ಮಡಿಕೇರಿ, ಫೆ. ೧೨: ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿ ನಗರಸಭೆಯಲ್ಲಿ ಅಪಸ್ವರಗಳು ಮೊಳಗುತ್ತಿದ್ದು, ಇದೀಗ ಆಡಳಿತರೂಢ ಭಾರ ತೀಯ ಜನತಾ ಪಕ್ಷದ ಸದಸ್ಯರು ಗಳಿಂದಲೇ ಅಧ್ಯಕ್ಷರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ. ತಾ. ೧೨ ರಂದು ಆಯೋಜಿತ ವಾಗಿದ್ದ ವಿಶೇಷ ಸಭೆಗೆ ೨೩ ಸದಸ್ಯರ ಪೈಕಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರು ಹೊರತುಪಡಿಸಿ ಬಾಕಿ ಉಳಿದೆಲ್ಲ ಸದಸ್ಯರು ಸಾಮೂ ಹಿಕವಾಗಿ ಗೈರಾಗುವ ಮೂಲಕ ಬಹಿರಂಗವಾಗಿ ತಮ್ಮ ಅಸಮಾ ಧಾನವನ್ನು ಹೊರಹಾಕಿದ್ದಾರೆ.
ವಿರೋಧ ಪಕ್ಷದ ನಡುವೆ ಸೆಣಸಾಡುತ್ತಿದ್ದ ನಗರಸಭೆ ಬಿಜೆಪಿ ಸದಸ್ಯರು ಇದೀಗ ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ಕಿಡಿಕಾರುವ ಹಂತಕ್ಕೆ ತಲುಪಿದ್ದಾರೆ. ನಗರಸಭೆಯ ೨೩ ಸದಸ್ಯರುಗಳ ಪೈಕಿ ೧೬ ಮಂದಿ ಬಿಜೆಪಿ ಸದಸ್ಯರಿದ್ದು, ೫ ಮಂದಿ ಎಸ್.ಡಿ.ಪಿ.ಐ, ತಲಾ ಒಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯ ರಿದ್ದಾರೆ. ಸ್ಪಷ್ಟ ಬಹುಮತ ಸಾಧಿಸಿ ಮೊದಲ ಎರಡೂವರೆ ವರ್ಷ ಅವ ಧಿಯ ಅಧ್ಯಕ್ಷರಾಗಿ ನೆರವಂಡ ಅನಿತಾ ಪೂವಯ್ಯ ನೇಮಕಗೊಂಡು ಇದೀಗ ತಮ್ಮ ಅಧಿಕಾರವಧಿ ಮುಗಿಯುವ ಹಂತದಲ್ಲಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಭೆಗೆ ಗೈರು - ಮುಂದೂಡಿಕೆ
ಕಾಮಗಾರಿಗೆ ಅನುಮೋದನೆ ನೀಡುವ ಸಂಬAಧ ತಾ. ೧೨ ರಂದು ಮಧ್ಯಾಹ್ನ ೩.೩೦ಕ್ಕೆ ನಗರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲು ತಾ. ೭ ರಂದು ಸಭೆಯ ಸೂಚನಾ ಪತ್ರವನ್ನು ಸದಸ್ಯರಿಗೆ ರವಾನಿ ಸಲಾಗಿತ್ತು.
ಆದರೆ, ನಿಗದಿತ ಸಭೆಗೆ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರುಗಳಾದ ಮಹೇಶ್ ಜೈನಿ ಹಾಗೂ ಅರುಣ್ ಶೆಟ್ಟಿ ಹೊರತುಪಡಿಸಿ ಉಳಿದ ಸದಸ್ಯ ರೆಲ್ಲ ಸಭೆಗೆ ಗೈರಾಗಿದ್ದಾರೆ. ಇದರಿಂದ ಸಭಾಂಗಣಕ್ಕೆ ತೆರಳದೆಯೇ ಅಧ್ಯಕ್ಷರ ಕಚೇರಿಯಲ್ಲಿ ಸಭೆ ಮುಂದೂಡ ಲ್ಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಗೈರಾಗಲು ಅಧ್ಯಕ್ಷರ ವಿರುದ್ಧ ಅಸಮಾಧಾನವೇ ಕಾರಣ ಎಂದು ಕೆಲ ಸದಸ್ಯರು ‘ಶಕ್ತಿ’ಗೆ ತಿಳಿಸಿದ್ದಾರೆ.
