ನೇತೃತ್ವದ ರಾಷ್ಟಿçÃಯ ಲೋಕದಳ, ಶಿರೋಮಣಿ ಅಕಾಲಿದಳ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಎನ್ಡಿಎ ಸೇರುವ ಸಾಧ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ನಾವು ಯಾವಾಗಲೂ ಹೊಸ ಮಿತ್ರರನ್ನು ಸ್ವಾಗತಿಸುತ್ತೇವೆ. ನಮ್ಮ ಸಿದ್ಧಾಂತವು ಜನಸಂಘದ ದಿನಗಳಿಂದಲೂ ಹಾಗೆಯೇ ಉಳಿದಿದೆ. ನಮ್ಮೊಂದಿಗೆ ಸೇರಲು ಇಷ್ಟಪಡುವವರು ಬರಬಹುದು ಎಂದರು.
ಈಜುಕೊಳದಲ್ಲಿ ಬಾಲಕಿ ಸಾವು:೭ ಮಂದಿ ಬಂಧನ
ಬೆAಗಳೂರು, ಫೆ. ೧೧: ಇತ್ತೀಚೆಗೆ ವರ್ತುರು ಸಮೀಪದ ಪ್ರೆಸ್ಟೀಜ್ ಲೇಕ್ಸೈಡ್ ಹೆಬಿಬಾಬ್ ಅಪಾರ್ಟ್ಮೆಂಟ್ನ ಈಜು ಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ ೧೦ ವರ್ಷದ ಬಾಲಕಿ ಮೃತಪಟ್ಟಿದ್ದ ಪ್ರಕರಣ ಸಂಬAಧ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಸೇರಿದಂತೆ ೭ ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಹೆಬಿಬಾಬ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ದೇಬಸಿಸ್ ಸಿನ್ಹಾ, ಜಾವೇದಿ ಸಫೀಕ್ ರಾಂ. ಸಂತೋಷ್ ಮಹಾರಾಣ, ಬಿಕಾಸ್ ಕುಮಾರ್ ಫೋರಿಡಾ, ಭಕ್ತ ಚರಣ್ ಪ್ರಧಾನ್, ಸುರೇಶ್ ಹಾಗೂ ಗೋವಿಂದ್ ಮಂಡಲ್ ಬಂಧಿತರಾಗಿದ್ದಾರೆ. ೨೦೨೩ರ ಡಿ. ೨೮ ರಂದು ಅಪಾರ್ಟ್ಮೆಂಟ್ ಆವರಣದ ಈಜುಕೊಳದಲ್ಲಿ ಆಟವಾಡುವಾಗ ರಾಜೇಶ್ ಕುಮಾರ್ ಧರ್ಮೆಲಾ ದಂಪತಿಯ ೧೦ ವರ್ಷದ ಪುತ್ರಿ ಮಾನ್ಯ ಮೃತಪಟ್ಟಿದ್ದಳು. ಈಜು ಕೊಳದಲ್ಲಿ ವಿದ್ಯುತ್ ಪ್ರವಹಿಸಿರುವ ಬಗ್ಗೆ ಅಪಾರ್ಟ್ಮೆಂಟ್ ನಿರ್ವಹಣೆ ಹೊತ್ತಿರುವ ಸಂಘದ ಹಾಗೂ ಎಲೆಕ್ಟಿçಶಿಯನ್ ಅವರಿಗೆ ಮಾಹಿತಿ ನೀಡಿದರೂ ಸುರಕ್ಷತಾ ಕ್ರಮ ಕೈ ಗೊಂಡಿರಲಿಲ್ಲ. ಇದರಿಂದ ತಮ್ಮ ಮಗಳ ಸಾವಾಗಿದೆ ಎಂದು ಬಾಲಕಿಯ ತಂದೆ ರಾಜೇಶ್ ಆರೋಪಿಸಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದಾಗ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ನಿರ್ಲಕ್ಷö್ಯತನಕ್ಕೆ ಸಾಕ್ಷö್ಯ ದೊರೆತಿತ್ತು. ಈ ಮಾಹಿತಿ ಆಧರಿಸಿ ಸಂಘದ ಅಧ್ಯಕ್ಷ ಸೇರಿದಂತೆ ೭ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೧೦ ಬಾರಿ ಶಾಸಕಿಯಾಗಿದ್ದ ಸುಜ್ಞಾನ ಕುಮಾರಿ ದೇವ್ ನಿಧನ
ಭುವನೇಶ್ವರ್, ಫೆ. ೧೧: ಬಿಜು ಜನತಾ ದಳ (ಬಿಜೆಡಿ) ನಾಯಕಿ ಹಾಗೂ ೧೦ ಬಾರಿ ಶಾಸಕಿಯಾಗಿದ್ದ ವಿ. ಸುಜ್ಞಾನ ಕುಮಾರಿ ದೇವ್ ಅವರು ಚೆನ್ನೆöÊನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ‘ಖಲ್ಲಿಕೋಟೆ' ರಾಜಮನೆತನಕ್ಕೆ ಸೇರಿದ ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಸುಜ್ಞಾನ ಕುಮಾರಿ ದೇವ್ ಅವರು ಮಧ್ಯರಾತ್ರಿ ೧ರ ಸುಮಾರಿಗೆ ಕೊನೆಯುಸಿ ರೆಳೆದಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಪಕ್ಷದ ಹಲವು ಮುಖಂಡರು ಶುಕ್ರವಾರ ರಾತ್ರಿಯಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ೧೯೬೩ರಲ್ಲಿ ಮೊದಲ ಬಾರಿಗೆ ಒಡಿಶಾ ವಿಧಾನಸಭೆ ಪ್ರವೇಶಿಸಿದ್ದ ದೇವ್, ಖಲ್ಲಿಕೋಟೆಯಿಂದ ಎಂಟು ಬಾರಿ ಮತ್ತು ಕವಿಸೂರ್ಯನಗರ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದರು.