ವರದಿ: ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಫೆ. ೧೧: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ-ಕಾಡಾನೆ ಸಂಘ ರ್ಷವನ್ನು ನಿವಾರಿಸಲು ಕೊಡಗು ವಿಭಾಗದ ಅರಣ್ಯ ಇಲಾಖೆ ಅನುಷ್ಠಾನ ಗೊಳಿಸಿದ ಎಲಿಫೆಂಟ್ ಸಿಗ್ನಲ್ ಬೋರ್ಡ್ ಎಂಬ ನೂತನ ತಂತ್ರಜ್ಞಾನ ಫಲಕಾರಿಯಾಗದೆ ವಿಫಲ ಗೊಂಡಿದೆ.
ಕೊಡಗು ವಿಭಾಗದ ಅರಣ್ಯ ಇಲಾಖೆಯ ಬೆಂಬಲದೊAದಿಗೆ ಸಂರಕ್ಷಣಾ ಸಂಶೋಧನಾ ಸಂಸ್ಥೆಯಾದ ‘ಎ. ರೋಚಾ ಇಂಡಿಯಾ’ ದಿಂದ ಸ್ಥಾಪಿಸಲಾದ ಆನೆಗಳ ಸಿಗ್ನಲ್ ಬೋರ್ಡ್ಗಳನ್ನು ಕೆಲವೆಡೆ ಕಾಡಾನೆಗಳ ಸಂಘರ್ಷ ವಲಯಗಳಲ್ಲಿ ಸ್ಥಾಪಿಸಲಾಗಿತ್ತು. ಈ ಮೊದಲು ಮೀನುಕೊಲ್ಲಿ ಮತ್ತು ಆನೆಕಾಡು ಅರಣ್ಯವ್ಯಾಪ್ತಿಯಲ್ಲಿರುವ ಐದು ಸಂಘರ್ಷ ವಲಯಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಆದರೆ ಕ್ರಿಯಾತ್ಮಕವಾಗಿ ಕಾಡಾನೆಗಳ ಚಲನವಲನ ಅಥವಾ ಉಪಸ್ಥಿತಿಯ ಬಗ್ಗೆ ಜನರನ್ನು ಎಚ್ಚರಿಸಬೇಕಾದ ಈ ಸೈನ್‌ಬೋರ್ಡ್ಗಳು ಕಾರ್ಯನಿರ್ವಹಿಸದೆ ಮೂಲೆ ಗುಂಪಾದAತಾಗಿವೆ.
ಅತಿಕೆAಪು (ರೆಡ್ ಲೈಟ್) ಸಂಕೇಸೈನ್ ಬೋರ್ಡ್ ಉಪಕ್ರಮ ಇನ್ನೂ ಸಂಶೋಧನೆಯ ಹಂತದಲ್ಲಿದೆಯಾದರೂ ಬನ್ನೇರುಘಟ್ಟ ಮತ್ತು ಹೊಸೂರು ಪ್ರದೇಶಗಳಲ್ಲಿನ ಮಾನವ-ಪ್ರಾಣಿ ಸಂಘರ್ಷಕ್ಕೆ ಇಂತಹ ಹಲವು ತಂತ್ರಜ್ಞಾನದ ಮೂಲಕ ಹೆಚ್ಚಿನ ಪರಿಹಾರವನ್ನು ಕಂಡುಕೊಳ್ಳುತ್ತಿದೆ. ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯದಿಂದ ಸಾಂಪ್ರದಾಯಿಕ ಆನೆ ಮಾರ್ಗಗಳ ವಿವರಗಳನ್ನು ಪಡೆದ ನಂತರ ಕೊಡಗು ಜಿಲ್ಲೆಯಲ್ಲಿ ಐದು ಆನೆ ಸಿಗ್ನಲ್ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಆನೆಗಳು ಆಗಾಗ್ಗೆ ಚಲಿಸಲು ಗುರುತಿಸಲಾದ ಆಯಕಟ್ಟಿನ ಸ್ಥಳಗಳಲ್ಲಿ ಬೋರ್ಡ್ಗಳನ್ನು ಸ್ಥಾಪಿಸಲಾಗಿದ್ದು, ವಿಶೇಷವಾಗಿ ಕಾಫಿ ಎಸ್ಟೇಟ್‌ಗಳು ಮತ್ತು ಇತರ ಸಣ್ಣ ಭೂಪ್ರದೇಶಗಳಲ್ಲಿ ಕಾಡಾನೆಗಳು ದಾಟುವೆಡೆ ಈ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆ, ಅರಣ್ಯ ಇಲಾಖೆ ಹಾಗೂ ಎನ್‌ಜಿಓ ಸಂಸ್ಥೆಯು ಗಮನಹರಿಸದ ಹಿನ್ನೆಲೆಯಲ್ಲಿ ಎಲಿಫೆಂಟ್ ಸಿಗ್ನಲ್ ಬೋರ್ಡ್ ಕೊಡಗಿನಲ್ಲಿ ವಿಫಲವಾಗಲು ಕಾರಣ ಎನ್ನಲಾಗುತ್ತಿದೆ.ತಗಳೊಂದಿಗೆ ಸ್ವಯಂಚಾಲಿತವಾದ ಈ ಬೋರ್ಡ್ಗಳು ಕಾಡಾನೆ ಇರುವಿಕೆಯ ಬಗ್ಗೆ ಪ್ರಯಾಣಿಕರಿಗೆ ಮುಂಚಿತ ವಾಗಿಯೇ ಎಚ್ಚರಿಕೆ ನೀಡುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ರೆಡ್‌ಲೈಟ್ ಬೋರ್ಡ್ಗಳಲ್ಲಿ ಕಾಡಾನೆಗಳ ಚಲನವಲನ ಪತ್ತೆ ಆದರೆ, ಲೈಟ್ ಬೆಳಗುತ್ತದೆ.
ಕಾಡಾನೆಯ ಚಲನೆ ಪತ್ತೆಯಾದ ಕೂಡಲೇ ಸಂಬAಧಪಟ್ಟ ಸಂಸ್ಥೆಗೆ ಮಾಹಿತಿ ರವಾನೆಯಾಗುವುದರ ಜೊತೆಗೆ ಎಸ್‌ಎಂಎಸ್ ಮೂಲಕ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಮೊಬೈಲ್‌ಗೂ ಮಾಹಿತಿ ರವಾನೆಯಾಗುವ ಮೂಲಕ ಕಾಡಾನೆಗಳ ಚಲನವಲನವನ್ನು ಟ್ರಾö್ಯಕ್ ಮಾಡಿ ಮೇಲ್ವಿಚಾರಣೆ ಮಾಡಬಹುದಾಗಿದೆ. ಇದು ಸೌರಚಾಲಿತ ವ್ಯವಸ್ಥೆಯಾಗಿದ್ದು, ಈ ಫಲಕಗಳು ಮತ್ತು ಸಿಗ್ನಲ್ ಬೋರ್ಡ್ಗಳನ್ನು ಸೂರ್ಯನ ಬೆಳಕು ಇಲ್ಲದ ಸಂದರ್ಭದಲ್ಲಿಯೂ ಬಳಸಬಹುದಾಗಿದೆ.
ಎರೋಚಾ ಇಂಡಿಯಾ ಸಂಸ್ಥೆ ಈ ಆನೆ ಸಿಗ್ನಲ್ ಬೋರ್ಡ್ಗಳನ್ನು ಮೊದಲು ಬನ್ನೇರುಘಟ್ಟದಲ್ಲಿ ಅಳವಡಿಸಿ ಪರೀಕ್ಷಿಸಿ ಈ ಬೋರ್ಡ್ಗಳ ಮೂಲಕ ಆನೆಗಳ ಚಲನವಲನವನ್ನು ಪತ್ತೆ ಮಾಡಿ ದಾಖಲಿಸಲಾಗಿದೆ. ಈ ಸೈನ್ ಬೋರ್ಡ್ ಉಪಕ್ರಮ ಇನ್ನೂ ಸಂಶೋಧನೆಯ ಹಂತದಲ್ಲಿದೆಯಾದರೂ ಬನ್ನೇರುಘಟ್ಟ ಮತ್ತು ಹೊಸೂರು ಪ್ರದೇಶಗಳಲ್ಲಿನ ಮಾನವ-ಪ್ರಾಣಿ ಸಂಘರ್ಷಕ್ಕೆ ಇಂತಹ ಹಲವು ತಂತ್ರಜ್ಞಾನದ ಮೂಲಕ ಹೆಚ್ಚಿನ ಪರಿಹಾರವನ್ನು ಕಂಡುಕೊಳ್ಳುತ್ತಿದೆ. ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯದಿಂದ ಸಾಂಪ್ರದಾಯಿಕ ಆನೆ ಮಾರ್ಗಗಳ ವಿವರಗಳನ್ನು ಪಡೆದ ನಂತರ ಕೊಡಗು ಜಿಲ್ಲೆಯಲ್ಲಿ ಐದು ಆನೆ ಸಿಗ್ನಲ್ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಆನೆಗಳು ಆಗಾಗ್ಗೆ ಚಲಿಸಲು ಗುರುತಿಸಲಾದ ಆಯಕಟ್ಟಿನ ಸ್ಥಳಗಳಲ್ಲಿ ಬೋರ್ಡ್ಗಳನ್ನು ಸ್ಥಾಪಿಸಲಾಗಿದ್ದು, ವಿಶೇಷವಾಗಿ ಕಾಫಿ ಎಸ್ಟೇಟ್‌ಗಳು ಮತ್ತು ಇತರ ಸಣ್ಣ ಭೂಪ್ರದೇಶಗಳಲ್ಲಿ ಕಾಡಾನೆಗಳು ದಾಟುವೆಡೆ ಈ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆ, ಅರಣ್ಯ ಇಲಾಖೆ ಹಾಗೂ ಎನ್‌ಜಿಓ ಸಂಸ್ಥೆಯು ಗಮನಹರಿಸದ ಹಿನ್ನೆಲೆಯಲ್ಲಿ ಎಲಿಫೆಂಟ್ ಸಿಗ್ನಲ್ ಬೋರ್ಡ್ ಕೊಡಗಿನಲ್ಲಿ ವಿಫಲವಾಗಲು ಕಾರಣ ಎನ್ನಲಾಗುತ್ತಿದೆ.