ವರ್ಗಾವಣೆಯಾಗದ ಕಮೀಷನರ್ ಬೇಸರಕ್ಕೆ ಕಾರಣ..!
ಪೌರಾಯುಕ್ತ ವಿಜಯ ಅವರನ್ನು ಮಡಿಕೇರಿಯಿಂದ ವರ್ಗಾವಣೆ ಗೊಳಿಸುವಂತೆ ಈಗಾಗಲೇ ವಿಶೇಷ ಸಭೆ ನಡೆಸಿ ೨೩ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಆದರೆ, ಅಧ್ಯಕ್ಷರು ಯಾವುದೇ ಕ್ರಮಕ್ಕೆ ಮುಂದಾಗ ದಿರುವುದು ಪ್ರಮುಖ ಕಾರಣವಾಗಿದೆ.
ಆಡಳಿತಕ್ಕೆ ಸಹಕಾರ ನೀಡುತ್ತಿಲ್ಲ, ಸಿಬ್ಬಂದಿಗಳು-ಸದಸ್ಯರ ನಡುವೆ ವೈಮನಸ್ಸು ಸೃಷ್ಟಿಯಾಗಲು ಕಾರಣರಾಗಿದ್ದಾರೆ ಎಂಬ ಆರೋಪ ಕಮೀಷನರ್ ಮೇಲಿತ್ತು. ಈ ಹಿನ್ನೆಲೆ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಒಪ್ಪಿಗೆ ನೀಡಿ ಎಲ್ಲರ ಸಹಿಯುಳ್ಳ ಪತ್ರವನ್ನು ಅಧ್ಯಕ್ಷರಿಗೆ ಕೊಡಲಾಗಿತ್ತು. ಅನಂತರ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಗಳಾಗಿ ಪೌರಾಯುಕ್ತ ವರ್ಗಾವಣೆಗೆ ಎಲ್ಲಾ ಸದಸ್ಯರು ಪಟ್ಟು ಹಿಡಿದಿದ್ದರು.
ಇದರೊಂದಿಗೆ ಅನುಮೋದನೆ ಪಡೆಯಬೇಕಿದ್ದ ರೂ. ೧.೮೫ ಕೋಟಿ ವೆಚ್ಚದ ಕಾಮಗಾರಿಗಳ ಪೈಕಿ ಎಲ್ಲಾ ಸದಸ್ಯರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆ ಜಿಲ್ಲಾ ಬಿಜೆಪಿ ನಗರಸಭೆ ಸದಸ್ಯರನ್ನು ನಿರ್ಲಕ್ಷಿಸಿದೆ ಎಂಬ ಗಂಭೀರ ಆರೋಪವೂ ಕೇಳಿ ಬರುತ್ತಿದೆ.
ಇನ್ನೂ ಈ ಬಗ್ಗೆ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರನ್ನು ಪ್ರಶ್ನಿಸಿದರೆ, ತನ್ನ ಮನೆಯಲ್ಲಿ ವಿಶೇಷ ಕಾರ್ಯಕ್ರಮವಿರುವ ಹಿನ್ನೆಲೆ ಸಭೆಗೆ ಗೈರಾಗಿದ್ದೇನೆ ಎನ್ನುತ್ತಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಮೈಸೂರಿಗೆ ತೆರಳಿದ್ದ ಹಿನ್ನೆಲೆ ಸಭೆಗೆ ಹಾಜರಾಗಿಲ್ಲ ಎಂದು ಉತ್ತರಿಸುತ್ತಾರೆ.
ಒಟ್ಟಾರೆಯಾಗಿ ನಗರಸಭೆ ಯಲ್ಲಿ ಉದ್ಭವಿಸಿರುವ ಅಸ ಮಾಧಾನ ಅಲೆ ಮುಂದಿನ ದಿನಗಳಲ್ಲಿ ಕಡಿಮೆಯಾ ಗುತ್ತದೆಯೇ? ಎಂದು ಕಾದು ನೋಡಬೇಕಾಗಿದೆ.
ಟಿ ಹೆಚ್.ಜೆ. ರಾಕೇಶ್